ಆ್ಯಪ್ನಗರ

₹2 ಲಕ್ಷ ವರೆಗಿನ ರೈತರ ಕೃಷಿಸಾಲ ಮನ್ನಾ ಮಾಡಿದ ಮಹಾರಾಷ್ಟ್ರ ಸರಕಾರ

ರೈತರ 2 ಲಕ್ಷ ರೂ.ವರೆಗಿನ ಸಾಲ ಮನ್ನಾ ಘೋಷಿಸಲಾಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ ನೇತೃತ್ವದ ಸರ್ಕಾರದಿಂದ ರೈತರ 2 ಲಕ್ಷ ರೂ. ವರೆಗಿನ ಸಾಲ ಮನ್ನಾ ಮಾಡುವುದಾಗಿ ಬಜೆಟ್ನಲ್ಲಿ ಘೋಷಿಸಲಾಗಿದೆ.

Vijaya Karnataka Web 7 Mar 2020, 10:55 am
ಮುಂಬಯಿ: ರೈತರ 2 ಲಕ್ಷ ರೂ.ವರೆಗಿನ ಸಾಲ ಮನ್ನಾ ಘೋಷಿಸಲಾಗಿದೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ ಠಾಕ್ರೆ ನೇತೃತ್ವದ ಸರ್ಕಾರದಿಂದ ರೈತರ 2 ಲಕ್ಷ ರೂ. ವರೆಗಿನ ಸಾಲ ಮನ್ನಾ ಮಾಡುವುದಾಗಿ ಬಜೆಟ್ನಲ್ಲಿ ಘೋಷಿಸಲಾಗಿದೆ.
Vijaya Karnataka Web uddhav


ಹಣಕಾಸು ಸಚಿವ ಅಜಿತ್ ಪವಾರ್ ಮಂಡಿಸಿದ ಬಜೆಟ್ ನಲ್ಲಿ ಕೃಷಿ ಸಾಲ ಮನ್ನಾ ಮಾಡುವುದಾಗಿ ಹೇಳಲಾಗಿದೆ. 2019ರ ಸೆಪ್ಟಂಬರ್ ಗೂ ಮೊದಲು ಸಾಲ ಪಡೆದ ರೈತರು ಈ ಪ್ರಯೋಜನ ಪಡೆಯಲಿದ್ದಾರೆ.

ಸಾಲ ಮನ್ನಕ್ಕಾಗಿಯೇ, 'ಮಹಾತ್ಮ ಜ್ಯೋತಿರಾವ್‌ ಫುಲೆ ರೈತ ಸಾಲ ಮನ್ನಾ ಯೋಜನೆ' ಘೋಷಿಸಿದ್ದು, ಮಹಾರಾಷ್ಟ್ರದ ಎಲ್ಲ ರೈತರ ಕೃಷಿ ಸಾಲ ಮನ್ನಾ ಮಾಡಲು ಸುಮಾರು 22,000 ಕೋಟಿ ರೂಪಾಯಿ ಅಗತ್ಯವಿದೆ.

ಮಹಾರಾಷ್ಟ್ರದ ಎಲ್ಲಾ ಶಾಲೆಗಳಲ್ಲೂ ಮರಾಠಿ ಕಡ್ಡಾಯ: ಠಾಕ್ರೆ ಸರಕಾರದಿಂದ ಮಹತ್ವದ ನಿರ್ಧಾರ

2019ರ ಸೆಸಪ್ಟೆಂಬರ್‌ 30ರವರೆಗೆ ಬಾಕಿ ಉಳಿದಿರುವ ಸಾಲದ ಮೊತ್ತ ಸುಮಾರು 15 ಸಾವಿರ ಕೋಟಿ ರೂಪಾಯಿದೆ. ಪ್ರಸ್ತುತ ಬಜೆಟ್‌ನಲ್ಲಿ ರೈತರ ಸಾಲ ಮನ್ನಕ್ಕಾಗಿ 7000 ಕೋಟಿ ರೂಪಾಯಿ ಮೀಸಲಿಡಲಾಗಿದೆ.

ಮಹಾರಾಷ್ಟ್ರದಲ್ಲಿ ಎನ್‌ಪಿಆರ್‌ಗೆ ನಿರ್ಬಂಧ ಇಲ್ಲ: ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ

ಮುಂದಿನ 5 ವರ್ಷದಲ್ಲಿ ಸುಮಾರು 5 ಲಕ್ಷ ಉದ್ಯೋಗ ಸೃಷ್ಟಿಸುವ ಗುರಿ ಹೊಂದಲಾಗಿದ್ದು, ಸ್ಥಳೀಯರಿಗೆ ಶೇಕಡ 80ರಷ್ಟು ಉದ್ಯೋಗಾವಕಾಶಗಳ ಭರವಸೆ ನೀಡಲಾಗಿದೆ. ಇದಕ್ಕಾಗಿ ಕಾನೂನು ರಚಿಸುವುದಾಗಿ ಹೇಳಲಾಗಿದೆ. ಬೆಂಗಳೂರು-ಮುಂಬೈ ಆರ್ಥಿಕ ಕಾರಿಡಾರ್ ಯೋಜನೆಗೆ 4000 ಕೋಟಿ ರೂಪಾಯಿ ಅನುದಾನ ನೀಡಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ