ಆ್ಯಪ್ನಗರ

ಉದ್ಧವ್‌ ಠಾಕ್ರೆ ನೇತೃತ್ವದ ಮಹಾ ವಿಕಾಸ್‌ ಅಘಾಡಿಯಿಂದ 5 ವರ್ಷ ಪೂರ್ಣ ಅಧಿಕಾರ: ಸಂಜಯ್‌ ರಾವತ್‌

ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ನೇತೃತ್ವದ ಮಹಾ ವಿಕಾಸ್‌ ಅಘಾಡಿ ಸರಕಾರ ತನ್ನ 5 ವರ್ಷದ ಅಧಿಕಾರಾವಧಿಯನ್ನು ಪೂರ್ಣಗೊಳಿಸುತ್ತದೆ ಎಂದು ಶಿವಸೇನೆ ನಾಯಕ ಸಂಜಯ್‌ ರಾವತ್‌ ಹೇಳಿದ್ದಾರೆ. ಈ ಮೂಲಕ ಮಹಾರಾಷ್ಟ್ರದಲ್ಲಿ ಉದ್ಭವಿಸಿದ್ದ ಮಧ್ಯಂತರ ಚುನಾವಣೆಯ ಊಹಾಪೋಹಗಳಿಗೆ ರಾವತ್‌ ತೆರೆ ಎಳೆದಿದ್ದಾರೆ.

Agencies 29 Sep 2020, 7:33 pm
ಮುಂಬಯಿ: ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ನೇತೃತ್ವದ ಮಹಾ ವಿಕಾಸ್‌ ಅಘಾಡಿ ಸರಕಾರ ತನ್ನ 5 ವರ್ಷದ ಅಧಿಕಾರಾವಧಿಯನ್ನು ಪೂರ್ಣಗೊಳಿಸುತ್ತದೆ ಎಂದು ಶಿವಸೇನೆ ನಾಯಕ ಸಂಜಯ್‌ ರಾವತ್‌ ಹೇಳಿದ್ದು, ಈ ಮೂಲಕ ಮಹಾರಾಷ್ಟ್ರದಲ್ಲಿ ಉದ್ಭವಿಸಿದ್ದ ಮಧ್ಯಂತರ ಚುನಾವಣೆಯ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
Vijaya Karnataka Web maharashtra govt will last full term no mid term polls sanjay raut
ಉದ್ಧವ್‌ ಠಾಕ್ರೆ ನೇತೃತ್ವದ ಮಹಾ ವಿಕಾಸ್‌ ಅಘಾಡಿಯಿಂದ 5 ವರ್ಷ ಪೂರ್ಣ ಅಧಿಕಾರ: ಸಂಜಯ್‌ ರಾವತ್‌


ಮುಂಬೈನಲ್ಲಿ ಸುದ್ದಿಗಾರರಿಗೆ ಮಾತನಾಡಿದ ರಾವತ್‌, ರಾಜ್ಯದ ಜನಕ್ಕೆ ಈಗ ಚುನಾವಣೆ ಬೇಕಿಲ್ಲ ಎಂದಿದ್ದಾರೆ. ಯಾವುದೇ ಸಂಯೋಜನೆ ಕಾರ್ಯರೂಪಕ್ಕೆ ಬರದಿದ್ದರೆ, ಯಾವುದೇ ಆಯ್ಕೆ ಇರುವುದಿಲ್ಲ ಎಂದು ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ್‌ ಪಾಟೀಲ್‌ ಹೇಳಿಕೆ ನೀಡಿ ಒಂದು ದಿನದ ನಂತರ ರಾವತ್‌ ಈ ಹೇಳಿಕೆ ನೀಡಿದ್ದಾರೆ.

ಮಧ್ಯಂತರ ಚುನಾವಣೆಯನ್ನು ಯಾರೂ ಬಯಸುವುದಿಲ್ಲ. ಆದರೆ, ಅಸ್ಥಿರತೆಗೆ ಪರಿಹಾರ ಕಂಡುಹಿಡಿಯಲು ಸಾಧ್ಯವಿಲ್ಲ. ಆದ್ದರಿಂದ, ಒಂದು ಸುಂದರ ಮುಂಜಾನೆಯಲ್ಲಿ ಏನಾದರೂ ಸಂಭವಿಸಬಹುದು. ಏನೂ ಆಗದಿರಲಿ ಎಂದು ಎಲ್ಲರೂ ಪ್ರಯತ್ನಿಸುತ್ತಿದ್ದಾರೆ. ಆದರೆ, ಯಾವುದೇ ಸಂಯೋಜನೆ ಕಾರ್ಯರೂಪಕ್ಕೆ ಬರದಿದ್ದರೆ ಯಾವುದೇ ಆಯ್ಕೆ ಇರುವುದಿಲ್ಲ ಎಂದು ಪಾಟೀಲ್ ಸೋಮವಾರ ಹೇಳಿದ್ದರು.

ಇಬ್ಬರು ನಾಯಕರು ಒಂದೆಡೆ ಸೇರಿದರೆ ಟೀ-ಬಿಸ್ಕೆಟ್ ಬಗ್ಗೆ ಮಾತಾಡಲ್ಲ: 'ಮಹಾ' ಬಿಜೆಪಿ ಮುಖ್ಯಸ್ಥ!

ಪಾಟೀಲ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ರಾವತ್‌, ಮತದಾನದ ವೇಳಾಪಟ್ಟಿ ಪ್ರಕಟಿಸುವ ಚುನಾವಣಾ ಆಯೋಗ ಪಾಟೀಲ್ ಅವರಿಗೆ ಸ್ವಲ್ಪ ಜವಾಬ್ದಾರಿ ನೀಡಿರಬಹುದು ಎಂದು ವ್ಯಂಗ್ಯವಾಡಿದರು. ಆದರೆ, ನಾನು ಚಂದ್ರಕಾಂತ್ ಪಾಟೀಲ್ ಅವರ ಹೇಳಿಕೆಗಳನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತೇನೆ ಎಂದು ರಾವತ್‌ ಹೇಳಿದ್ದಾರೆ.

ಶಿರೋಮಣಿ ಅಕಾಲಿ ದಳ ಹೊರಬಂದ ನಂತರ ಎನ್‌ಡಿಎ ಉಳಿದಿದೆಯಾ?: ಬಿಜೆಪಿ ವಿರುದ್ಧ ಶಿವಸೇನೆ ವ್ಯಂಗ್ಯ‌

ಮಹಾರಾಷ್ಟ್ರದ ಜನ ಈಗ ಚುನಾವಣೆ ಬಯಸುವುದಿಲ್ಲ ಎಂದು ರಾವತ್‌ ಹೇಳಿದ್ದು, ಚುನಾವಣೆ ಇರಬಾರದು ಎಂದು ನಾನು ಹೇಳುತ್ತಿದ್ದೇನೆ. ಆದ್ದರಿಂದ, ಠಾಕ್ರೆ ಸರಕಾರ ಐದು ವರ್ಷಗಳ ಕಾಲ ಪೂರ್ಣ ಅಧಿಕಾರ ನಡೆಸುತ್ತದೆ ಎಂದು ಹೇಳಿದರು. ಇನ್ನು, ಮಹಾರಾಷ್ಟ್ರ ಮಾಜಿ ಸಿಎಂ ಹಾಗೂ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್‌ ಹಾಗೂ ಸಂಜಯ್‌ ರಾವತ್‌ ಶನಿವಾರ ಭೇಟಿ ಮಾಡಿ ಎರಡು ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದು, ಮಹಾರಾಷ್ಟ್ರದಲ್ಲಿ ಹಲವು ಚರ್ಚೆಗಳನ್ನು ಹುಟ್ಟುಹಾಕಿತ್ತು.

'ಮಹಾ' ಸರಕಾರದಲ್ಲಿ ಬಿರುಕು..? ರಾವತ್, ಫಡ್ನವೀಸ್‌ ಭೇಟಿ ಬೆನ್ನಲ್ಲೇ ಉದ್ಧವ್‌ ಠಾಕ್ರೆ-ಪವಾರ್ ಮಾತುಕತೆ‌..!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ