ಆ್ಯಪ್ನಗರ

ಕುವೈತ್‌: ಸಮುದ್ರದಲ್ಲಿ ಸಿಲುಕಿದ ಈಜಿಪ್ಟ್‌ ಪ್ರಜೆಗಳನ್ನು ರಕ್ಷಿಸಿ ತಾನೇ ಸಮುದ್ರ ಪಾಲಾದ ಮಂಗಳೂರಿನ ಯುವಕ!

ತನ್ನ ಮುಂದೆ ಮುಳುಗುತ್ತಿದ್ದ ಇಬ್ಬರನ್ನು ರಕ್ಷಿಸಿ ದಡ ಸೇರಿಸಿದ ಕೊನೆಗೆ ತಾನೇ ಸಮುದ್ರದ ರಕ್ಕಸ ಅಲೆಗೆ ಸಾವನಪ್ಪಿದ. ಇದು ಮಂಗಳೂರು ಯುವಕನ ಸಾಹಸಗಾಥೆ. ಬೇರೆಯವರನ್ನ ರಕ್ಷಿಸಲು ಹೋಗಿ ಕಿನ್ನಿಗೋಳಿಯ ಯುವಕ ತಾನೇ ಸಮುದ್ರದಲ್ಲಿ ಮುಳುಗಿ ಮೃತಪಟ್ಟಿದ್ದಾನೆ.

Vijaya Karnataka Web 20 Jul 2020, 12:24 pm
ಕಿನ್ನಿಗೋಳಿ: ಕುವೈಟ್‌ನ ಸಾಲ್ಮಿಯಾ ಬೀಚ್‌ನಲ್ಲಿ ಮುಳುಗುತ್ತಿದ್ದ ಇಬ್ಬರು ಈಜಿಪ್ಟ್‌ ಪ್ರಜೆಗಳನ್ನು ರಕ್ಷಿಸಿದ ಕಿನ್ನಿಗೋಳಿಯ ಯುವಕ ತಾನೇ ಸಮುದ್ರದಲ್ಲಿ ಮುಳುಗಿ ಮೃತಪಟ್ಟ ಕರುಣಾಜನಕ ಘಟನೆ ನಡೆದಿದೆ. ಕಿನ್ನಿಗೋಳಿ ನಿವಾಸಿ ಮೊಹಮ್ಮದ್‌ ಅನೀಸ್‌(28) ಮೃತಪಟ್ಟ ಯುವಕ.
Vijaya Karnataka Web rypGRgzQ


ಅನೀಸ್‌ ಶನಿವಾರ ಸಂಜೆ ತನ್ನ ಸ್ನೇಹಿತರ ಜತೆಗೆ ತಿರುಗಾಡಲು ಕುವೈಟ್‌ನ ಸಾಲ್ಮಿಯಾ ಬೀಚ್‌ಗೆ ತೆರಳಿದ್ದರು. ಕೊಂಚ ಹೊತ್ತು ನೀರಿನಲ್ಲಿ ಈಜಾಡಿ ದಡಕ್ಕೆ ಬಂದಿದ್ದರು. ಈ ಸಂದರ್ಭ ಬೀಚ್‌ಗೆ ತಿರುಗಾಡಲು ಬಂದ ಇಬ್ಬರು ಈಜಿಪ್ಟ್‌ ಪ್ರಜೆಗಳು ಅಲೆಗಳ ಅಬ್ಬರಕ್ಕೆ ಸಿಲುಕಿ ಮುಳುಗುತ್ತಿದ್ದರು.

ಇದನ್ನು ನೋಡಿದ ಅನೀಸ್‌ ತನ್ನ ಜೀವದ ಹಂಗು ತೊರೆದು, ಸಮುದ್ರಕ್ಕೆ ಜಿಗಿದು, ಇಬ್ಬರನ್ನು ರಕ್ಷಣೆ ಮಾಡಿ ದಡಕ್ಕೆ ತಲುಪಿಸಿದ್ದಾರೆ. ಆದರೆ ಅಷ್ಟರಲ್ಲಿ ಬೃಹತ್‌ ಅಲೆಯೊಂದು ಅನೀಸ್‌ ಅವರನ್ನು ಸೆಳೆದುಕೊಂಡಿತ್ತು. ಕೆಲವೇ ಕ್ಷಣದಲ್ಲಿಅನೀಸ್‌ ಸಮುದ್ರದಲ್ಲಿ ನಾಪತ್ತೆಯಾದರು. ಅನೀಸ್‌ ಪತ್ತೆಗಾಗಿ ಕುವೈಟ್‌ ನೇವಿ, ಕೋಸ್ಟ್‌ಗಾರ್ಡ್‌ ಕಾರ್ಯಾಚರಣೆ ನಡೆಸಿದ್ದು, ಭಾನುವಾರ ಬೆಳಗ್ಗೆ ಮೃತದೇಹ ಪತ್ತೆಯಾಗಿದೆ.

ದ.ಕ.ದಲ್ಲಿ ಮತ್ತೆ 285 ಮಂದಿಗೆ ಕೊರೊನಾ: ಸೋಂಕಿತರ ಸಂಖ್ಯೆ 3,596ಕ್ಕೆ ಏರಿಕೆ

ಇಂಟೀರಿಯರ್‌ ಡಿಸೈನರ್‌!
ಅನೀಸ್‌ ಅವರು ಇಂಟೀರಿಯರ್‌ ಡಿಸೈನರ್‌ ಆಗಿದ್ದು, ಮಂಗಳೂರಿನಲ್ಲಿ ಹಲವು ವರ್ಷ ಕೆಲಸ ಮಾಡಿದ್ದರು. ಆದರೆ ಒಳ್ಳೆಯ ಆಫರ್‌ ಸಿಕ್ಕಿದ ಕಾರಣ ವರ್ಷದ ಹಿಂದೆ ಕುವೈಟ್‌ಗೆ ತೆರಳಿದ್ದರು. ಆದರೆ ವಿಧಿ ಅವರನ್ನು ಮರಳಿ ತಾಯ್ನಾಡಿಗೆ ಬರಲು ಬಿಡಲಿಲ್ಲ. ಅವರಿಗೆ ತಂದೆ, ತಾಯಿ, ಇಬ್ಬರು ಸಹೋದರಿಯರು ಇದ್ದಾರೆ. ಕೊರೊನಾ ಬಿಕ್ಕಟ್ಟು ಮತ್ತು ಇತರ ವಿಷಯಗಳಿಂದ ಕುವೈಟ್‌ನಲ್ಲಿಯೇ ದಫನ ಕಾರ್ಯ ನಡೆಸಲು ಕುಟುಂಬಿಕರ ನಿರ್ಧರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ