ಆ್ಯಪ್ನಗರ

ಹಿಂಜಾವೇ ಮುಖಂಡನ ಕೊಲೆ ಪ್ರಕರಣದ ಆರೋಪಿಗಳಿಗೆ ನ್ಯಾಯಾಂಗ ಬಂಧನ

ಗಣೋಶೋತ್ಸವ ಚಪ್ಪರದೊಳಗೆ ಕಾರ್ತಿಕ್‌ನನ್ನು ಕೊಲೆಗೈಯ್ಯಲಾಗಿತ್ತು.

Vijaya Karnataka 7 Sep 2019, 3:47 pm
ಪುತ್ತೂರು: ಹಿಂದೂ ಜಾಗರಣ ವೇದಿಕೆಯ ಕಾರ್ಯದರ್ಶಿ ಕಾರ್ತಿಕ್‌ ಸುವರ್ಣ(27) ಅವರನ್ನು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತರಾಗಿರುವ ನಾಲ್ವರು ಆರೋಪಿಗಳಿಗೆ ಪುತ್ತೂರು ನ್ಯಾಯಾಲಯ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
Vijaya Karnataka Web kartik


ಕೊಲೆ ಆರೋಪಿಗಳಾದ ಸಂಪ್ಯದ ಚರಣ್‌ ರಾಜ್‌ ರೈ(26), ಸಹೋದರ ಕಿರಣ್‌ ರೈ(36), ಮಂಗಳೂರು ಉಳ್ಳಾಲಬೈಲು ನಿವಾಸಿ ಪ್ರೀತೇಶ್‌ ಶೆಟ್ಟಿ(28), ಮತ್ತು ಆರೋಪಿಗಳಿಗೆ ಆಶ್ರಯ ನೀಡಿದ್ದ ಮಂಗಳೂರು ಅತ್ತಾವರ ನಿವಾಸಿ ಸ್ಟೀವನ್‌ ಮೊಂತೇರೊ ಅವರನ್ನು ಶುಕ್ರವಾರ ಪುತ್ತೂರಿನಲ್ಲಿನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

ಸೆ. 21ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಕೋರ್ಟ್‌ ಆದೇಶ ನೀಡಿದೆ. ಇದಕ್ಕೂ ಮುನ್ನ ಪೊಲೀಸರು ಆರೋಪಿಗಳನ್ನು ಕೋರ್ಟ್‌ ಆವರಣಕ್ಕೆ ಕರೆತಂದರು.

ಸೆ.3ರಂದು ಮಂಗಳವಾರ ಮಧ್ಯರಾತ್ರಿ ಪುತ್ತೂರು ನಗರದ ಹೊರ ವಲಯದ ಸಂಪ್ಯದಲ್ಲಿಗಣೇಶೋತ್ಸವ ಚಪ್ಪರದಲ್ಲಿಯಕ್ಷಗಾನ ವೀಕ್ಷಿಸುತ್ತಿದ್ದ ಸಂದರ್ಭ ಕಾರ್ತಿಕ್‌ ಸುವರ್ಣ ಅವರನ್ನು ಎದೆಗೆ ಚೂರಿ ಇರಿದು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಸಂಬಂಧ ನಾಲ್ವರು ಆರೋಪಿಗಳನ್ನು ಗುರುವಾರ ಬಂಧಿಸಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ