ಆ್ಯಪ್ನಗರ

ಪರರ ಸುಖ ಬಯಸುವವರಿಗೆ ಉನ್ನತಿ: ಪೇಜಾವರ ಶ್ರೀ

ಮನುಷ್ಯ ಜನ್ಮಶ್ರೇಷ್ಠವಾಗಿದ್ದು, ನಮ್ಮಲ್ಲಿ ನಾವು ಆತ್ಮಾವಲೋಕನ ಮಾಡಿಕೊಂಡು ಉತ್ತಮ ವಿಚಾರಗಳನ್ನು ಮೈಗೂಡಿಸಿಗೊಂಡು ಸತ್ಪ್ರಜೆಗಳಾಗಿ ಬದುಕಬೇಕು. ಜೀವನದಲ್ಲಿ ಪರರ ಸುಖವನ್ನು ಬಯಸುವವನು ಜೀವನದಲ್ಲಿ ಶ್ರೇಯಸ್ಸು, ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಉಡುಪಿ ಪೇಜಾವರ ಮಠಾಧೀಶ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದರು.

Vijaya Karnataka 5 Jul 2019, 3:29 pm
ಮಂಗಳೂರು: ಮನುಷ್ಯ ಜನ್ಮಶ್ರೇಷ್ಠವಾಗಿದ್ದು, ನಮ್ಮಲ್ಲಿ ನಾವು ಆತ್ಮಾವಲೋಕನ ಮಾಡಿಕೊಂಡು ಉತ್ತಮ ವಿಚಾರಗಳನ್ನು ಮೈಗೂಡಿಸಿಗೊಂಡು ಸತ್ಪ್ರಜೆಗಳಾಗಿ ಬದುಕಬೇಕು. ಜೀವನದಲ್ಲಿ ಪರರ ಸುಖವನ್ನು ಬಯಸುವವನು ಜೀವನದಲ್ಲಿ ಶ್ರೇಯಸ್ಸು, ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಉಡುಪಿ ಪೇಜಾವರ ಮಠಾಧೀಶ ಶ್ರೀವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿದರು.
Vijaya Karnataka Web 4my thulabara


ಕಲ್ಕೂರ ಪ್ರತಿಷ್ಠಾನದಿಂದ ಗುರುವಾರ ಕದ್ರಿ ಕಂಬಳ ರಸ್ತೆಯ ಮಲ್ಲಿಕಾ ಬಡಾವಣೆಯ ಮಂಜು ಪ್ರಸಾದದಲ್ಲಿ ನಡೆದ ಗುರುವಂದನಾ ತುಲಾಭಾರ ಸ್ವೀಕರಿಸಿ ಆಶೀರ್ವಚನ ನೀಡಿದರು.

ತುಲಾಭಾರ, ಪಾದಪೂಜೆಗಳು ಜನರ ಸಂಪರ್ಕಕ್ಕೆ ಒಂದು ವೇದಿಕೆ. ಎಲ್ಲರೂ ಒಂದೆಡೆ ಸೇರಿ ಬಾಂಧವ್ಯ ಗಟ್ಟಿಯಾಗಿಸಲು ಇಂಥ ಕಾರ್ಯಕ್ರಮಗಳು ಪೂರಕ. ಪ್ರದೀಪ್‌ ಕುಮಾರ್‌ ಕಲ್ಕೂರ ಅವರು ಕಳೆದ ಹಲವಾರು ವರ್ಷಗಳಿಂದ ತುಲಾಭಾರ ಸೇವೆ ನಡೆಸುತ್ತಿದ್ದಾರೆ. ಭಕ್ತರು ಮಾಡುವ ಸೇವೆ ಭಗವಂತನಿಗೆ ಸಮರ್ಪಣೆ ಎಂದರು.

ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಆನುವಂಶಿಕ ಅರ್ಚಕ ಲಕ್ಷ್ಮೇನಾರಾಯಣ ಆಸ್ರಣ್ಣ, ಕಸಾಪ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ಪ್ರಮುಖರಾದ ಪ್ರೊ. ಎಂ.ಬಿ.ಪುರಾಣಿಕ್‌, ಕೆ.ಎಸ್‌.ಕಲ್ಲೂರಾಯ, ಕ್ಯಾ.ಗಣೇಶ್‌ ಕಾರ್ಣಿಕ್‌, ಮೋನಪ್ಪ ಭಂಡಾರಿ, ಸುಧಾಕರ ರಾವ್‌ ಪೇಜಾವರ, ಪ್ರಭಾಕರ ರಾವ್‌ ಪೇಜಾವರ ಮತ್ತಿತರರುು ಉಪಸ್ಥಿತರಿದ್ದರು.

ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್‌.ಪ್ರದೀಪ್‌ ಕುಮಾರ್‌ ಕಲ್ಕೂರ ಸ್ವಾಗತಿಸಿದರು. ಬೆಳಗ್ಗೆ ಶ್ರೀ ರಾಮವಿಠಲ ದೇವರ ಮಹಾ ಪೂಜೆ ನಡೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ