ಆ್ಯಪ್ನಗರ

‘ಯಕ್ಷ ಗಾನದ ಅಂತರಾಳ ತಿಳಿಸುವ ಕಮ್ಮಟ ಆಗಬೇಕು ’

ಯಕ್ಷ ಗಾನದ ಅಂತರಾಳವನ್ನು ತಿಳಿಸುವ ಕಮ್ಮಟಗಳಾಗಬೇಕು. ಯಕ್ಷ ಗಾನ ಕಲೆಯ ಮಹತ್ವವನ್ನು ತಿಳಿಸುವ ಪ್ರಾಮಾಣಿಕ ಪ್ರಯತ್ನ ನಿರಂತರವಾಗಿ ನಡೆಯಬೇಕು ಇದರ ಕಲ್ಪನೆಯಲ್ಲಿ ಸಿರಿಬಾಗಿಲು ಪ್ರತಿಷ್ಠಾನದ ಪ್ರಯತ್ನ ಶ್ಲಾಘನೀಯ ಎಂದು ಕಸಾಪದ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.

Vijaya Karnataka 21 Aug 2018, 2:57 pm
ಕಿನ್ನಿಗೋಳಿ : ಯಕ್ಷ ಗಾನದ ಅಂತರಾಳವನ್ನು ತಿಳಿಸುವ ಕಮ್ಮಟಗಳಾಗಬೇಕು. ಯಕ್ಷ ಗಾನ ಕಲೆಯ ಮಹತ್ವವನ್ನು ತಿಳಿಸುವ ಪ್ರಾಮಾಣಿಕ ಪ್ರಯತ್ನ ನಿರಂತರವಾಗಿ ನಡೆಯಬೇಕು ಇದರ ಕಲ್ಪನೆಯಲ್ಲಿ ಸಿರಿಬಾಗಿಲು ಪ್ರತಿಷ್ಠಾನದ ಪ್ರಯತ್ನ ಶ್ಲಾಘನೀಯ ಎಂದು ಕಸಾಪದ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು ಹೇಳಿದರು.
Vijaya Karnataka Web yakshagana become a workshop in heart
‘ಯಕ್ಷ ಗಾನದ ಅಂತರಾಳ ತಿಳಿಸುವ ಕಮ್ಮಟ ಆಗಬೇಕು ’


ಪಾವಂಜೆ ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ದೇವಳದ ಶಾರದ್ವತ ಯಜ್ಞಾಂಗಣದಲ್ಲಿ ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದ ಸಂಯೋಜನೆಯಲ್ಲಿ ಹರಿದಾಸ ಲಕ್ಷ್ಮೀನಾರ್ಣಪ್ಪಯ್ಯ ಸ್ಮಾರಕ ಕಲಾಪೋಷಕ ವೇದಿಕೆಯ ಸಹಕಾರದಲ್ಲಿ ನಡೆದ ಯಕ್ಷ ಕಾವ್ಯಾಂತರಂಗ -1ಎನ್ನುವ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷ ತೆ ವಹಿಸಿ ಮಾತನಾಡಿದರು.

ತೆಂಕುತಿಟ್ಟಿನ ಹಿರಿಯ ಭಾಗವತ ಅಗರಿ ರಘುರಾಮ ಭಾಗವತರು ಕಾರ್ಯಕ್ರಮ ಉದ್ಘಾಟಿಸಿದರು. ಶ್ರೀ ಜ್ಞಾನಶಕ್ತಿ ಸುಬ್ರಹ್ಮಣ್ಯ ಸ್ವಾಮಿ ದೇವಳದ ಧರ್ಮದರ್ಶಿ ಡಾ. ಯಾಜಿ ನಿರಂಜನ್‌ ಭಟ್‌ ಶುಭ ಹಾರೈಸಿದರು.

ಕರ್ನಾಟಕ ಯಕ್ಷ ಗಾನ ಅಕಾಡೆಮಿ ಸದಸ್ಯ ಹಿರಿಯ ಪ್ರಸಂಗಕರ್ತ ಭಾಗವತ ಬೊಟ್ಟಿಗೆರೆ ಪುರುಷೋತ್ತಮ ಪೂಂಜ, ಹೊಸತೋಟ ಮಂಜುನಾಥ ಭಾಗವತರು, ಪ್ರಸಂಗಕರ್ತ ಯೋಗೀಶ ರಾವ್‌ ಚಿಗುರುಪಾದೆ, ಬಹರೈನ್‌ ಯಕ್ಷ ಗಾನ ತಂಡದ ಸಲಹೆಗಾರ ರಮೇಶ್‌ ಮಂಜೇಶ್ವರ, ಕಲಾಪೋಷಕ ಯಾದವ ಕೋಟ್ಯಾನ್‌ ಪೆರ್ಮುದೆ, ಪಾವಂಜೆ ಲಕ್ಷ್ಮೀನಾರ್ಣಪ್ಪಯ್ಯ ಸ್ಮಾರಕ ಕಲಾಪೋಷಕ ವೇದಿಕೆಯ ಅಧ್ಯಕ್ಷ ಶಶೀಂದ್ರ ಕುಮಾರ್‌, ಕಲಾ ಪೋಷಕ ರಮೇಶ ಟಿ.ಎನ್‌. ಹಿರಿಯ ಪ್ರಸಂಗಕರ್ತ ಅರ್ಥಧಾರಿ ಶ್ರೀಧರ ಡಿ.ಎಸ್‌., ಪ್ರೊ.ಎಸ್‌.ವಿ. ಉದಯಕುಮಾರ್‌ ಶೆಟ್ಟಿ ಉಪಸ್ಥಿತರಿದ್ದರು. ಸಿರಿಬಾಗಿಲು ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಸ್ವಾಗತಿಸಿ, ಪ್ರಸ್ತಾವನೆ ಗೈದರು. ಮಹೇಶ್‌ ಸುಳ್ಯ ಕಾರ್ಯಕ್ರಮ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ