ಆ್ಯಪ್ನಗರ

ಬಾಯ್‌ಫ್ರೆಂಡ್‌ ಜತೆಗಿದ್ದಾಗ ಅಮ್ಮನ ಎಂಟ್ರಿ: ಕಿಟಕಿಯಿಂದ ಜಿಗಿದು ಕಾಲು ಮುರಿದುಕೊಂಡ ತರುಣಿ!

ಹರೆಯದ ತರುಣಿಯೊಬ್ಬಳು ಮನೆಯಲ್ಲಿ ಪಾಲಕರು ಇಲ್ಲದ ಸಮಯ ನೋಡಿ ತನ್ನ ಬಾಯ್‌ಫ್ರೆಂಡ್‌ ಅನ್ನು ಕರೆತಂದಿದ್ದಳು. ಆದರೆ, ಅದೇ ಸಮಯಕ್ಕೆ ಅಚಾನಕ್ಕಾಗಿ ಆಕೆಯ ಅಮ್ಮ ಬಂದಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಕಿಟಕಿಯಿಂದ ನೆಗೆದು ಕಾಲು ಮುರಿದುಕೊಂಡಿದ್ದಾಳೆ.

THE TIMES OF INDIA NEWS SERVICE 9 Mar 2020, 5:42 pm
ಮುಂಬಯಿ: ಹರೆಯದ ತರುಣಿಯೊಬ್ಬಳು ಮನೆಯಲ್ಲಿ ಪಾಲಕರು ಇಲ್ಲದ ಸಮಯ ನೋಡಿ ತನ್ನ ಬಾಯ್‌ಫ್ರೆಂಡ್‌ ಅನ್ನು ಕರೆತಂದಿದ್ದಳು. ಆದರೆ, ಅದೇ ಸಮಯಕ್ಕೆ ಅಚಾನಕ್ಕಾಗಿ ಆಕೆಯ ಅಮ್ಮ ಬಂದಿದ್ದಾರೆ. ಈ ವಿಚಾರ ತಿಳಿಯುತ್ತಿದ್ದಂತೆ ಗಾಬರಿಗೊಂಡ ತರುಣಿ, ಮೊದಲ ಮಹಡಿಯಲ್ಲಿದ್ದ ಮನೆಯ ಕಿಟಕಿಯಿಂದಲೇ ಜಿಗಿದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ. ಆದರೆ, ಬಿದ್ದ ರಭಸಕ್ಕೆ ಕಾಲು ಮುರಿದುಕೊಂಡು ಮನೆಯವರಿಗೆ ಸಿಕ್ಕಿಬಿದ್ದಿದ್ದಾಳೆ. ಮುಂಬಯಿಯ ಬೇಲ್ ಬಜಾರ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
Vijaya Karnataka Web girl escape
ಸಾಂದರ್ಭಿಕ ಚಿತ್ರ


17 ವರ್ಷ ಪ್ರಾಯದ ತರುಣಿ, ಯಾರೂ ಇಲ್ಲದ ವೇಳೆ ತನ್ನ ಬಾಯ್‌ಫ್ರೆಂಡ್‌ ಅನ್ನು ಮನೆಗೆ ಕರೆಸಿಕೊಂಡಿದ್ದಾಳೆ. ಇವರಿಬ್ಬರೂ ಬೆಡ್‌ರೂಂನಲ್ಲಿ ಇರುವಾಗಲೇ, ಆಕೆಯ ತಾಯಿ ಮನೆಗೆ ಹಿಂದಿರುದ್ದಾರೆ. ಇದನ್ನು ತಿಳಿಯುತ್ತಿದ್ದಂತೆ ಗಾಬರಿಗೊಂಡ ಯುವತಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ. ಮೊದಲು ತನ್ನ ಪ್ರಿಯಕರನನ್ನು ಕಿಟಕಿಯಿಂದ ಜಿಗಿಯಲು ಹೇಳಿದ್ದಾಳೆ. ನಂತರ ತಾನೂ ಜಿಗಿದು ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾಳೆ. ಆದರೆ, ಮೊದಲ ಮಹಡಿಯಿಂದ ಬೀಳುತ್ತಿದ್ದಂತೆ ಮನೆಯವರಿಗೆ ಸಿಕ್ಕಿಹಾಕಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಹಾಕಿಕೊಂಡ ಬಳಿಕ ತನ್ನ ಬಾಯ್‌ಫ್ರೆಂಡ್‌ ಕುರಿತು ಬಾಯಿಬಿಟ್ಟಿದ್ದಾಳೆ. ಸುನಿಲ್‌ ಝೆಂಡೆ (20) ಈಕೆಯ ಬಾಯ್‌ಪ್ರೆಂಡ್‌ ಎಂಬುದು ತಿಳಿದುಬಂದಿದ್ದು, ಪೊಲೀಸರು ಈತನನ್ನು ಪೋಕ್ಸೋ ಕಾಯಿದೆಯಡಿ ಬಂಧಿಸಿದ್ದಾರೆ.

ಚಿರತೆ ಬಳಿಕ ತುಮಕೂರಿನಲ್ಲಿ ಒಂಟಿ ಸಲಗ ದಾಳಿ: ರೈತನ ಸ್ಥಿತಿ ಚಿಂತಾಜನಕ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ