ಆ್ಯಪ್ನಗರ

ಧಾರಾವಿಯಲ್ಲಿ ಸೋಂಕು ನಿಯಂತ್ರಣಕ್ಕೆ 4-ಟಿ ಮಂತ್ರ, ಕೇಂದ್ರ ಮೆಚ್ಚುಗೆ

​​ಈ​ ಪ್ರದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಲು ಮೇನಲ್ಲಿ 43 ದಿನಗಳು ಬೇಕಾಗುತ್ತಿದ್ದರೆ, ಈಗ 78 ದಿನಗಳನ್ನು ತೆಗೆದುಕೊಳ್ಳುತ್ತಿದೆ. ಇದು ಒಳ್ಳೆಯ ಸೂಚನೆ ಆಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದೆ.

TIMESOFINDIA.COM 22 Jun 2020, 9:48 pm

ಮುಂಬಯಿ: ಏಷ್ಯಾದ ಅತಿದೊಡ್ಡ ಕೊಳೆಗೇರಿಯಾದ ಮುಂಬಯಿಯ ಧಾರಾವಿಯಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಕೈಗೊಂಡ ಕಟ್ಟುನಿಟ್ಟಿನ ಕ್ರಮಗಳು ಫಲ ಕೊಟ್ಟಿದ್ದು, ಮಹಾರಾಷ್ಟ್ರ ಸರಕಾರ ಹಾಗೂ ಬೃಹನ್ಮುಂಬಯಿ ಮಹಾನಗರ ಪಾಲಿಕೆಯ ಹೋರಾಟಕ್ಕೆ ಕೇಂದ್ರ ಸರಕಾರ ಮೆಚ್ಚುಗೆ ವ್ಯಕ್ತಪಡಿಸಿದೆ.
Vijaya Karnataka Web Coronavirus


ಧಾರಾವಿ ಹೆಚ್ಚು ಜನಸಂಖ್ಯೆ ಹೊಂದಿರುವ ಕೊಳೆಗೇರಿಯಾಗಿದ್ದು, ಇಲ್ಲಿ ಒಂದಕ್ಕೊಂದು ಅಂಟಿಕೊಂಡೇ ತಗಡಿನ ಸೂರುಗಳಿವೆ. ಶುಚಿತ್ವಕ್ಕೆ ಆಸ್ಪದವೇ ಇಲ್ಲ. ಇಂತಹ ಪ್ರದೇಶದಲ್ಲಿ ಸೋಂಕು ವ್ಯಾಪಿಸುವುದಕ್ಕೆ ಕಡಿವಾಣ ಹೇರುವುದು ಪಾಲಿಕೆಗೆ ಸವಾಲಿನ ಕೆಲಸವಾಗಿದೆ. ಸೋಂಕಿತರ ಸಂಪರ್ಕ ಕೊಂಡಿಯನ್ನು ಕಡಿತಗೊಳಿಸಲು ಪಾಲಿಕೆ ಅಧಿಕಾರಿಗಳ ತಂಡ ಕಠಿಣ ಕ್ರಮಗಳನ್ನು ಕೈಗೊಂಡಿದ್ದರಿಂದ ಮೇನಲ್ಲಿ ಶೇ.4.3ರಷ್ಟಿದ್ದ ಪ್ರಕರಣಗಳ ಸಂಖ್ಯೆ ಜೂನ್‌ ಹೊತ್ತಿಗೆ ಶೇ.1.02ಕ್ಕೆ ಇಳಿದಿದೆ. ಮೇನಲ್ಲಿ ಇಲ್ಲಿ ದಿನಕ್ಕೆ ಸರಾಸರಿ 43 ಕೇಸ್‌ಗಳು ವರದಿಯಾಗುತ್ತಿದ್ದರೆ ಜೂನ್‌ ಮೊದಲ ವಾರಕ್ಕೆ ಈ ಪ್ರಮಾಣ 19ಕ್ಕೆ ಇಳಿಕೆಯಾಗಿದೆ. ನಿಯಂತ್ರಣ ಕ್ರಮಗಳು ಫಲಕೊಟ್ಟಿದ್ದಕ್ಕೆ ಕೇಂದ್ರ ಆರೋಗ್ಯ ಸಚಿವಾಲಯ ಮಹಾರಾಷ್ಟ್ರ ಸರಕಾರಕ್ಕೆ ಭೇಷ್‌ ಎಂದಿದೆ.

ಈ ಪ್ರದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಲು ಮೇನಲ್ಲಿ 43 ದಿನಗಳು ಬೇಕಾಗುತ್ತಿದ್ದರೆ, ಈಗ 78 ದಿನಗಳನ್ನು ತೆಗೆದುಕೊಳ್ಳುತ್ತಿದೆ. ಇದು ಒಳ್ಳೆಯ ಸೂಚನೆ ಆಗಿದೆ ಎಂದು ಸಚಿವಾಲಯ ಹೇಳಿದೆ.
ಕೊರೊನಾ ಕೇಸ್‌ಗಳಲ್ಲಿ ಚೀನಾದ ವುಹಾನ್‌ ಮೀರಿಸಿದ ಮುಂಬೈ..! ಬರೋಬ್ಬರಿ 51 ಸಾವಿರ ಸೋಂಕಿತರು

ಫಲಕೊಟ್ಟ 4-ಟಿ ಸೂತ್ರಕೋವಿಡ್‌-19 ಹಾಟ್‌ಸ್ಪಾಟ್‌ ಎಂದೇ ಗುರುತಿಸಿಕೊಂಡಿದ್ದ ಧಾರಾವಿಯ ಜನಸಂಖ್ಯೆ 7-10 ಲಕ್ಷ . ಈ ಪೈಕಿ ಶೇಕಡ 80ರಷ್ಟು ಜನರು ಸಾರ್ವಜನಿಕ ಶೌಚಾಲಯಗಳನ್ನು ಬಳಸುತ್ತಿದ್ದಾರೆ. 10*10 ಅಡಿ ಅಳತೆಯ ಮನೆಯಲ್ಲಿ 8-10 ಜನ ವಾಸಿಸುತ್ತಿದ್ದಾರೆ. ಒಂದಕ್ಕೊಂದು ಅಂಟಿಕೊಂಡು ಮನೆಗಳು ಇವೆ. ಹೀಗಾಗಿ ಇಲ್ಲಿ ಸಾಮಾಜಿಕ ಅಂತರ ಪಾಲನೆ ಹಾಗೂ ಹೋಮ್‌ ಕ್ವಾರಂಟೈನ್‌ಗೆ ಅರ್ಥವೇ ಇರಲಿಲ್ಲ. ಈ ಸವಾಲು ಅರಿತೇ ಪಾಲಿಕೆ ತಂಡವು ಇಲ್ಲಿ ನಾಲ್ಕು 'ಟಿ'ಗಳ ಸೂತ್ರ (ಟ್ರೇಸಿಂಗ್‌, ಟ್ರ್ಯಾಕಿಂಗ್‌, ಟೆಸ್ಟಿಂಗ್‌, ಟ್ರೀಟಿಂಗ್‌) ಅಳವಡಿಸಿಕೊಂಡಿತ್ತು. ಇದು ಫಲಕೊಟ್ಟಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ