ಆ್ಯಪ್ನಗರ

ದಿಲ್ಲಿಯಲ್ಲಿ ರೈತ ಕ್ರಾಂತಿ: ಅನ್ನದಾತರನ್ನು ಸರ್ಕಾರ ಉಗ್ರರಂತೆ ನಡೆಸಿಕೊಳ್ತಿದೆ: ಶಿವಸೇನೆ ಆಕ್ರೋಶ

'ಮೊದಲಿಗೆ ರೈತರು ದಿಲ್ಲಿ ಪ್ರವೇಶಿಸೋದನ್ನು ತಡೆಯಲಾಯ್ತು. ಇದನ್ನು ನೋಡಿದರೆ, ಅವರು ಈ ದೇಶಕ್ಕೆ ಸೇರಿದವರಲ್ಲ ಎಂಬಂತೆ ಭಾಸವಾಗುತ್ತೆ. ಅವರನ್ನು ಖಲಿಸ್ತಾನ್ ಹೋರಾಟಗಾರರು ಎಂಬಂತೆಯೂ ಬಿಂಬಿಸಲಾಯ್ತು.' - ಸಂಜಯ್ ರಾವತ್

ANI 29 Nov 2020, 6:01 pm

ಹೈಲೈಟ್ಸ್‌:

  • ಪಂಜಾಬ್‌ ರೈತ ಹೋರಾಟಕ್ಕೆ ರಾವತ್ ಬೆಂಬಲ
  • ಖಲಿಸ್ತಾನ್ ಉಗ್ರರ ರೀತಿ ನಡೆಸಿಕೊಳ್ಳಲಾಗುತ್ತಿದೆ
  • ದಿಲ್ಲಿಗೆ ಪ್ರವೇಶ ಪಡೆಯೋದಕ್ಕೂ ನಿರಾಕರಣೆ ಏಕೆ?: ರಾವತ್
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
ಮುಂಬೈ: ಕೇಂದ್ರ ಸರ್ಕಾರವು ರೈತರನ್ನು ಭಯೋತ್ಪಾದಕರಂತೆ ನಡೆಸಿಕೊಳ್ತಿದೆ ಎಂದು ಶಿವಸೇನೆ ನಾಯಕ ಸಂಜಯ್ ರಾವತ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆದ್ರೆ, ಅವರು ದಿಲ್ಲಿಯೊಳಗೆ ಬರೋದಕ್ಕೂ ಸರ್ಕಾರ ಅವಕಾಶ ನೀಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತರ ಬೇಡಿಕೆಯನ್ನು ಸರ್ಕಾರ ಪರಿಗಣಿಸಬೇಕೆಂದು ಆಗ್ರಹಿಸಿರುವ ಸಂಜಯ್ ರಾವತ್, ದಿಲ್ಲಿ ಚಲೋ ಹೋರಾಟಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.

ದೆಹಲಿ ಮುತ್ತಿದ ರೈತ: 'ಹಸಿರು ಕ್ರಾಂತಿ'ಗೆ ಸಾಕ್ಷಿಯಾಗಲಿದೆ ಭಾರತ?

ಹೊರದೇಶದಿಂದ ನುಸುಳುವ ಭಯೋತ್ಪಾದಕರ ರೀತಿ ರೈತರನ್ನು ಸರ್ಕಾರ ಪರಿಗಣಿಸುತ್ತಿದೆ ಎಂದು ಹರಿಹಾಯ್ದ ರಾವತ್, ಪಂಜಾಬ್ ರೈತರನ್ನು ಖಲಿಸ್ತಾನ್ ಚಳವಳಿಯ ಉಗ್ರರ ರೀತಿ ಪರಿಗಣಿಸಲಾಗುತ್ತಿದೆ ಎಂದು ಕಿಡಿಕಾರಿದರು.

ಮೈದಾನಗಳನ್ನು ತಾತ್ಕಾಲಿಕ ಜೈಲನ್ನಾಗಿ ಪರಿವರ್ತಿಸಲು ಅನುಮತಿ ನಿರಾಕರಿಸಿದ ದೆಹಲಿ ಸರ್ಕಾರ!

ರೈತರ ಚಳವಳಿ ಭಾನುವಾರಕ್ಕೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ರೈತ ನಾಯಕರು ತಮ್ಮ ಚಳವಳಿಯ ಮುಂದಿನ ರೂಪರೇಷೆ ಬಗ್ಗೆ ಚಿಂತಿಸುತ್ತಿದ್ದಾರೆ. ದಿಲ್ಲಿಯೊಳಗೆ ರೈತರು ಕಾಲಿಡದಂತೆ ಸರ್ಕಾರ ತಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ರೈತ ನಾಯಕರೊಂದಿಗೆ ಮಾತುಕತೆಗೆ ಮುಂದಾಗಬೇಕೆಂದು ರಾವತ್ ಆಗ್ರಹಿಸಿದ್ದಾರೆ.

ದಿಲ್ಲಿ ಪ್ರವೇಶಿಸಲು ಅನ್ನದಾತರಿಗೆ ಅನುಮತಿ, ಶಾಂತಿಯುತ ಪ್ರತಿಭಟನೆಗೆ ಸೂಚನೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ