ಆ್ಯಪ್ನಗರ

ಪುತ್ರನಿಂದ ಹಲ್ಲೆ: ತಂದೆ ಗಂಭೀರ

ತಂದೆ-ಮಗನ ನಡುವೆ ಮಾತಿನ ಚಕಮಕಿ ನಡೆದು ಪುತ್ರ ತಂದೆಗೆ ಹಲ್ಲೆ ನಡೆಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದ್ದು, ತಂದೆ ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಕ ಸುದ್ದಿಲೋಕ 16 Jan 2017, 2:37 pm

ಉಪ್ಪಿನಂಗಡಿ: ತಂದೆ-ಮಗನ ನಡುವೆ ಮಾತಿನ ಚಕಮಕಿ ನಡೆದು ಪುತ್ರ ತಂದೆಗೆ ಹಲ್ಲೆ ನಡೆಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದ್ದು, ತಂದೆ ಗಂಭೀರಾವಸ್ಥೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉಪ್ಪಿನಂಗಡಿ ಕುದ್ಲೂರು ಮನೆ ನಿವಾಸಿ ಆದಂ(55) ಹಲ್ಲೆಗೀಡಾಗಿದ್ದು, ಅವರ ಪುತ್ರ ಅಬೂಬಕ್ಕರ್‌ ಹಲ್ಲೆ ನಡೆಸಿದ್ದಾನೆ. ಭೂಮಿಯ ವಿಚಾರವಾಗಿ ಆದಂ ಹಾಗೂ ಮಗನ ನಡುವೆ ಮನಸ್ತಾಪವಿದ್ದು, ಈ ಸಂಬಂಧ ಉಪ್ಪಿನಂಗಡಿ ಬ್ಯಾಂಕ್‌ ರೋಡ್‌ನಲ್ಲಿರುವ ಮಗನ ತರಕಾರಿ ಅಂಗಡಿಗೆ ಬಂದ ಆದಂ, ಮಗನೊಂದಿಗೆ ಮಾತಿನ ಚಕಮಕಿಗಿಳಿದಿದ್ದರು. ಮಾತು ವಿಕೋಪಕ್ಕೆ ತಿರುಗಿದಾಗ ತಾಳ್ಮೆ ಕಳೆದುಕೊಂಡ ಅಬೂಬಕ್ಕರ್‌ ಅಂಗಡಿಯಲ್ಲಿದ್ದ ರಾಡ್‌ನಿಂದ ತಂದೆಯ ತಲೆಗೆ ಹೊಡೆದು ಗಾಯಗೊಳಿಸಿದ್ದಾನೆ. ಗಾಯಗೊಂಡ ಅಪ್ಪನನ್ನು ಕೂಡಲೇ ವಾಹನದಿಂದ ಹಲ್ಲೆ ನಡೆಸಿದ ಮಗನೇ ಆಸ್ಪತ್ರೆಗೆ ದಾಖಲಿಸಿದರೂ, ಗಾಯಾಳು ಆದಂ ಇನ್ನೂ ಪ್ರಜ್ಞಾಶೂನ್ಯ ಸ್ಥಿತಿಯಲ್ಲಿಯೇ ಇದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ