ಆ್ಯಪ್ನಗರ

ಗಣೇಶನ ಹಬ್ಬಕ್ಕೂ ವಿಘ್ನವಾದ ಕೊರೊನಾ, ಮುಂಬಯಿನ ಸುಪ್ರಸಿದ್ದ ಗಣೇಶೋತ್ಸವ ಕ್ಯಾನ್ಸಲ್‌!

​​ಮುಂಬಯಿನ ಅತ್ಯಂತ ಪ್ರಸಿದ್ದ ಲಾಲಭಾಗ್‌ಚ ರಾಜ ಗಣೇಶೋತ್ಸವಕ್ಕೆ ಕೊರೊನಾ ಕರಿ ಛಾಯೆ ಮೂಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ಲಾಲಭಾಗ್‌ಚ ರಾಜ ಗಣೇಶ ಮಂಡಲ ಕಾರ್ಯದರ್ಶಿ ಸುಧೀರ್‌ ಸಾಲ್ವಿ, ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಈ ಬಾರಿ ಗಣೇಶೋತ್ಸವ ರದ್ದುಪಡಿಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.

TIMESOFINDIA.COM 1 Jul 2020, 12:15 pm
ಮುಂಬಯಿ: ಗಣೇಶೋತ್ಸವ ಅಂದಾಗ ಥಟ್ಟಂತೆ ನೆನಪಾಗುವುದು ಮಹಾನಗರಿ ಮುಂಬಯಿ. ಜುಲೈ ಹಾಗೂ ಆಗಸ್ಟ್‌ನಲ್ಲಿ ಇಲ್ಲಿನ ಅನೇಕ ಕಡೆಗಳಲ್ಲಿ ಗಣೇಶನ ಉತ್ಸವ ಭರ್ಜರಿಯಾಗಿ ನಡೆಯತ್ತೆ. ಸಾವಿರಾರು ಸಂಖ್ಯೆಯಲ್ಲಿ ಸೇರುವ ಜನರು ಗಣೇಶನನ್ನ ಕೊಂಡಾಡುತ್ತಾರೆ. ಆದರೆ ಕೊರೊನಾ ಎಂಬ ಮಾರಿ ಇದೀಗ ವಿಘ್ನನಿವಾರಕ ಗಣೇಶನಿಗೂ ತಟ್ಟಿದೆ.
Vijaya Karnataka Web EbzzzOjXYAEUkgp


ಮುಂಬಯಿನ ಅತ್ಯಂತ ಪ್ರಸಿದ್ದ ಲಾಲಭಾಗ್‌ಚ ರಾಜ ಗಣೇಶೋತ್ಸವಕ್ಕೆ ಕೊರೊನಾ ಕರಿ ಛಾಯೆ ಮೂಡಿದೆ. ಈ ಬಗ್ಗೆ ಮಾಹಿತಿ ನೀಡಿರುವ ಲಾಲಭಾಗ್‌ಚ ರಾಜ ಗಣೇಶ ಮಂಡಲ ಕಾರ್ಯದರ್ಶಿ ಸುಧೀರ್‌ ಸಾಲ್ವಿ, ಕೊರೊನಾ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಈ ಬಾರಿ ಗಣೇಶೋತ್ಸವ ರದ್ದುಪಡಿಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ. ಅಲ್ಲದೇ ಗಣೇಶ ಉತ್ಸವ ನಡೆಸುವ ಸ್ಥಳದಲ್ಲಿ ರಕ್ತ ಹಾಗೂ ಪ್ಲಾಸ್ಮಾ ದಾನ ಕಾರ್ಯಕ್ರಮ ಏರ್ಪಾಡಿಸಲಿದ್ದೇವೆ ಎಂದು ತಿಳಿಸಿದ್ದಾರೆ.

ವೈಭವಾಗಿ ಗಣೇಶ ಉತ್ಸವ ನಡೆಸುವ ಬದಲು ಬಂದಿರುವ ಹಣವನ್ನ ಮಹಾರಾಷ್ಟ್ರ ಮುಖ್ಯಮಂತ್ರಿ ನಿಧಿಗೆ ನೀಡಲು ನಿರ್ಧರಿಸಿದ್ದೇವೆ. ಅಲ್ಲದೇ ಇತ್ತೀಚೆಗೆ ಗಲ್ವಾನ್‌ ಕಣಿವೆಯಲ್ಲಿ ಮಡಿದ ಹುತಾತ್ಮರ ಕುಟುಂಬವನ್ನ ಸನ್ಮಾನಿಸುವ ಕಾರ್ಯಕ್ರಮ ಇಟ್ಟುಕೊಂಡಿದ್ದೇವೆ ಎಂದು ಸುಧೀರ್‌ ತಿಳಿಸಿದ್ದಾರೆ. ಮುಂಬಯಿನಲ್ಲಿ ಭಾರೀ ವೈಭವದ ಮೂಲಕ ಗಣೇಶನ ಆರಾಧನೆ ನಡೆಯುತ್ತೆ. ಬಾಲಿವುಡ್‌ ಸ್ಟಾರ್‌ಗಳೆಲ್ಲ ಮುಂಬಯಿನ ವಿವಿಧ ಗಣೇಶ ಮಂಡಲಕ್ಕೆ ತೆರಳಿ ಪೂಜೆ ಸಲ್ಲಿಸುವ ರೂಢಿ ಇಲ್ಲಿದೆ.

ಮಿಲಿಟರಿ ಕ್ರಾಂತಿಯ ಭಯ: ಚೀನಾ ಗಲ್ವಾನ್ ಸಾವಿನ ಸಂಖ್ಯೆ ಹೇಳದಿರಲು ಕಾರಣ ಗೊತ್ತಾಯ್ತು!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ