ಆ್ಯಪ್ನಗರ

ತುಂಬೆ ಡ್ಯಾಂ ನೀರಿನ ಮಟ್ಟ 3.57ಮೀ.

ನಗರಕ್ಕೆ ನೀರು ಪೂರೈಕೆ ಮಾಡುವ ತುಂಬೆ ವೆಂಟೆಡ್‌ ಡ್ಯಾಂನಲ್ಲಿ ಶನಿವಾರ ಸಂಜೆಯ ವೇಳೆಗೆ ನೀರಿನ ಮಟ್ಟ 3.57 ಮೀ.ಇದ್ದು, ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗುತ್ತಿದೆ.

Vijaya Karnataka 19 May 2019, 7:16 pm
ಮಂಗಳೂರು: ನಗರಕ್ಕೆ ನೀರು ಪೂರೈಕೆ ಮಾಡುವ ತುಂಬೆ ವೆಂಟೆಡ್‌ ಡ್ಯಾಂನಲ್ಲಿ ಶನಿವಾರ ಸಂಜೆಯ ವೇಳೆಗೆ ನೀರಿನ ಮಟ್ಟ 3.57 ಮೀ.ಇದ್ದು, ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗುತ್ತಿದೆ.
Vijaya Karnataka Web tumbe dam water level
ತುಂಬೆ ಡ್ಯಾಂ ನೀರಿನ ಮಟ್ಟ 3.57ಮೀ.


ನಗರದಲ್ಲಿ 4ದಿನ ಪೂರೈಕೆ 4ದಿನ ಸ್ಥಗಿತ ಆಧಾರದಲ್ಲಿ ರೇಶನಿಂಗ್‌ ನಡೆಯುತ್ತಿದ್ದು ಗುರುವಾರ 6 ಗಂಟೆಯಿಂದ ಸೋಮವಾರ 6 ಗಂಟೆವರೆಗೆ ನೀರು ಸರಬರಾಜಾಗುತ್ತಿದೆ. ಸೋಮವಾರದಿಂದ ಮತ್ತೆ 4 ದಿನಗಳ ಕಾಲ ನೀರು ಸರಬರಾಜು ಸ್ತಬ್ಧವಾಗಲಿದೆ. ಇದೇ ಮಾದರಿಯಲ್ಲಿ ಸದ್ಯದ ರೇಷನಿಂಗ್‌ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

13 ಟ್ಯಾಂಕರ್‌ಗಳ ಬಳಕೆ: ನಗರದಲ್ಲಿ ನೀರು ಸರಬರಾಜಿಗೆ ಮಹಾನಗರಪಾಲಿಕೆಯಿಂದ 13 ಟ್ಯಾಂಕರ್‌ಗಳನ್ನು ಬಳಸಲಾಗುತ್ತಿದ್ದು, ಬೆಳಗ್ಗಿನಿಂದ ರಾತ್ರಿ ವರೆಗೆ ಎಡೆಬಿಡದೆ ನೀರು ಸರಬರಾಜು ಮಾಡಲಾಗುತ್ತಿದೆ. ಆದರೂ ಬೇಡಿಕೆಯಷ್ಟು ಪ್ರದೇಶಗಳಿಗೆ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ. ಖಾಸಗಿ ಟ್ಯಾಂಕರ್‌ಗಳು ವಾಣಿಜ್ಯ ಸಂಕೀರ್ಣ, ಹೋಟೆಲ್‌ಗಳು, ಆಸ್ಪತ್ರೆ, ಫ್ಲ್ಯಾಟ್‌ಗಳಿಗೆ ರಾತ್ರಿ, ಹಗಲೆನ್ನದೆ ನೀರು ಸರಬರಾಜಿನಲ್ಲಿ ತೊಡಗಿದೆ. ಮಳೆ ಬಾರದೆ ಇದ್ದಲ್ಲಿ ಸೋಮವಾರದ ಬಳಿಕ ನೀರಿನ ಪರಿಸ್ಥಿತಿ ಮತ್ತಷ್ಟು ಹದಗೆಡುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ.

ಬೆಳ್ತಂಗಡಿಗೆ ಮಳೆ: ಶನಿವಾರ ಸಂಜೆಯ ಬಳಿಕ ಬೆಳ್ತಂಗಡಿ, ಬಂಟ್ವಾಳ, ಪುಂಜಾಲಕಟ್ಟೆ ಸುತ್ತಮುತ್ತ ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗಿದ್ದು, ಇದು ಮುಂದುವರಿದರೆ ಅನುಕೂಲವಾದೀತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಾಳೆ ಉಸ್ತುವಾರಿ ಸಭೆ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀರಿನ ಬರ ದೊಡ್ಡಮಟ್ಟದಲ್ಲಿದ್ದು ಈ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ದ.ಕ. ಉಸ್ತುವಾರಿ ಸಚಿವ ಯು.ಟಿ. ಖಾದರ್‌ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಲಿದ್ದಾರೆಂದು ತಿಳಿದು ಬಂದಿದೆ.

ಸಭೆಯಲ್ಲಿ ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಅಧಿಕಾರಿಗಳು, ಮನಪಾ ಅಧಿಕಾರಿಗಳು ಭಾಗವಹಿಸಿ ಮಳೆ ಬಾರದಿದ್ದಲ್ಲಿ ಮುಂದೆ ಕುಡಿಯುವ ನೀರು ಪೂರೈಕೆಯ ರೂಪುರೇಷೆಯ ಬಗ್ಗೆ ಚರ್ಚೆ ನಡೆಯಲಿದೆ ಎಂದು ತಿಳಿದು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ