ಆ್ಯಪ್ನಗರ

ಮಹಾರಾಷ್ಟ್ರ: ಮೂರು ಮಹಡಿ ಕಟ್ಟಡ ಕುಸಿತ, ಹೋಯ್ತು ಗಾಢ ನಿದ್ರೆಯಲ್ಲಿದ್ದ 10 ಮಂದಿಯ ಪ್ರಾಣ!

​​ಈಗಾಗಲೇ 25 ಮಂದಿಯನ್ನು ರಕ್ಷಣಾ ಪಡೆಗಳು ಅವಶೇಷಗಳಡಿಯಿಂದ ರಕ್ಷಿಸಿದೆ ಎಂದು ಥಾಣೆ ಪಾಲಿಕೆ ತಿಳಿಸಿದೆ. ಇನ್ನು ಪಾಲಿಕೆ ಮೂಲಗಳ ಪ್ರಕಾರ ಸರಿ ಸುಮಾರು ಸೋಮವಾರ ಮುಂಜಾನೆ 3.40 ಸುಮಾರಿಗೆ ಈ ಘಟನೆ ಭಿವಾಂಡಿಯ ನರ್ಪೋಲಿಯ ಪಟೇಲ್‌ ಕೌಂಪೌಂಡ್‌ನಲ್ಲಿ ನಡೆದಿದ್ದು, ಏಕಾಏಕಿ ಮೂರು ಮಹಡಿಯ ಕಟ್ಟಡ ಕುಸಿದಿದೆಯಂತೆ.

Agencies 21 Sep 2020, 9:00 am
ಮುಂಬಯಿ: ಮೂರು ಮಹಡಿ ಕಟ್ಟದ ಕುಸಿದುಬಿದ್ದು 10 ಮಂದಿ ಮೃತಪಟ್ಟಿರುವ ಘಟನೆ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಾಂಡಿ ಎಂಬಲ್ಲಿ ನಡೆದಿದೆ. 25ಕ್ಕೂ ಹೆಚ್ಚು ಮಂದಿ ಅವಶೇಷಗಳಡಿ ಸಿಲುಕಿರುವ ಶಂಕೆಯಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
Vijaya Karnataka Web EiZkeIRUYAAc7SQ


ಈಗಾಗಲೇ 25 ಮಂದಿಯನ್ನು ರಕ್ಷಣಾ ಪಡೆಗಳು ಅವಶೇಷಗಳಡಿಯಿಂದ ರಕ್ಷಿಸಿದೆ ಎಂದು ಥಾಣೆ ಪಾಲಿಕೆ ತಿಳಿಸಿದೆ. ಇನ್ನು ಪಾಲಿಕೆ ಮೂಲಗಳ ಪ್ರಕಾರ ಸರಿ ಸುಮಾರು ಸೋಮವಾರ ಮುಂಜಾನೆ 3.40 ಸುಮಾರಿಗೆ ಈ ಘಟನೆ ಭಿವಾಂಡಿಯ ನರ್ಪೋಲಿಯ ಪಟೇಲ್‌ ಕೌಂಪೌಂಡ್‌ನಲ್ಲಿ ನಡೆದಿದ್ದು, ಏಕಾಏಕಿ ಮೂರು ಮಹಡಿಯ ಕಟ್ಟಡ ಕುಸಿದಿದೆಯಂತೆ.


ಮಾಹಿತಿ ಸಿಕ್ಕಿದ ತಕ್ಷಣ ಸ್ಥಳಕ್ಕೆ ಎನ್‌ಡಿಆರ್‌ಎಫ್‌ ತಂಡ ಆಗಮಿಸಿ. ಹಲವರನ್ನು ರಕ್ಷಿಸಿದೆ. ಪುಟ್ಟ ಮಗುವೊಂದನ್ನು ಎನ್‌ಡಿಆರ್‌ಎಫ್‌ ಸಿಬ್ಬಂದಿ ರಕ್ಷಿಸಿರುವ ವಿಡಿಯೊವೊಂದು ನಿಜಕ್ಕೂ ಘಟನೆಯ ಭೀಕರತೆಯನ್ನು ಹೇಳುತ್ತಿದೆ. ಇನ್ನು, ಕಾರ್ಯಾಚರಣೆ ಮುಂದುವರಿದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ