ಆ್ಯಪ್ನಗರ

ಕೊರೊನಾ ಪಾಸಿಟಿವ್‌ ಎಂದು ಹೆಂಡತಿಯಿಂದ ನಾಪತ್ತೆ..! ಪ್ರೇಯಸಿಯೊಂದಿಗೆ ಪೊಲೀಸರಿಗೆ ಸಿಕ್ಕಿಬಿದ್ದ ಭೂಪ

ವಿವಾಹಿತ ವ್ಯಕ್ತಿಯೊಬ್ಬ ತನಗೆ ಕೊರೊನಾ ಪಾಸಿಟಿವ್‌ ಬಂದಿದೆ ಎಂದು ಹೆಂಡತಿಯ ಮುಂದೆ ಕಟ್ಟು ಕಥೆ ಕಟ್ಟಿ ಪ್ರೇಯಸಿಯೊಂದಿಗೆ ಸಂಸಾರ ಮಾಡುತ್ತಿದ್ದ ಎಂದರೇ ನಂಬಲೇಬೇಕು. ಹೌದು, ಹೌದು, ನವಿ ಮುಂಬಯಿಯ 28 ವರ್ಷದ ವಿವಾಹಿತ ವ್ಯಕ್ತಿ ತನಗೆ ಕೊರೊನಾ ಪಾಸಿಟಿವ್‌ ಬಂದಿದೆ ಎಂದು ಪತ್ನಿಯ ಬಳಿ ಹೇಳಿ ಜುಲೈ 24ರಂದು ನಾಪತ್ತೆಯಾಗಿದ್ದ.

TNN 17 Sep 2020, 8:41 pm
ನವಿ ಮುಂಬಯಿ: ನಮ್ಮಗಳ ನಡುವೆ ಎಂತೆಂಥ ಜನ ಇದ್ದಾರೆ ಅಂದ್ರೆ ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಹೌದು, ಯಾರ ಊಹೆಗೂ ನಿಲುಕದ ಪ್ರಕರಣವೊಂದು ಮಹಾರಾಷ್ಟ್ರದ ನವಿ ಮುಂಬೈನಲ್ಲಿ ನಡೆದಿದೆ. ವಿವಾಹಿತ ವ್ಯಕ್ತಿಯೊಬ್ಬ ತನಗೆ ಕೊರೊನಾ ಪಾಸಿಟಿವ್‌ ಬಂದಿದೆ ಎಂದು ಹೆಂಡತಿಯ ಮುಂದೆ ಕಟ್ಟು ಕಥೆ ಕಟ್ಟಿ ಪ್ರೇಯಸಿಯೊಂದಿಗೆ ಸಂಸಾರ ಮಾಡುತ್ತಿದ್ದ ಎಂದರೇ ನಂಬಲೇ ಬೇಕು.
Vijaya Karnataka Web navi mumbai covid positive hubby disappears found with lover in indore
ಕೊರೊನಾ ಪಾಸಿಟಿವ್‌ ಎಂದು ಹೆಂಡತಿಯಿಂದ ನಾಪತ್ತೆ..! ಪ್ರೇಯಸಿಯೊಂದಿಗೆ ಪೊಲೀಸರಿಗೆ ಸಿಕ್ಕಿಬಿದ್ದ ಭೂಪ


ಹೌದು, ನವಿ ಮುಂಬಯಿಯ 28 ವರ್ಷದ ವಿವಾಹಿತ ವ್ಯಕ್ತಿ ತನಗೆ ಕೊರೊನಾ ಪಾಸಿಟಿವ್‌ ಬಂದಿದೆ ಎಂದು ಪತ್ನಿಯ ಬಳಿ ಹೇಳಿ ಜುಲೈ 24ರಂದು ನಾಪತ್ತೆಯಾಗಿದ್ದ. ಆತನನ್ನು ಇತ್ತೀಚೆಗೆ ಪೊಲೀಸರು ಇಂದೋರ್‌ನಲ್ಲಿ ಆತನ ಪ್ರೇಯಸಿಯೊಂದಿಗೆ ಇರುವುದನ್ನು ಪತ್ತೆಹಚ್ಚಿದ್ದು, ಭಾರೀ ಕಟ್ಟು ಕಥೆಯೊಂದು ಬಹಿರಂಗವಾಗಿದೆ.

ಜುಲೈ 24 ರಂದು ನವಿ ಮುಂಬೈನ ತಲೋಜಾದಲ್ಲಿ ವಾಸಿಸುತ್ತಿದ್ದ ವ್ಯಕ್ತಿಯು ತನ್ನ ಹೆಂಡತಿಗೆ ಕರೆ ಮಾಡಿ ಕೊರೊನಾ ಪಾಸಿಟಿವ್‌ ಬಂದಿದೆ ಎಂದು ಸುಳ್ಳು ಹೇಳಿ ಸಾಯುವುದಾಗಿಯೂ ತಿಳಿಸಿದ್ದಾನೆ ಎಂದು ಸಹಾಯಕ ಪೊಲೀಸ್ ಆಯುಕ್ತ ವಿನಾಯಕ ವಾಸ್ತ್ ಹೇಳಿದ್ದಾರೆ. ಬಳಿಕ ಆತನ ಮೊಬೈಲ್‌ ಸ್ವಿಚ್‌ ಆಫ್‌ ಆಗಿತ್ತು. ಮರುದಿನ ಆತನ ಸಹೋದರನಿಗೆ ವಾಷಿಯ ರಸ್ತೆಯಲ್ಲಿ ಬೈಕ್‌, ಕೀ, ಹೆಲ್ಮೆಟ್‌ ಮತ್ತು ಆಫೀಸ್‌ ಬ್ಯಾಗ್‌ ಸಿಕ್ಕಿದೆ. ಆದ್ದರಿಂದ ಆತನ ಕುಟುಂಬಸ್ಥರು ವಾಷಿ ಪೊಲೀಸ್‌ ಠಾಣೆಯಲ್ಲಿ ನಾಪತ್ತೆ ದೂರನ್ನು ದಾಖಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಆಸ್ಪತ್ರೆ ಎದುರು ಪ್ರತಿಭಟಿಸಿದ್ದಕ್ಕೆ ಮಹಾರಾಷ್ಟ್ರ ಪರಿಷತ್‌ ವಿಪಕ್ಷ ನಾಯಕನ ವಿರುದ್ಧ ಕೇಸ್‌..!

ನಾಪತ್ತೆ ದೂರನ್ನು ಪಡೆದ ಪೊಲೀಸರು ಪರೀಕ್ಷಾ ಪ್ರಯೋಗಾಲಯ, ಕೊರೊನಾ ಕೇಂದ್ರ ಸೇರಿ ವಾಷಿಯ ಬೀದಿಗಳಲ್ಲೂ ಹುಡುಕಲಾಯಿತು. ಆದರೆ, ನಮಗೆ ಏನು ಸಿಗಲಿಲ್ಲ ಎಂದು ಹಿರಿಯ ಪೊಲೀಸ್ ಇನ್‌ಸ್ಪೆಕ್ಟರ್ ಸಂಜೀವ್ ಧುಮಾಲ್ ಹೇಳಿದರು. ಆತನ ಸೆಲ್‌ಫೋನ್‌ ಟ್ರಾಕ್‌ ಮಾಡಲು ಪೊಲೀಸರು ಬಹಳಷ್ಟು ಪ್ರಯತ್ನಿಸಿದ್ದರು. ಕೊನೆಗೆ ಕಳೆದ ವಾರ ಇಂದೋರ್‌ನಲ್ಲಿ ಮೊಬೈಲ್‌ ಲೊಕೇಷನ್‌ ಪತ್ತೆಯಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಶಿವಸೇನೆಗೆ ಕಂಗನಾ ಸಮಸ್ಯೆಯೇ ಅಲ್ಲ, ದೇಶದಲ್ಲಿ ಬಹಳಷ್ಟು ಸಮಸ್ಯೆಗಳಿವೆ: ಸಂಜಯ್‌ ರಾವತ್‌

ಅದರಿಂದ ನಾಪತ್ತೆಯಾದ ವ್ಯಕ್ತಿ ಇಂದೋರ್‌ನಲ್ಲಿ ವಿವಾಹೇತರ ಸಂಬಂಧದಲ್ಲಿದ್ದಾನೆ ಎಂದು ಪೊಲೀಸರಿಗೆ ಗೊತ್ತಾಗಿದೆ. ನಂತರ ಪೊಲೀಸ್ ತಂಡ ಇಂದೋರ್ ತಲುಪಿದೆ. ಅಲ್ಲಿ ತನ್ನ ಗುರುತನ್ನು ಬದಲಾಯಿಸಿ ಸ್ಥಳ ಬಾಡಿಗೆ ಪಡೆದಿದ್ದ. ಆತನನ್ನು ಬುಧವಾರ ನವಿ ಮುಂಬಯಿಗೆ ಕರೆತರಲಾಗಿದ್ದು, ಆತನ ಹೆಂಡತಿಯ ವಶಕ್ಕೆ ನೀಡಿದ್ದೇವೆ ಎಂದು ಧುಮಾಲ್‌ ಹೇಳಿದ್ದಾರೆ.

ಕಂಗನಾಗೆ ಬಿಜೆಪಿ ಬೆಂಬಲ ದುರದೃಷ್ಟಕರ: ಸಂಜಯ್‌ ರಾವತ್..! ಸಂಸದರ ಟೀಕೆಗೆ ನಟಿಯಿಂದ ಖಡಕ್‌ ಪ್ರತಿಕ್ರಿಯೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ