ಆ್ಯಪ್ನಗರ

ಪುತ್ತೂರು ಗ್ಯಾಂಗ್‌ರೇಪ್‌ ಸಂತ್ರಸ್ತೆಗೆ 4.12 ಲಕ್ಷ ಪರಿಹಾರ

ಶಿಕ್ಷಕರ ಜತೆ ಹೆತ್ತವರೂ ತಮ್ಮ ಮಕ್ಕಳ ಬಗ್ಗೆ ಜಾಗ್ರತೆ ವಹಿಸಬೇಕು. ಹೆಣ್ಣು ಮಕ್ಕಳ ಜತೆ ಗಂಡು ಮಕ್ಕಳ ಬಗ್ಗೆಯೂ ನಿಗಾ ವಹಿಸಬೇಕು ಎಂದು ಮಹಿಳಾ ಆಯೋಗದ ಅಧಿಕಾರಿಯೊಬ್ಬರು ಮನವಿ ಮಾಡಿದರು.

Vijaya Karnataka Web 8 Jul 2019, 10:09 pm
ಮಂಗಳೂರು: ಪುತ್ತೂರಿನಲ್ಲಿ ಸಹಪಾಠಿಗಳಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿರುವ ಖಾಸಗಿ ಕಾಲೇಜಿನ ವಿದ್ಯಾರ್ಥಿನಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ದೌರ್ಜನ್ಯ ಕಾಯಿದೆಯಡಿ 4.12 ಲಕ್ಷ ರೂ. ಪರಿಹಾರ ನೀಡಲಾಗುತ್ತಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್ ಹೇಳಿದರು.
Vijaya Karnataka Web ಅತ್ಯಾಚಾರ
ಅತ್ಚಾಚಾರ


ಪರಿಹಾರದ ಚೆಕ್ ಸಿದ್ಧಗೊಂಡಿದೆ. ಅರ್ಧ ಮೊತ್ತ ಈಗ ನೀಡಲಿದ್ದು, ಉಳಿದ ಮೊತ್ತ ಚಾರ್ಜ್‌ಶೀಟ್ ಹಾಕಿದ ಬಳಿಕ ನೀಡಲಾಗುವುದು. ಸಂತ್ರಸ್ತ ಪರಿಹಾರ ಯೋಜನೆ ಮೂಲಕ ಮೊತ್ತ ಕೊಡಿಸಲು ಪ್ರಯತ್ನಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ತಿಳಿಸಿದರು.

ಬೆಳಗ್ಗೆ ಎಸ್ಪಿ ಜತೆ ಮಾತನಾಡಿ ಮಾಹಿತಿ ಸಂಗ್ರಹಿಸಿದ ಬಳಿಕ ಪುತ್ತೂರಿನಲ್ಲಿ ಸಂತ್ರಸ್ತ ವಿದ್ಯಾರ್ಥಿನಿ ಮನೆಗೆ ತೆರಳಿ, ಆಕೆ ಮತ್ತು ಆಕೆಯ ತಾಯಿ ಹಾಗೂ ಕಾಲೇಜಿಗೆ ಭೇಟಿ ನೀಡಿ ಶಿಕ್ಷಕರ ಜತೆ ಮಾತನಾಡಿತ್ತೇನೆ. ವಿದ್ಯಾರ್ಥಿನಿ ಮತ್ತು ತಾಯಿಗೆ ಧೈರ್ಯ ಮತ್ತು ಸ್ಥೈರ್ಯ ನೀಡಿ ಬಂದಿದ್ದೇನೆ ಎಂದು ಅವರು ಹೇಳಿದರು.

ಆ ಯುವತಿ ಸಣ್ಣದಿರುವಾಗಲೇ ತಂದೆ ಬಿಟ್ಟು ಹೋಗಿದ್ದರಿಂದ ತಾಯಿ ಬೀಡಿ ಕಟ್ಟಿ ಇಬ್ಬರು ಮಕ್ಕಳನ್ನು ಸಾಕಿದ್ದರು. ಸ್ನೇಹಮಯಿಯಾದ ವಿದ್ಯಾರ್ಥಿನಿಯನ್ನು ಸಹಪಾಠಿಗಳು ದುರ್ಬಳಕೆ ಮಾಡಿದ್ದು, ಏ.3ರಂದು ಘಟನೆ ನಡೆದ ಬಳಿಕ ತನಗೆ ಹಾಗೂ ತಾಯಿಗೆ ತೊಂದರೆ ಆಗಬಹುದು ಎಂದು ಸುಮ್ಮನಿದ್ದಳು. ಘಟನೆ ಬಳಿಕ ಜರ್ಜರಿತಳಾಗಿದ್ದ ಆಕೆಗೆ ಕೌನ್ಸಿಂಗ್ ನೀಡಲಾಗಿದೆ ಎಂದರು.

ಮಗಳಿಗೆ ಶಿಕ್ಷಣ ಕೊಡಿಸಿ ಅಧಿಕಾರಿಯನ್ನಾಗಿ ಮಾಡಬೇಕು ಎಂದು ಬಯಸಿದ್ದ ತಾಯಿ, ಈ ಘಟನೆಯಿಂದ ರೋಸಿ ಹೋಗಿದ್ದರು. ಅವರಿಗೆ ಧೈರ್ಯ ನೀಡಿದ್ದು, ವಿದ್ಯಾರ್ಥಿನಿಯನ್ನು ಇಲ್ಲಿ ಅಥವಾ ಬೇರೆ ಜಿಲ್ಲೆಯಲ್ಲಿ ಉತ್ತಮ ಶಿಕ್ಷಣ ನೀಡಿ, ಅಧಿಕಾರಿಯನ್ನಾಗಿಯೇ ಮಾಡಲು ಮಹಿಳಾ ಆಯೋಗ ಎಲ್ಲ ನೆರವು ನೀಡಲಿದೆ ಎಂದು ಶ್ಯಾಮಲಾ ಭರವಸೆ ನೀಡಿದ್ದಾರೆ.

ಕಾಲೇಜಿನಲ್ಲಿ ಈಗ ಮೊಬೈಲ್ ಬಳಕೆಗೆ ನಿಷೇಧ ಹೇರಲಾಗಿದ್ದು, ಲ್ಯಾಂಡ್ ಫೋನ್ ಬಳಕೆಗೆ ವ್ಯವಸ್ಥೆ ಮಾಡಲಾಗಿದೆ. ಕೆಲವು ವಿದ್ಯಾರ್ಥಿಗಳು ಪಕ್ಕದ ಗೂಡಂಗಡಿಯಲ್ಲಿ ಮೊಬೈಲ್ ಇಟ್ಟು ಬರುವ ಮಾಹಿತಿ ಸಿಕ್ಕಿದ್ದು, ಅಲ್ಲಿಗೆ ದಾಳಿ ನಡೆಸಲು ಪೊಲೀಸರಿಗೆ ಸೂಚನೆ ಕೊಡಲಾಗಿದೆ. ಕಾಲೇಜಿನಲ್ಲಿ ಐದು ಮಂದಿ ಶಿಕ್ಷಕರ ಆಂತರಿಕ ಸಮಿತಿ ಕ್ರಮ ಕೈಗೊಳ್ಳಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ