ಆ್ಯಪ್ನಗರ

ನಮ್ಮ ಮನೆಯಲ್ಲಿ ಬೆಳೆಯುವುದು ತುಳಸಿ, ಗಾಂಜಾವಲ್ಲ: ಕಂಗನಾಗೆ ಟಾಂಗ್‌ ಕೊಟ್ಟ ಠಾಕ್ರೆ

ಕೆಲವರು ಮುಂಬಯಿಯ ಹೆಸರನ್ನು ಕೆಡಿಸಲು ಯತ್ನಿಸಿದರು. ಈ ಸುಂದರ ನಗರವನ್ನು ಮಾದಕ ವಸ್ತುಗಳ ನಗರ ಎಂದು ಕರೆದರು. ಆದರೆ ನಿಜಕ್ಕೂ ನಾವು ಮನೆಯಲ್ಲಿ ಬೆಳೆಯುವುದು ತುಳಸಿ, ಗಾಂಜಾವಲ್ಲ. ದೇಶದಲ್ಲಿ ನಿಜವಾಗಿ ಗಾಂಜಾ ಬೆಳೆಯುವುದು ಎಲ್ಲಿ ಎನ್ನುವುದು ನಿಮಗೆಲ್ಲ ಗೊತ್ತು ಎಂದು ಕಂಗನಾ ರಾಣಾವತ್‌ ಹೆಸರು ಪ್ರಸ್ತಾಪಿಸದೆ ಉದ್ಧವ್‌ ಠಾಕ್ರೆ ಟಾಂಗ್‌ ಕೊಟ್ಟರು.

TIMESOFINDIA.COM 26 Oct 2020, 1:53 pm
ಮುಂಬಯಿ: ಸುಶಾಂತ್‌ ಸಿಂಗ್‌ ಅಸಹಜ ಸಾವಿಗೆ ಸಂಬಂಧಪಟ್ಟಂತೆ ಮಹಾರಾಷ್ಟ್ರದ ಸರಕಾರದ ವಿರುದ್ಧ ಅನೇಕ ಆರೋಪಗಳು ಕೇಳಿ ಬಂದಿತ್ತು. ಅಲ್ಲದೆ ಡ್ರಗ್ಸ್ ಸಂಬಂಧವೂ ಮಹಾರಾಷ್ಟ್ರ ಸರಕಾರ ಹಾಗೂ ಮುಂಬಯಿ ಪೊಲೀಸರ ವಿರುದ್ಧ ಕೆಲವು ಅಪವಾದಗಳು ಬಂದಿದ್ದವು. ಇದೀಗ ಈ ಎಲ್ಲಾ ಆರೋಪಗಳಿಗೆ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಪ್ರತಿಕ್ರಿಯಿಸಿದ್ದಾರೆ.
Vijaya Karnataka Web kangana-uddhav


ಪ್ರಮುಖವಾಗಿ ಮುಂಬಯಿಯನ್ನು ಒಪಿಕೆ ಎಂದು ಕರೆದ ನಟಿ ಕಂಗನಾ ರಣಾವತ್‌ಗೆ ಟಾಂಗ್‌ ನೀಡಿದ ಉದ್ಧವ್‌ ಠಾಕ್ರೆ, ಕೆಲವರು ಮುಂಬಯಿಯ ಹೆಸರನ್ನು ಕೆಡಿಸಲು ಯತ್ನಿಸಿದರು. ಈ ಸುಂದರ ನಗರವನ್ನು ಮಾದಕ ವಸ್ತುಗಳ ನಗರ ಎಂದು ಕರೆದರು. ಆದರೆ ನಿಜಕ್ಕೂ ನಾವು ಮನೆಯಲ್ಲಿ ಬೆಳೆಯುವುದು ತುಳಸಿ, ಗಾಂಜಾವಲ್ಲ. ದೇಶದಲ್ಲಿ ನಿಜವಾಗಿ ಗಾಂಜಾ ಬೆಳೆಯುವುದು ಎಲ್ಲಿ ಎನ್ನುವುದು ನಿಮಗೆಲ್ಲ ಗೊತ್ತು ಎಂದು ಕಂಗನಾ ರಣಾವತ್‌ ಹೆಸರು ಪ್ರಸ್ತಾಪಿಸದೆ ಅವರ ರಾಜ್ಯವಾದ ಹಿಮಾಚಲ ಪ್ರದೇಶವನ್ನು ಉಲ್ಲೇಖಿಸಿ ಟಾಂಗ್‌ ಕೊಟ್ಟರು.

ಭಾನುವಾರ ದಸರಾ ಹಬ್ಬದ ಹಿನ್ನೆಲೆ ಶಿವಸೇನೆ ಆಯೋಜಿಸಿದ ಸಮಾವೇಶದಲ್ಲಿ ಉದ್ಧವ್ ಠಾಕ್ರೆ ಮಾತನಾಡಿದರು. ಗಾಂಜಾ ಬೆಳೆಯುವುದು ಮಹಾರಾಷ್ಟ್ರದಲ್ಲಿ ಅಲ್ಲ ಹಿಮಾಚಲ ಪ್ರದೇಶದಲ್ಲಿ ಎಂದು ಹೇಳಿದ್ದಾರೆ. ಕಳೆದ ಕೆಲವು ವಾರಗಳ ಹಿಂದೆ ಟ್ವೀಟ್‌ ಮಾಡಿದ್ದ ನಟಿ ಕಂಗನಾ ರಣಾವತ್‌, ಮುಂಬಯಿ ಪೊಲೀಸರನ್ನು ಗುರಿಯಾಗಿಸಿಕೊಂಡು ರಾಜ್ಯದಲ್ಲಿ ತನ್ನ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.

ನಿಮಗೆ ತಾಕತ್ತಿದ್ದರೆ ನನ್ನ ಸರಕಾರ ಉರುಳಿಸಿ: ಬಿಜೆಪಿ ನಾಯಕರಿಗೆ ಠಾಕ್ರೆ ಬಹಿರಂಗ ಸವಾಲು

ಇದರ ಬೆನ್ನಲ್ಲೆ ಶಿವಸೇನೆ ಹಿರಿಯ ನಾಯಕ ಸಂಜಯ್‌ ರಾವತ್‌ ಹಾಗೂ ಗೃಹ ಸಚಿವ ಅನಿಲ್‌ ದೇಶ್‌ಮುಖ್‌ ಮನಾಲಿಯಿಂದ ಮುಂಬಯಿಗೆ ಹಿಂದುರುಗದಂತೆ ತಾಕೀತು ಮಾಡಿದ್ದರು. ಬಳಿಕ ಮತ್ತೊಂದು ಟ್ವೀಟ್‌ನಲ್ಲಿ ಮುಂಬಯಿಯನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಎಂದು ಕಂಗನಾ ಟೀಕಿಸಿದ್ದರು.

ಇದು ಮಹಾರಾಷ್ಟ್ರ ಸರಕಾರ ಹಾಗೂ ಕಂಗನಾ ರಣಾವತ್‌ ನಡುವಿನ ಮಾತಿನ ಸಮರಕ್ಕೆ ಸಾಕ್ಷಿಯಾಗಿತ್ತು.ಈ ಎಲ್ಲಾ ಬೆಳವಣಿಗೆ ಮಧ್ಯೆ ಅಕ್ರಮವಾಗಿ ಸ್ಥಾಪಿಸಿದ್ದ ಕಂಗನಾ ರಣಾವತ್‌ ಕಚೇರಿಯ ಕಟ್ಟವನ್ನು ಇಎಂಸಿ ಧ್ವಂಸಗೊಳಿಸಿತ್ತು. ಈ ಸುದ್ದಿ ಭಾರೀ ಸದ್ದು ಮಾಡಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ