ಆ್ಯಪ್ನಗರ

ಕಂಬಳದ ಉಸೇನ್ ಬೋಲ್ಟ್ ಮತ್ತೆ ದಾಖಲೆ, 8.96 ಸೆಕೆಂಡ್‌ಗಳಲ್ಲಿ 100 ಮೀಟರ್‌ ಓಟ

2020ರಲ್ಲಿ ಶ್ರೀನಿವಾಸ್ ಗೌಡ ಓಡಿಸಿದ ಕೋಣಗಳು 9.55ಸೆಕೆಂಡ್‌ನಲ್ಲಿ ಓಡುವ ಮೂಲಕ ದಾಖಲೆಯಾಗಿತ್ತು. ಜ.30ರಂದು ಹೊಕ್ಕಾಡಿಗೋಳಿಯಲ್ಲಿ ನಡೆದ ಈ ಋತುವಿನ ಮೊದಲ ಕಂಬಳದಲ್ಲಿ ಶ್ರೀನಿವಾಸ ಗೌಡ ಓಟದ ವೇಳೆ ಕರೆಯಲ್ಲೇ ಬಿದ್ದು ಗಾಯಗೊಂಡು ಆ ಕಂಬಳದಿಂದ ಹಿಂದೆ ಸರಿದಿದ್ದರು.

Vijaya Karnataka Web 20 Mar 2021, 6:48 pm
ಮಂಗಳೂರು: ಕಂಬಳದ ಉಸೇನ್ ಬೋಲ್ಟ್ ಎಂದೇ ಖ್ಯಾತಿ ಪಡೆದ ಶ್ರೀನಿವಾಸ ಗೌಡ ವೇಣೂರಿನ ಪೆರ್ಮುಡದಲ್ಲಿ ನಡೆದ ಸೂರ್ಯ-ಚಂದ್ರ ಜೋಡುಕರೆ ಕಂಬಳದಲ್ಲಿ 100 ಮೀಟರ್ ಓಟವನ್ನು 8.96 ಸೆಕೆಂಡ್‌ನಲ್ಲಿ ಕ್ರಮಿಸುವ ಮೂಲಕ ಹೊಸ ದಾಖಲೆ ಮಾಡಿದ್ದಾರೆ.
Vijaya Karnataka Web ಕಂಬಳ
ಕಂಬಳ


ನೇಗಿಲು ಹಿರಿಯ ವಿಭಾಗದಲ್ಲಿ ಇರುವೈಲು ಪಾಣಿಲ ಬಾಡ ಪೂಜಾರಿಯವರ ಹೆರ್ಮುಡೆ ಮೋಡ ಮತ್ತು ಪಕ್ಕು ಕೋಣವನ್ನು ಓಡಿಸಿದ ಶ್ರೀನಿವಾಸ ಗೌಡ ಅವರು 125 ಮೀಟರ್ ದೂರವನ್ನು ಕೇವಲ 11.21 ಸೆಕೆಂಡ್‌ನಲ್ಲಿ ಗುರಿ ತಲುಪಿದರು.

ಇದನ್ನು 100 ಮೀಟರ್‌ಗೆ ಹೋಲಿಸಿದಾಗ 8.96 ಸೆಕೆಂಡ್‌ನಲ್ಲಿ ಗುರಿ ತಲುಪಿರುವುದು ಸ್ಪಷ್ಟವಾಗಿದೆ. ಚಾನ್ಸ್ ಸುತ್ತು ವಿಭಾಗದಲ್ಲಿ ಅಟೋ ಸ್ಟಾರ್ಟ್ ಮತ್ತು ಸೆನ್ಸಾರ್ ಮೂಲಕವೇ ನಿರ್ಧರಿಸಲಾಗಿದ್ದು, ಇದರಿಂದ ಹೊಸ ದಾಖಲೆಗೆ ಸೇರ್ಪಡೆಯಾಗಿದೆ.

ವರ್ಷದೊಳಗೆ ಮುರಿದ ದಾಖಲೆ

2021ರ ಫೆ.6ರಂದು ನಡೆದ ಐಕಳ-ಕಾಂತಾಬಾರೆ ಬೂದಾಬಾರೆ ಕಂಬಳದಲ್ಲಿ ಬೈಂದೂರಿನ ವಿಶ್ವನಾಥ್ ಅವರು ಓಡಿಸಿದ ಕೋಣಗಳು 100 ಮೀ. ಓಟವನ್ನು 9.15 ಸೆಕೆಂಡ್‌ನಲ್ಲಿ ತಲುಪುವ ಮೂಲಕ ದಾಖಲೆ ಬರೆದಿದ್ದವು.

ಈ ಹಿಂದೆ ಅಕ್ಕೇರಿ ಸುರೇಶ್ ಶೆಟ್ಟಿ 100 ಮೀ. ದೂರವನ್ನು 9.37 ಸೆ., ಶ್ರೀನಿವಾಸ್ ಗೌಡ 9.55 ಸೆ. ಮತ್ತು ಇರ್ವತ್ತೂರು ಆನಂದ್ 9.57 ಸೆಕೆಂಡ್‌ನಲ್ಲಿ ಕ್ರಮಿಸುವ ಮೂಲಕ ದಾಖಲೆ ಮಾಡಿದ್ದರು. ಈ ಎಲ್ಲ ದಾಖಲೆಯನ್ನು ಪುಡಿ ಮಾಡಿ ಶ್ರೀನಿವಾಸ ಗೌಡ ಹೊಸ ದಾಖಲೆ ಸೃಷ್ಟಿಸಿದ್ದಾರೆ.

2020ರಲ್ಲಿ ಶ್ರೀನಿವಾಸ್ ಗೌಡ ಓಡಿಸಿದ ಕೋಣಗಳು 9.55ಸೆಕೆಂಡ್‌ನಲ್ಲಿ ಓಡುವ ಮೂಲಕ ದಾಖಲೆಯಾಗಿತ್ತು. ಜ.30ರಂದು ಹೊಕ್ಕಾಡಿಗೋಳಿಯಲ್ಲಿ ನಡೆದ ಈ ಋತುವಿನ ಮೊದಲ ಕಂಬಳದಲ್ಲಿ ಶ್ರೀನಿವಾಸ ಗೌಡ ಓಟದ ವೇಳೆ ಕರೆಯಲ್ಲೇ ಬಿದ್ದು ಗಾಯಗೊಂಡು ಆ ಕಂಬಳದಿಂದ ಹಿಂದೆ ಸರಿದಿದ್ದರು.

ಮುಂದಿನ ವಾರದಿಂದ ಮತ್ತೆ ಕಂಬಳ ಕರೆಗೆ ಇಳಿದ ಶ್ರೀನಿವಾಸಗೌಡ ಪದಕ ಬಾಚುತ್ತಲೇ ಮತ್ತೊಂದು ದಾಖಲೆ ಬರೆದಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ