ಆ್ಯಪ್ನಗರ

ಬಿಎಂಸಿ ಚುನಾವಣೆಯಲ್ಲಿ ಏಕಾಂಗಿ ಸ್ಪರ್ಧೆಗೆ ಕಾಂಗ್ರೆಸ್‌ ನಿರ್ಧಾರ..? ಹಾಗಾದ್ರೆ ಮಹಾ ವಿಕಾಸ್‌ ಅಘಾಡಿ ಕಥೆ ಏನು..?

ಮಹಾರಾಷ್ಟ್ರದಲ್ಲಿ ಶಿವಸೇನೆ ಹಾಗೂ ಎನ್‌ಸಿಪಿ ಜೊತೆ ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡು ಮಹಾ ವಿಕಾಸ್‌ ಅಘಾಡಿ ಸರಕಾವನ್ನು ರಚಿಸಿದೆ. ಆದರೆ, 2022ರಲ್ಲಿ ನಡೆಯಲಿರುವ ಬೃಹನ್ಮುಂಬೈ ಮಹಾನಗರ ಪಾಳಿಕೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸಲು ಕಾಂಗ್ರೆಸ್‌ ನಿರ್ಧರಿಸಿದೆ ಎನ್ನಲಾಗಿದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

Agencies 22 Nov 2020, 11:52 pm
ಮುಂಬಯಿ: ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ)ಗೆ 2022ರಲ್ಲಿ ನಡೆಯುವ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧೆ ನಡೆಸುವ ಕುರಿತು ಕಾಂಗ್ರೆಸ್‌ ಚಿಂತನೆ ನಡೆಸುತ್ತಿದೆ. ಎಐಸಿಸಿಯಲ್ಲಿ ಮಹಾರಾಷ್ಟ್ರ ಉಸ್ತುವಾರಿಯಾಗಿರುವ ಎಚ್‌.ಕೆ.ಪಾಟೀಲ್‌ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಕಾಂಗ್ರೆಸ್‌ ನಾಯಕರ ಸಭೆಯಲ್ಲಿ ಈ ಕುರಿತು ಚರ್ಚೆಯಾಗಿದೆ.
Vijaya Karnataka Web congress


ಚುನಾವಣೆಗೆ ಮುನ್ನ ಮುಂಬಯಿ ಕಾಂಗ್ರೆಸ್‌ ಘಟಕದ ಅಧ್ಯಕ್ಷರನ್ನು ಬದಲಿಸುವ ಇರಾದೆಯನ್ನು ಎಚ್‌.ಕೆ.ಪಾಟೀಲ್‌ ವ್ಯಕ್ತಪಡಿಸಿದ್ದು, ಹಾಲಿ ಅಧ್ಯಕ್ಷ ಏಕನಾಥ್‌ ಗಾಯಕ್‌ವಾಡ್‌ ಅವರ ಉತ್ತರಾಧಿಕಾರಿಯ ಹೆಸರು ಸೂಚಿಸುವಂತೆಯೂ ಪಕ್ಷದ ಮುಖಂಡರನ್ನು ಕೋರಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಎಂಸಿಯು ದೇಶದ ಅತಿದೊಡ್ಡ ಮತ್ತು ಶ್ರೀಮಂತ ಮಹಾನಗರ ಪಾಲಿಕೆಯಾಗಿದೆ. ಪಾಲಿಕೆಯ ಸದಸ್ಯ ಬಲ 227. ಮೂರು ದಶಕಗಳಿಂದಲೂ ಇಲ್ಲಿ ಶಿವಸೇನೆಯೇ ಆಡಳಿತ ನಡೆಸುತ್ತಿದೆ. ಕೆಲ ಚುನಾವಣೆಗಳನ್ನು ಬಿಜೆಪಿ ಜತೆಗೂಡಿ ಶಿವಸೇನೆ ಎದುರಿಸಿದೆ.

ಕಾಂಗ್ರೆಸ್‌ನಲ್ಲಿ ಒಡಕು ಸೃಷ್ಟಿಸಿದ ಬಿಹಾರ ಸೋಲು..! ಅತೃಪ್ತರು ಪಕ್ಷ ತೊರೆಯಬಹುದು ಎಂದ ಚೌಧರಿ

ಕಳೆದ ಚುನಾವಣೆಯನ್ನು ಶಿವಸೇನೆ, ಬಿಜೆಪಿ ಪ್ರತ್ಯೇಕವಾಗಿ ಎದುರಿಸಿದ್ದರೂ ಶಿವಸೇನೆ ಹೆಚ್ಚು ಸ್ಥಾನ ಗಳಿಸಿ ಅಧಿಕಾರ ಉಳಿಸಿಕೊಂಡಿದೆ. ಮಹಾರಾಷ್ಟ್ರದಲ್ಲಿಈಗ ಶಿವಸೇನೆ, ಎನ್‌ಸಿಪಿ, ಕಾಂಗ್ರೆಸ್‌ ಮೈತ್ರಿಕೂಟ ಸರಕಾರ ಇದ್ದರೂ, ಕಾಂಗ್ರೆಸ್‌ ಏಕಾಂಗಿಯಾಗಿ ಚುನಾವಣೆ ಎದುರಿಸುವ ಬಗ್ಗೆ ಚಿಂತಿಸುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ