ಆ್ಯಪ್ನಗರ

ಮಹಿಳಾ ಪೈಲಟ್ ಅತಿ ಮದ್ಯಪಾನ: ವಿಮಾನ ಟೇಕಾಫ್ ವಿಳಂಬ

ಮಂಗಳೂರಿನಿಂದ ದುಬೈಗೆ 180 ಮಂದಿ ಪ್ರಯಾಣಿಕರನ್ನು ಹೊತ್ತು ಮಂಗಳವಾರ ಮಧ್ಯರಾತ್ರಿ ಹೊರಡಬೇಕಿದ್ದ ಸ್ಪೈಸ್‌ ಜೆಟ್‌ ವಿಮಾನದ ಮಹಿಳಾ ಪೈಲಟ್‌ ಮದ್ಯಪಾನ ಮಾಡಿ ಸಿಕ್ಕಿಬಿದ್ದ ಕಾರಣ ವಿಮಾನ ತಡವಾಗಿ ಟೇಕ್‌ ಆಫ್ ಆದ ಘಟನೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.

Vijaya Karnataka 18 Jan 2018, 1:43 pm
ಮಂಗಳೂರು: ಮಂಗಳೂರಿನಿಂದ ದುಬೈಗೆ 180 ಮಂದಿ ಪ್ರಯಾಣಿಕರನ್ನು ಹೊತ್ತು ಮಂಗಳವಾರ ಮಧ್ಯರಾತ್ರಿ ಹೊರಡಬೇಕಿದ್ದ ಸ್ಪೈಸ್‌ ಜೆಟ್‌ ವಿಮಾನದ ಮಹಿಳಾ ಪೈಲಟ್‌ ಮದ್ಯಪಾನ ಮಾಡಿ ಸಿಕ್ಕಿಬಿದ್ದ ಕಾರಣ ವಿಮಾನ ತಡವಾಗಿ ಟೇಕ್‌ ಆಫ್ ಆದ ಘಟನೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
Vijaya Karnataka Web women pilot drunken flight take off delay
ಮಹಿಳಾ ಪೈಲಟ್ ಅತಿ ಮದ್ಯಪಾನ: ವಿಮಾನ ಟೇಕಾಫ್ ವಿಳಂಬ


ಕುಡಿದು ವಿಮಾನ ಚಲಾಯಿಸಲು ಬಂದ ಮಹಿಳಾ ಪೈಲಟ್‌‌ನ್ನು ಕರ್ತವ್ಯ ನಿರ್ವಹಿಸಲು ತೆರಳುವ ಮೊದಲು ವೈದ್ಯಾಧಿಕಾರಿ ತಪಾಸಣೆ ನಡೆಸಿದಾಗ ಈ ಅಂಶ ಬೆಳಕಿಗೆ ಬಂದಿದೆ. ಈ ಕಾರಣದಿಂದ ವಿಮಾನ ಟೇಕ್ ಆಫ್ ಆಗಲು ಸುಮಾರು ಐದು ತಾಸು ವಿಳಂಬ ಅಗಿದ್ದು, ಪ್ರಯಾಣಿಕರು ನಿಲ್ದಾಣದಲ್ಲೇ ಕಾಯುವ ಸ್ಥಿತಿ ನಿರ್ಮಾಣ ಆಗಿತ್ತು. ಬಳಿಕ ಬದಲಿ ಪೈಲಟ್‌ನ ವ್ಯವಸ್ಥೆಯೊಂದಿಗೆ ವಿಮಾನ ಟೇಕ್‌ ಆಫ್ ಆಗಿದೆ.

ಮಿತಿ ಮೀರಿ ಮದ್ಯ ಸೇವನೆ ಮಾಡಿದ್ದ 35 ವರ್ಷದ ಟರ್ಕಿ ದೇಶದ ಮಹಿಳಾ ಪೈಲಟ್‌ ವಿರುದ್ಧ ನಿಯಮಾನುಸಾರ ಕ್ರಮ ಜರಗಿಸಲು ಸಂಬಂಧಪಟ್ಟ ವಿಮಾನ ಕಂಪನಿಯ ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ