ಆ್ಯಪ್ನಗರ

ಧಾರ್ಮಿಕ ಕ್ಷೇತ್ರಗಳನ್ನು ತೆರೆಯವ ವಿಚಾರದಲ್ಲಿ ಉದ್ಧವ್-ರಾಜ್ಯಪಾಲರ ನಡುವೆ ವಾಕ್ಸಮರ: ಬಿಜೆಪಿ ಪ್ರತಿಭಟನೆ!

ಮಹಾರಾಷ್ಟದ ಎಲ್ಲಾ ಧಾರ್ಮಿಕ ಕ್ಷೇತ್ರಗಳನ್ನು ಪುನಃ ತೆರೆಯಬೇಕು ಎಂಬ ಕೂಗು ಕೇಳಿ ಬಂದಿದ್ದು, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ರಾಜ್ಯ ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿಲ್ಲ. ಈ ಕುರಿತು ರಾಜ್ಯಪಾಲ ಹಾಗೂ ಮುಖ್ಯಮಂತ್ರಿ ನಡುವೆ ವಾಕ್ಸಮರ ನಡೆದಿದ್ದರೆ, ಬಿಜೆಪಿ ಧಾರ್ಮಿಕ ಕ್ಷೇತ್ರಗಳನ್ನು ಪುನಃ ತೆರೆಯುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದೆ.

Vijaya Karnataka Web 13 Oct 2020, 4:00 pm
ಮುಂಬಯಿ: ಮುಂಬಯಿನ ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನವೂ ಸೇರಿದಂತೆ ಮಹಾರಾಷ್ಟದ ಎಲ್ಲಾ ಧಾರ್ಮಿಕ ಕ್ಷೇತ್ರಗಳನ್ನು ಪುನಃ ತೆರೆಯುವ ವಿಚಾರದಲ್ಲಿ ಗೊಂದಲ ಮೂಡಿದೆ.
Vijaya Karnataka Web Siddhivinayak Temple
ಧಾರ್ಮಿಕ ಕ್ಷೇತ್ರಗಳನ್ನು ಪುನ: ತೆರೆಯುವ ಕುರಿತು ಮಹಾರಾಷ್ಟ್ರದಲ್ಲಿ ವಿವಾದ


ಮಾರಕ ಕೊರೊನಾ ವೈರಸ್ ಹಾವಳಿಯ ಪರಿಣಾಮವಾಗಿ ಹೇರಲಾಗಿದ್ದ ಲಾಕ್‌ಡೌನ್ ವೇಳೆ ಮಹಾರಾಷ್ಟ್ರದ ಎಲ್ಲಾ ಧಾರ್ಮಿಕ ಕ್ಷೇತ್ರಗಳನ್ನು ಬಂದ್ ಮಾಡಿ ಆದೇಶ ಹೊರಡಿಸಲಾಗಿತ್ತು.

ಇದೀಗ ಮುಂಬಯಿನ ಸಿದ್ಧಿವಿನಾಯಕ ದೇವಸ್ಥಾನವೂ ಸೇರಿದಂತೆ ಎಲ್ಲಾ ಧಾರ್ಮಿಕ ಕ್ಷೇತ್ರಗಳನ್ನು ಪುನಃ ತೆರೆಯಬೇಕು ಎಂಬ ಕೂಗು ಕೇಳಿ ಬಂದಿದ್ದು, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ರಾಜ್ಯ ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿಲ್ಲ.

ಮಂತ್ರಾಲಯ ರಾಘವೇಂದ್ರ ಸ್ವಾಮಿ ಮಠ ಪುನಾರಂಭ: ದರ್ಶನಕ್ಕೆ ನೂರೆಂಟು ಕಟ್ಟುಪಾಡು

ರಾಜ್ಯ ಸರ್ಕಾರದ ನಿರ್ಧಾರ ಹೊಸ ವಿವಾದವನ್ನು ಸೃಷ್ಟಿಸಿದ್ದು, ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಹಾಗೂ ಉದ್ಧವ್ ಠಾಕ್ರೆ ನಡುವೆ ವಾಕ್ಸಮರಕ್ಕೂ ಕಾರಣವಾಗಿದೆ.

ಜನರ ಅಭಿಲಾಷೆಯಂತೆ ಧಾರ್ಮಿಕ ಕ್ಷೇತ್ರಗಳನ್ನು ತೆರೆದು ಭಕ್ತರಿಗೆ ದೇವರ ದರ್ಶನಕ್ಕೆ ಅನುಕೂಲ ಮಾಡಿಕೊಡಬೇಕು ಎಂಬ ಅಭಿಪ್ರಾಯವನ್ನು ಮನ್ನಿಸುವಂತೆ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಮನವಿ ಮಾಡಿ ಪತ್ರ ಬರೆದಿದ್ದಾರೆ.

ಹಿಂದುತ್ವದ ಪ್ರಬಲ ಪ್ರತಿಪಾದಕರಾಗಿದ್ದ ನೀವು ದೇವಸ್ಥಾನಗಳನ್ನು ತೆರೆಯಲು ಅವಕಾಶ ಮಾಡಿಕೊಡದಿರುವುದು ಆಶ್ಚರ್ಯ ತಂದಿದೆ ಎಂದು ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಹೇಳಿರುವುದು ಗಮನ ಸೆಳೆದಿದೆ.

ಲಾಕ್‌ಡೌನ್‌ ಬಳಿಕ ಅ.16 ರಿಂದ ತೆರೆಯಲಿದೆ ಶಬರಿಮಲೆ, ಏನೆಲ್ಲಾ ನಿರ್ಬಂಧಗಳಿವೆ?

ಆದರೆ ರಾಜ್ಯಪಾಲರ ಹೇಳಿಕೆ ಖಂಡಿಸಿರುವ ಉದ್ಧವ್ ಠಾಕ್ರೆ, ಹಿಂದುತ್ವದ ಕುರಿತಾದ ನನ್ನ ಬದ್ಧತೆಗೆ ಯಾರಿದಂಲೂ ಪ್ರಮಾಣಪತ್ರ ಬೇಕಿಲ್ಲ ಎಂದು ಹರಿಹಾಯ್ದಿದ್ದಾರೆ. ಅಲ್ಲದೇ ದೇವಸ್ಥಾನ ತೆರೆಯುವುದಕ್ಕೂ ಹಿಂದುತ್ವಕ್ಕೂ ಏನು ಸಂಬಂಧ ಎಂದು ಉದ್ಧವ್ ಪ್ರಶ್ನಿಸಿದ್ದಾರೆ.


ಏಕಾಏಕಿ ಲಾಕ್‌ಡೌನ್ ಘೋಷಣೆ ಮಾಡುವುದು ಹೇಗೆ ಸರಿಯಲ್ಲವೋ, ಹಾಗೆಯೇ ಏಕಾಏಕಿ ಲಾಕ್‌ಡೌನ್‌ನನ್ನು ಹಿಂಪಡೆಯುವುದೂ ಸರಿಯಲ್ಲ. ಜನರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಧಾರ್ಮಿಕ ಕ್ಷೇತ್ರಗಳನ್ನು ಪುನಃ ತೆರೆಯುವ ಕುರಿತು ಮತ್ತಷ್ಟು ಚಿಂತನೆ ನಡೆಸಲಾಗುತ್ತಿದೆ ಎಂದು ಉದ್ಧವ್ ಸ್ಪಷ್ಟಪಡಿಸಿದ್ದಾರೆ.

ಬಿಜೆಪಿ ಪ್ರತಿಭಟನೆ:
ಇನ್ನು ಮುಂಬಯಿನ ಪ್ರಸಿದ್ಧ ಸಿದ್ಧಿವಿನಾಯಕ ದೇವಸ್ಥಾನವೂ ಸೇರಿದಂತೆ ಮಹಾರಾಷ್ಟದ ಎಲ್ಲಾ ಧಾರ್ಮಿಕ ಕ್ಷೇತ್ರಗಳನ್ನು ಪುನಃ ತೆರೆಯುವಂತೆ ಆಗ್ರಹಿಸಿ, ಪ್ರತಿಪಕ್ಷ ಬಿಜೆಪಿ ಪ್ರತಿಭಟನೆ ನಡೆಸಿದೆ.


ಪ್ರತಿಭಟನೆಯ ನೇತೃತ್ವವಹಿಸಿದ್ದ ಬಿಜೆಪಿ ನಾಯಕ ಪ್ರಸಾದ್ ಲಾಡ್, ಸಿದ್ಧಿವಿನಾಯಕ ದೇವಸ್ಥಾನಕ್ಕೆ ಪ್ರವೇಶ ನಿರಾಕರಿಸಿದರೆ ಒತ್ತಾಯದಿಂದ ದೇವಸ್ಥಾನವನ್ನು ಪ್ರವೇಶ ಮಾಡುವುದಾಗಿ ಹೇಳಿದ್ದಾರೆ.

ಬೆಂಗಳೂರು: ಲಾಕ್‌ಡೌನ್‌ ತೆರವು ನಂತರ ಹೆಚ್ಚಿದ ಭಕ್ತರು..! ಹುಂಡಿ ಹಣ ಸಂಗ್ರಹದಲ್ಲಿ ಏರಿಕೆ

ಈ ವೇಳೆ ಸಿದ್ಧವಿನಾಯಕ ದೇವಸ್ಥಾನದತ್ತ ಹೊರಟಿದ್ದ ಬಿಜೆಪಿ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಧಾರ್ಮಿಕ ಕ್ಷೇತ್ರಗಳ ಪುನಃ ತೆರೆಯುವ ವಿಚಾರಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರದಲ್ಲಿ ಹೊಸ ವಿವಾದ ಭುಗಿಲೆದ್ದಿದೆ .

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ