ಆ್ಯಪ್ನಗರ

ಮಂಗಳೂರು: ಮಾಸ್ಕ್‌ ಇಂಡಿಯಾ ಪರಿಕಲ್ಪನೆಗೆ ಪೂರಕ, ಮಹಿಳಾ ತಂಡದಿಂದ ಹತ್ತಿ ಬಟ್ಟೆ ಮಾಸ್ಕ್ ತಯಾರಿ!

ಟೈಮ್ಸ್‌ ಆಫ್‌ ಇಂಡಿಯಾದ 'ಮಾಸ್ಕ್‌ ಇಂಡಿಯಾ' ಪರಿಕಲ್ಪನೆಗೆ ಪೂರಕವಾಗಿ ನಗರದ ಬೆಳಕು ಸಂಜೀವಿನಿ ಒಕ್ಕೂಟ ತಂಡ ಹತ್ತಿ ಬಟ್ಟೆಯಿಂದ ಮಾಸ್ಕ್‌ ತಯಾರಿಸುತ್ತಿದೆ. ಅಲ್ಲಿ ಮೊದಲಿಗೆ ಬಟ್ಟೆ ಚೀಲ ತಯಾರು ಮಾಡಲಾಗುತ್ತಿತ್ತು. ಇದೀಗ ಲಾಕ್‌ಡೌನ್‌ ಆಗಿರುವ ಕಾರಣ ಬಟ್ಟೆ ಚೀಲ ಬದಲಾಗಿ ಹತ್ತಿ ಬಟ್ಟೆಯ ಮಾಸ್ಕ್‌ ತಯಾರಿಸುತ್ತಿದ್ದಾರೆ.

Vijaya Karnataka Web 10 Apr 2020, 6:34 am
ಮಂಗಳೂರು: ಟೈಮ್ಸ್‌ ಆಫ್‌ ಇಂಡಿಯಾದ 'ಮಾಸ್ಕ್‌ ಇಂಡಿಯಾ' ಪರಿಕಲ್ಪನೆಗೆ ಪೂರಕವಾಗಿ ಬಜಪೆ ಸಮೀಪದ ಕಂದಾವರ ಗ್ರಾಮದ ಸೌಹಾರ್ದ ನಗರದ ಬೆಳಕು ಸಂಜೀವಿನಿ ಒಕ್ಕೂಟ ತಂಡ ಹತ್ತಿ ಬಟ್ಟೆಯಿಂದ ಮಾಸ್ಕ್‌ ತಯಾರಿಸುವ ಕಾರ್ಯಕ್ಕೆ ಮುಂದಾಗಿದ್ದು, ಇತರರಿಗೆ ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ.
Vijaya Karnataka Web masks


ಸುಭಾಷಿತ ಮಹಿಳಾ ಮಂಡಳಿಯ ಅಧ್ಯಕ್ಷೆ ಸುಲೋಚನಾ ನೇತೃತ್ವದಲ್ಲಿ ಟೈಲರಿಂಗ್‌ ವೃತ್ತಿ, ಟೈಲರಿಂಗ್‌ ತರಗತಿ ನಡೆಸಲಾಗುತ್ತಿದ್ದು, ಅಲ್ಲಿ ಬಟ್ಟೆ ಚೀಲ ತಯಾರು ಮಾಡಲಾಗುತ್ತಿತ್ತು. ಇದೀಗ ಲಾಕ್‌ಡೌನ್‌ ಆಗಿರುವ ಕಾರಣ ಬಟ್ಟೆ ಚೀಲ ಬದಲಾಗಿ ಹತ್ತಿ ಬಟ್ಟೆಯ ಮಾಸ್ಕ್‌ ತಯಾರಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ.

ಸದ್ಯ ಬಟ್ಟೆಯ ಕೊರತೆ ಇರುವ ಕಾರಣ ನಿಗದಿತ ಪ್ರಮಾಣದಲ್ಲಿ ಮಾಸ್ಕ್‌ ಹೊಲಿದು ಪೂರೈಕೆ ಮಾಡಲಾಗುತ್ತಿದೆ. ರಘುರಾಮ ರಾವ್‌ ನೇತೃತ್ವದಲ್ಲಿ ಮಂಗಳೂರಿನಲ್ಲಿ ನಡೆಯುವ ಸಾವಯವ ಸಂತೆಯಲ್ಲಿಈ ಮಾಸ್ಕ್‌ ಕೇವಲ 10 ರೂ.ಗೆ ಮಾರಾಟ ಮಾಡಲಾಗುತ್ತಿದ್ದು, ಮುಂದೆ ಹತ್ತಿ ಬಟ್ಟೆ ಸಿಕ್ಕಿದರೆ ಬೇಡಿಕೆಗೆ ತಕ್ಕಂತೆ ಮಾಸ್ಕ್‌ ಹೊಲಿದು ವಿತರಿಸುವ ಕೆಲಸ ಮಾಡಲಾಗುತ್ತದೆ ಎಂದು ಸುಲೋಚನಾ ತಿಳಿಸಿದ್ದಾರೆ.

ಲಾಕ್‌ಡೌನ್‌ ಆಗಿರುವ ಕಾರಣ ಎಲ್ಲರೂ ಕೆಲಸ ಇಲ್ಲದೆ ಮನೆಯಲ್ಲೇ ಉಳಿದಿದ್ದಾರೆ. ಈ ಹಂತದಲ್ಲಿ ಜನಸಾಮಾನ್ಯರಿಗೆ ಮಾಸ್ಕ್‌ ಸಿಗದೆ ಸಮಸ್ಯೆ ಆಗಬಾರದು ಹಾಗೂ ಎಲ್ಲರಿಗೂ ಕೈಗೆಟಕುವ ಬೆಲೆಯಲ್ಲಿ ಮಾಸ್ಕ್‌ ದೊರೆಯುವಂತಾಗಬೇಕು ಎಂಬ ನಿಟ್ಟಿನಲ್ಲಿಈ ಚಿಂತನೆ ನಡೆಸಿ ಹತ್ತಿ ಬಟ್ಟೆಯ ಮಾಸ್ಕ್‌ ಹೊಲಿಯಲು ಪ್ರೇರಣೆ ನೀಡಿದ್ದೇವೆ. ಮುಂದೆ ಇನ್ನಷ್ಟು ಹೆಚ್ಚು ತಯಾರಿಸಿ ವಿತರಿಸುವ ಕೆಲಸ ಮಾಡಲಿದ್ದೇವೆ ಎಂದು ಅದ್ಯಪಾಡಿ ದೇವಸ್ಥಾನದ ಟ್ರಸ್ಟಿಯೂ ಆಗಿರುವ ರಘುರಾಮ ರಾವ್‌ ತಿಳಿಸಿದ್ದಾರೆ.

ಶುದ್ಧ ಹತ್ತಿ ಬಟ್ಟೆ

ಸರ್ಜಿಕಲ್‌ ಮಾಸ್ಕ್‌ ಧರಿಸುವುದು ಸೂಕ್ತವಲ್ಲಎಂಬ ವೈದ್ಯರ ಮಾಹಿತಿ ಆಧಾರದಲ್ಲಿ ಶುದ್ಧ ಹತ್ತಿ ಬಟ್ಟೆಯಲ್ಲೇ ಮಾಸ್ಕ್‌ ತಯಾರಿಸುವ ನಿರ್ಧಾರ ಕೈಗೊಂಡಿದ್ದೇವೆ. ಇದಕ್ಕೆ ಇಲ್ಯಾಸ್ಟಿಕ್‌ ಕೂಡ ಬಳಸದೆ ಮುಖಕ್ಕೆ ಕಟ್ಟಲು ಬಟ್ಟೆಯ ಬಳ್ಳಿಯನ್ನೇ ಬಳಸುತ್ತಿದ್ದೇವೆ. ಈ ಮಾಸ್ಕ್‌ನ್ನು ಸುಲಭದಲ್ಲಿ ತೊಳೆಯಬಹುದಾಗಿದ್ದು, ಒಂದಕ್ಕಿಂತ ಹೆಚ್ಚು ಬಾರಿ ಬಳಸಬಹುದಾಗಿದೆ ಎಂದು ರಘುರಾಮ್‌ ರಾವ್‌ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ