ಆ್ಯಪ್ನಗರ

ಕಾಸ್ಟ್ಲೀ ಮಾಸ್ಕ್‌.! ಈ ಚಿನ್ನದ ಮಾಸ್ಕ್‌ನ ಬೆಲೆ ಬರೋಬ್ಬರಿ 2.89 ಲಕ್ಷ ರೂಪಾಯಿ

ಪುಣೆ ಜಿಲ್ಲೆಯ ಪಿಂಪರಿ-ಚಿಂಚವಾಡ ನಿವಾಸಿಯಾಗಿರುವ ಶಂಕರ್ ಕುರಾಡೆಗೆ ಚಿನ್ನಾಭರಣಗಳ ಬಗ್ಗೆ ವಿಶೇಷ ಒಲವು ಇದೆಯಂತೆ. ಈಗ ಹೇಗೂ ಕೊರೊನಾ ವೈರಸ್‌ ರೋಗ ವ್ಯಾಪಕವಾಗಿ ಹರಡ್ತಿದೆ. ಮಾಸ್ಕ್‌ ಧರಿಸುವುದು ಕಡ್ಡಾಯವಾಗಿರೋದ್ರಿಂದ ಚಿನ್ನದ ಮಾಸ್ಕ್ ತಯಾರಿಸಿರುವುದಾಗಿ ಅವರು ತಿಳಿಸಿದ್ದಾರೆ.

ANI 4 Jul 2020, 11:31 am
ಪುಣೆ: ದೇಶದಲ್ಲಿ ಕೊರೊನಾ ಮಹಾಮಾರಿ ಲಗ್ಗೆ ಇಟ್ಟಾಗಿನಿಂದ ಜನರು ಆತಂಕಿತರಾಗಿ ಬದುಕುತ್ತಾ ಇದ್ದರೆ, ಕೊರೊನಾ ವಾರಿಯರ್ಸ್ ತಮ್ಮ ಪ್ರಾಣವನ್ನೇ ಒತ್ತೆ ಇಟ್ಟು ರೋಗದ ವಿರುದ್ಧ ಹೋರಾಡುತ್ತಾ ಇದ್ದಾರೆ. ಈ ಮಧ್ಯೆ ಜನರು ಕೂಡ ಈ ಸಮಯದಲ್ಲಿ ಸಂದರ್ಭಕ್ಕೆ ತಕ್ಕಂತೆ ಬದುಕುವ ದಾರಿಯನ್ನು ರೂಢಿಸಿಕೊಂಡಿದ್ದರು. ಒಂದಷ್ಟು ಜನ ತಮ್ಮ ಉಡುಪಿಗೆ ಹೊಂದಾಣಿಕೆಯಾಗುವ ಮಾಸ್ಕ್‌ಗಳನ್ನು ಹಾಕಿಕೊಂಡು ತಾವು ಎಲ್ಲರಿಗಿಂತ ಭಿನ್ನ ಅಂತಾ ಅನಿಸಿಕೊಳ್ಳೋಕೆ ಹೋದರೆ ಇಲ್ಲೊಬ್ಬ ಮಾತ್ರ ನಾನೇ ಬೇರೆ ನನ್ನ ಸ್ಟೈಲೇ ಬೇರೆ ಅಂತಾ ನಿಮ್ಮೆಲ್ಲರಿಗಿಂತಲೂ ನಾನೇ ವಿಭಿನ್ನ ಅನಿಸಿಕೊಂಡಿದ್ದಾನೆ.
Vijaya Karnataka Web GOLDEN MASK


ಖಾಸಗಿತನಕ್ಕೆ ಧಕ್ಕೆ ಆರೋಪ: ನಮೋ ಆ್ಯಪ್ ನಿಷೇಧಕ್ಕೆ ಹಿರಿಯ ಕಾಂಗ್ರೆಸ್ ನಾಯಕನ ಆಗ್ರಹ!

ಮಹಾರಾಷ್ಟ್ರದ ಶಂಕರ್ ಕುರಾಡೆ ಎಂಬಾತ ಈ ವಿಭಿನ್ನ ವ್ಯಕ್ತಿಯಾಗಿದ್ದು ಚಿನ್ನದ ಮಾಸ್ಕ್ ಹಾಕೋ ಮೂಲಕ ಜನರಿಂದ ಆಕರ್ಷಣೆಗೆ ಒಳಗಾಗಿದ್ಧಾರೆ. ವಿಶೇಷ ಅಂದರೆ ಬರೋಬ್ಬರಿ 2.89 ಲಕ್ಷ ರೂಪಾಯಿ ಮೌಲ್ಯದ ಮಾಸ್ಕ್‌ ಇದಾಗಿದ್ದು, ಸ್ಥಳೀಯ ಜನರು ಈ ವ್ಯಕ್ತಿಯ ಮಾಸ್ಕ್‌ ನೋಡಲೆಂದೇ ಆತನ ಹತ್ತಿರ ಬರುತ್ತಿದ್ದಾರೆ ಎನ್ನಲಾಗಿದೆ.

ಗಣೇಶನ ಹಬ್ಬಕ್ಕೂ ವಿಘ್ನವಾದ ಕೊರೊನಾ, ಮುಂಬಯಿನ ಸುಪ್ರಸಿದ್ದ ಗಣೇಶೋತ್ಸವ ಕ್ಯಾನ್ಸಲ್‌!

ಪುಣೆ ಜಿಲ್ಲೆಯ ಪಿಂಪರಿ-ಚಿಂಚವಾಡ ನಿವಾಸಿಯಾಗಿರುವ ಶಂಕರ್ ಕುರಾಡೆಗೆ ಚಿನ್ನಾಭರಣಗಳ ಬಗ್ಗೆ ವಿಶೇಷ ಒಲವು ಇದೆಯಂತೆ. ಈಗ ಹೇಗೂ ಕೊರೊನಾ ವೈರಸ್‌ ರೋಗ ವ್ಯಾಪಕವಾಗಿ ಹರಡ್ತಿದೆ. ಮಾಸ್ಕ್‌ ಧರಿಸುವುದು ಕಡ್ಡಾಯವಾಗಿರೋದ್ರಿಂದ ಚಿನ್ನದ ಮಾಸ್ಕ್ ತಯಾರಿಯ ಯೋಚನೆ ಬಂತು ಎಂದು ಶಂಕರ್ ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಜುಲೈ 31ರವರೆಗೆ ಲಾಕ್‌ಡೌನ್‌ ವಿಸ್ತರಣೆ

ತೆಳು ಪದರದಿಂದ ಮಾಡಲ್ಪಟ್ಟಿರುವ ಈ ಚಿನ್ನದ ಮಾಸ್ಕ್‌ ಐದು ರಂಧ್ರಗಳನ್ನು ಹೊಂದಿದೆ. ಹೀಗಾಗಿ ಉಸಿರಾಟ ನಡೆಸಲು ಯಾವುದೇ ಅಡ್ಡಿಇಲ್ಲ. ಈ ಚಿನ್ನದ ಮಾಸ್‌ ಎಷ್ಟು ಪರಿಣಾಮಕಾರಿ ಅನ್ನೋದರ ಕುರಿತು ನನಗೆ ಮಾಹಿತಿ ಇಲ್ಲ ಎಂದು ಶಂಕರ್ ಕುರಾಡೆ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ