ಆ್ಯಪ್ನಗರ

'ಮಹಾರಾಷ್ಟ್ರ ಸರಕಾರ ಆಟೋ ರಿಕ್ಷಾವಾದರೂ ಸ್ಟೀರಿಂಗ್‌ ನನ್ನ ಕೈಯಲ್ಲಿದೆ': ಬಿಜೆಪಿಗೆ ಉದ್ಧವ್‌ ಠಾಕ್ರೆ ತಿರುಗೇಟು

ಮಹಾರಾಷ್ಟ್ರ ಮೈತ್ರಿ ಸರಕಾರಕ್ಕೆ ಪ್ರಯತ್ನಿಸುತ್ತಿರುವ ಬಿಜೆಪಿ ವಿರುದ್ಧ ಸಿಎಂ ಉದ್ಧವ್‌ ಠಾಕ್ರೆ ಕಿಡಿಕಾರಿದ್ದು, ಸರಕಾರ ಆಟೋ ರಿಕ್ಷಾವಾದರೂ, ಅದರ ಸ್ಟೀರಿಂಗ್‌ ನನ್ನ ಕೈಯಲ್ಲಿದೆ. ಎನ್‌ಸಿಪಿ, ಕಾಂಗ್ರೆಸ್‌ ಹಿಂದೆ ಕುಳಿತಿದ್ದಾರೆ. ಇದು ಬಡವರ ಸರಕಾರ ಎಂದು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.

Vijaya Karnataka Web 26 Jul 2020, 4:58 pm
ಮುಂಬಯಿ: ಮಹಾರಾಷ್ಟ್ರದ ಮೈತ್ರಿ ಸರಕಾರವನ್ನು ಪತನಗೊಳಿಸಲು ಪ್ರಯತ್ನಿಸುತ್ತಿರುವ ಬಿಜೆಪಿ ವಿರುದ್ಧ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಕಿಡಿಕಾರಿದ್ದಾರೆ. ಮಹಾ ವಿಕಾಸ್‌ ಅಗಾಡಿ ತ್ರಿ-ಚಕ್ರದ ಆಟೋ ರಿಕ್ಷಾ ಸರಕಾರವಾಗಿದ್ದರೂ, ಅದರ ಸ್ಟೀರಿಂಗ್‌ ವೀಲ್‌ ನನ್ನ ಕೈಯಲ್ಲಿದೆ ದೃಢವಾಗಿದೆ ಎಂದು ಹೇಳಿದ್ದು, ಭಾರತೀಯ ಜನತಾ ಪಾರ್ಟಿಗೆ ತಿರುಗೇಟು ನೀಡಿದ್ದಾರೆ.
Vijaya Karnataka Web maharashtra governments steering wheel in my hands says uddhav thackeray
'ಮಹಾರಾಷ್ಟ್ರ ಸರಕಾರ ಆಟೋ ರಿಕ್ಷಾವಾದರೂ ಸ್ಟೀರಿಂಗ್‌ ನನ್ನ ಕೈಯಲ್ಲಿದೆ': ಬಿಜೆಪಿಗೆ ಉದ್ಧವ್‌ ಠಾಕ್ರೆ ತಿರುಗೇಟು


ಉದ್ಧವ್‌ ಠಾಕ್ರೆ ಅವರ 60ನೇ ಜನ್ಮದಿನದಕ್ಕೂ ಮುಂಚೆ ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಪ್ರಕಟವಾದ ಸಂದರ್ಶನದಲ್ಲಿ, ಮೈತ್ರಿ ಪಕ್ಷಗಳಾದ ಎನ್‌ಸಿಪಿ ಮತ್ತು ಕಾಂಗ್ರೆಸ್ ಸಕಾರಾತ್ಮಕವಾಗಿದ್ದು, ಮಹಾ ವಿಕಾಸ್ ಅಘಾಡಿ ಸರಕಾರವೂ ಅವರ ಅನುಭವದಿಂದ ಲಾಭ ಪಡೆಯುತ್ತಿದೆ ಎಂದು ಉದ್ಧವ್‌ ಠಾಕ್ರೆ ಹೇಳಿದ್ದಾರೆ.

ನನ್ನ ಸರಕಾರದ ಭವಿಷ್ಯ ಪ್ರತಿಪಕ್ಷಗಳ ಕೈಯಲ್ಲಿಲ್ಲ. ಸ್ಟೀರಿಂಗ್ ನನ್ನ ಕೈಯಲ್ಲಿದೆ. ತ್ರಿ-ಚಕ್ರ ವಾಹನ (ಆಟೋ ರಿಕ್ಷಾ) ಬಡ ಜನರ ವಾಹನವಾಗಿದೆ. ಉಳಿದ ಇಬ್ಬರು ಹಿಂದೆ ಕುಳಿತಿದ್ದಾರೆ" ಎಂದು ಠಾಕ್ರೆ ತಿಳಿಸಿದ್ದಾರೆ. ಪ್ರಜಾಪ್ರಭುತ್ವ ತತ್ವಗಳಿಗೆ ವಿರುದ್ಧವಾಗಿ ಮಹಾ ವಿಕಾಸ್‌ ಅಘಾಡಿ ಸರಕಾರ ರಚನೆಯಾಗಿದೆ ಎಂದು ನೀವು ಹೇಳುತ್ತೀರಿ. ಆದರೆ, ನೀವು ಅದನ್ನು ಪತನಗೊಳಿಸಿದರೆ ಅದು ಪ್ರಜಾಪ್ರಭುತ್ವವೇ?" ಎಂದು ಠಾಕ್ರೆ ಬಿಜೆಪಿ ನಾಯಕರಿಗೆ ಪ್ರಶ್ನಿಸಿದ್ದಾರೆ.

ನನ್ನ ಜನ ನರಳಾಡುವುದನ್ನು ನೋಡಿ ಸುಮ್ಮನಿರಲು ನಾನು ಟ್ರಂಪ್ ಅಲ್ಲ: ಉದ್ಧವ್ ಠಾಕ್ರೆ!

ಸರಕಾರ ಉರುಳಿಸಲು ಸೆಪ್ಟೆಂಬರ್‌-ಅಕ್ಟೋಬರ್‌ಗಾಗಿ ಏಕೆ ಕಾಯಬೇಕು. ನಿಮಗೆ ಸರಕಾರ ಉರುಳಿಸಿ ಸಂತೋಷ ಸಿಗುವುದಾರೆ ಈಗಲೇ ಮಹಾ ವಿಕಾಸ್‌ ಅಘಾಡಿಯನ್ನು ಅಸ್ಥಿರಗೊಳಿಸಿ ಎಂದಿದ್ದು, ಕೆಲವರು ರಚನಾತ್ಮಕ ಕೆಲಸಗಳಿಂದ ಖುಷಿ ಪಟ್ಟರೆ, ಒಂದಿಷ್ಟು ಜನ ವಿನಾಶದಲ್ಲಿ ಸಂತೋಷ ಪಡೆಯುತ್ತಾರೆ. ವಿನಾಶದಲ್ಲಿ ನಿಮಗೆ ಸಂತಸ ಸಿಗುತ್ತದೆ ಎಂದರೆ ಮುಂದುವರೆಯಿರಿ ಎಂದು ಠಾಕ್ರೆ ಬಿಜೆಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಡಿಯೋ ಕಾನ್ಫರೆನ್ಸ್ ಮೂಲಕವೂ ಭೂಮಿ ಪೂಜೆ ಮಾಡಬಹುದು: ಉದ್ಧವ್ ಠಾಕ್ರೆ!

ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್, ಆಡಳಿತಾರೂಢ ಮಹಾ ವಿಕಾಸ್‌ ಅಘಾಡಿಯನ್ನು ಆಟೋ ರಿಕ್ಷಾಗೆ ಹೋಲಿಸಿದ್ದರು. ಶಿವಸೇನೆ ಮತ್ತು ಅದರ ಸೈದ್ಧಾಂತಿಕ ವಿರೋಧಿಗಳಾದ ಕಾಂಗ್ರೆಸ್ ಮತ್ತು ಎನ್‌ಸಿಪಿ ಮೈತ್ರಿ ಮಾಡಿಕೊಂಡಿರುವುದು ಸರಕಾರದ ಸ್ಥಿರತೆಯ ಬಗ್ಗೆ ಅನುಮಾನಗಳನ್ನು ಹುಟ್ಟಿಸುತ್ತಿವೆ ಎಂದು ಹೇಳಿದ್ದರು. ಇದಕ್ಕೆ, ನಾನು ಸಿದ್ಧಾಂತಗಳನ್ನು ಬದಲಿಸಿಲ್ಲ, ಕೇವಲ ಮೈತ್ರಿಗೆ ಮಾತ್ರ ಪ್ರವೇಶಿಸಿದ್ದೇನೆ ಎಂದು ಠಾಕ್ರೆ ಹೇಳಿದ್ದಾರೆ.

'ಮಹಾಭಾರತ 18 ದಿನ, ಕೊರೊನಾ ವೈರಸ್‌ 100 ಮತ್ತಷ್ಟು ದಿನ': ಮೋದಿ ವಿರುದ್ಧ ಶಿವಸೇನೆ ಕಿಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ