ಆ್ಯಪ್ನಗರ

ಚಹಾ ಮಾರುವವನ ಸಂಪರ್ಕಕ್ಕೆ ಬಂದ ಉದ್ಧವ್ ಠಾಕ್ರೆ ಭದ್ರತಾ ಸಿಬ್ಬಂದಿಗೆ ಕ್ವಾರಂಟೈನ್!

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮನೆಯ ಮುಂದೆ ಇರುವ ಅಂಗಡಿಯಲ್ಲಿ ಚಹಾ ಕುಡಿದ ಅವರ ಎಲ್ಲಾ ಭದ್ರತಾ ಸಿಬ್ಬಂದಿಯನ್ನು ಕ್ವಾರಂಟೈನ್‌ಗೆ ಗುರಿಪಡಿಸಲಾಗಿದೆ. ಚಹಾ ಮಾರಾಟಗಾರನಲ್ಲಿ ಕೊರೊನಾ ವೈರಸ್ ಪತ್ತೆಯಾಗಿರುವುದೇ ಇದಕ್ಕೆ ಕಾರಣ ಎನ್ನಲಾಗಿದೆ.

Vijaya Karnataka Web 7 Apr 2020, 1:55 pm
ಮುಂಬೈ: ಇಡೀ ದೇಶದಲ್ಲೇ ಕೊರೊನಾ ವೈರಸ್ ಪ್ರಕರಣಗಳು ಅತ್ಯಂತ ಹೆಚ್ಚಾಗಿರುವ ಮಹಾರಾಷ್ಟ್ರದಲ್ಲಿ. ಒಂದಾದ ಮೇಲೊಂದರಂತೆ ಅನಾಹುತಗಳು ಸಂಭವಿಸುತ್ತಿವೆ.
Vijaya Karnataka Web Mumbai: Maharashtra Chief Minister Uddhav Thackeray arrives at BMC headquarter t...
ಸಂಗ್ರಹ ಚಿತ್ರ


ನರ್ಸ್ ಹಾಗೂ ವೈದ್ಯರಲ್ಲಿ ಕೋವಿಡ್-19 ಪತ್ತೆಯಾದ ಹಿನ್ನೆಲೆಯಲ್ಲಿ ಇಡೀ ವೋಕ್ಹಾರ್ಡ್ ಆಸ್ಪತ್ರೆಯನ್ನು ಸಂಪೂರ್ಣವಾಗಿ ಮುಚ್ಚಿರುವ ಬೆನ್ನಲ್ಲೇ, ಇದೀಗ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಭದ್ರತಾ ಸಿಬ್ಬಂದಿಯನ್ನೇ ಕ್ವಾರಂಟೈನ್‌ಗೆ ಗುರಿಪಡಿಸಿದ ಘಟನೆ ನಡೆದಿದೆ.

ವೈದ್ಯರು ಮತ್ತು ನರ್ಸ್‌ಗಳಿಗೆ ಕೊರೊನಾ: ಪ್ರಸಿದ್ಧ ವೋಕ್ಹಾರ್ಡ್ ಆಸ್ಪತ್ರೆ ಬಂದ್!

ಹೌದು, ಸಿಎಂ ಉದ್ಧವ್ ಠಾಕ್ರೆ ಮನೆ 'ಮಾತೋಶ್ರೀ'ಯ ಮುಂದುಗಡೆ ತಳ್ಳುವ ಗಾಡಿಯಲ್ಲಿ ಚಹಾ ಮಾರುವವನಿಗೆ ಕೊರೊನಾ ವೈರಸ್ ತಗುಲಿದ್ದು, ಈ ಅಂಗಡಿಯಲ್ಲಿ ಚಹಾ ಕುಡಿದ ಠಾಕ್ರೆ ಅವರ ಎಲ್ಲಾ ಭದ್ರತಾ ಸಿಬ್ಬಂದಿಯನ್ನು ಕ್ವಾರಂಟೈನ್‌ಗೆ ಗುರಿಪಡಿಸಲಾಗಿದೆ.


ಅಲ್ಲದೇ ಇದೇ ಪ್ರದೇಶದಲ್ಲಿ ಕರ್ತವ್ಯ ನಿರತರಾಗಿದ್ದ 170ಕ್ಕೂ ಅಧಿಕ ಪೊಲೀಸರನ್ನು ಇದೀಗ ವಾಪಸ್ ಕರೆಸಿಕೊಳ್ಳಲಾಗಿದ್ದು, ಇಡೀ ಪ್ರದೇಶದ ಮೇಲೆ ನಿಗಾ ಇರಿಸಲಾಗಿದೆ.

ಕೊರೊನಾದಿಂದ ಉದ್ಧವ್‌ ಠಾಕ್ರೆ ಮುಖ್ಯಮಂತ್ರಿ ಹುದ್ದೆಗೆ ಕಂಟಕ?

ಕೆಮ್ಮು ಮತ್ತು ಜ್ವರದಿಂದ ಬಳಲುತ್ತಿದ್ದ ಚಹಾ ಮಾರಾಟಗಾರನನ್ನು ಆಸ್ಪತ್ರೆಗೆ ದಾಖಿಲಿಸಿ ಪರೀಕ್ಷಿಸಿದಾಗ ಆತನಲ್ಲಿ ಕೊರೊನಾ ವೈರಸ್ ಪಾಸಿಟಿವ್ ಫಲಿತಾಂಶ ಬಂದಿದೆ. ಈ ಹಿನ್ನೆಲೆಯಲ್ಲಿ ಇದೇ ಅಂಗಡಿಯಲ್ಲಿ ಚಹಾ ಕುಡಿದಿದ್ದ ಠಾಕ್ರೆ ಅವರ ಎಲ್ಲಾ ಭದ್ರತಾ ಸಿಬ್ಬಂದಿಯನ್ನು ಕ್ವಾರಂಟೈನ್‌ಗೆ ಗುರಿಪಡಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ