ಆ್ಯಪ್ನಗರ

ನಾಲೆಗೆ ಉರುಳಿಬಿದ್ದ ಗೂಡ್ಸ್ ವ್ಯಾನ್

ಗೂಡ್ಸ್ ವ್ಯಾನ್‌ವೊಂದು ಇಲ್ಲಿನ ಹಾಸನ ರಸ್ತೆಯ ಚಾಮರಾಜ ಬಲದಂಡೆ ನಾಲೆಗೆ ಉರುಳಿಬಿದ್ದು, ಚಾಲಕ ಹಾಗೂ ಮತ್ತೊಬ್ಬ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. , ಮುನ್ನೆಚ್ಚರಿಕೆಯಿಂದ ವ್ಯಾನ್‌ನಿಂದ ಕೆಳಗಿಳಿದ 10ಕ್ಕೂ ಹೆಚ್ಚು ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬುಧವಾರ ಸಂಜೆ ನಡೆದಿದೆ.

Vijaya Karnataka Web 23 Feb 2017, 8:50 am
ಕೃಷ್ಣರಾಜನಗರ : ಗೂಡ್ಸ್ ವ್ಯಾನ್‌ವೊಂದು ಇಲ್ಲಿನ ಹಾಸನ ರಸ್ತೆಯ ಚಾಮರಾಜ ಬಲದಂಡೆ ನಾಲೆಗೆ ಉರುಳಿಬಿದ್ದು, ಚಾಲಕ ಹಾಗೂ ಮತ್ತೊಬ್ಬ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ. , ಮುನ್ನೆಚ್ಚರಿಕೆಯಿಂದ ವ್ಯಾನ್‌ನಿಂದ ಕೆಳಗಿಳಿದ 10ಕ್ಕೂ ಹೆಚ್ಚು ಕಾರ್ಮಿಕರು ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಬುಧವಾರ ಸಂಜೆ ನಡೆದಿದೆ.
Vijaya Karnataka Web
ನಾಲೆಗೆ ಉರುಳಿಬಿದ್ದ ಗೂಡ್ಸ್ ವ್ಯಾನ್


ಘಟನೆಯಲ್ಲಿ ವ್ಯಾನ್ ಚಾಲಕ ಮನು (25) ಸೇರಿದಂತೆ ಮತ್ತೊಬ್ಬರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪಟ್ಟಣದ ಆದಿಶಕ್ತಿ ಬಡಾವಣೆಯ ಗುತ್ತಿಗೆದಾರರೊಬ್ಬರ ವ್ಯಾನ್ ಇದಾಗಿದ್ದು, ಪ್ರತಿದಿನ ಕಾರ್ಮಿಕರನ್ನು ಕರೆದುಕೊಂಡು ಕಾಂಕ್ರಿಟ್ ಮಿಕ್ಸರ್‌ನೊಂದಿಗೆ ತೆರಳುತ್ತಿದ್ದರು.

ಅಂತೆಯ ಬುಧವಾರ ಪಟ್ಟಣದ ಹೊರವಲಯದಲ್ಲಿ ಕಾಂಕ್ರಿಟ್ ಮಿಕ್ಸರ್ ಮಾಡಿ ನಂತರ ಸಂಜೆ ಇಲ್ಲಿನ ಚಾಮರಾಜ ಬಲದಂಡೆ ನಾಲೆ ಏರಿಯ ಮೇಲೆ ಬರುವಾಗ ಘಟನೆ ನಡೆದಿದ್ದು ವ್ಯಾನ್ ನಾಲಾ ಏರಿಯಿಂದ ಹಾಸನ ಮುಖ್ಯ ರಸ್ತೆ ತಲುಪುವ ಜಾಗದಲ್ಲಿ ಎತ್ತರ ಪ್ರದೇಶ ಇರುವ ಕಾರಣ ಮೇಲೆದ್ದು ಕೆಳಗೆ ಬಿದ್ದಿದೆ. ಈ ಸಂದರ್ಭದಲ್ಲಿ ವ್ಯಾನ್‌ನಲ್ಲಿದ್ದ 10ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ವ್ಯಾನ್ ದಿಬ್ಬ ಏರಲು ಆಗದೇ ಹೋದ ವೇಳೆ ಭಯಗೊಂಡು ವ್ಯಾನ್‌ನಿಂದ ಇಳಿದಿದ್ದಾರೆ. ಈ ವೇಳೆ ಮುಂದೆ ಸಾಗಿದ ವ್ಯಾನ್ ಕಾಲುವೆ ನಾಳೆ ಒಳಗೆ ಬಿದ್ದಿದೆ. ಎಲ್ಲಾ ಕಾರ್ಮಿಕರು ಮುನ್ನೆಚ್ಚರಿಕೆಯಿಂದ ವ್ಯಾನ್‌ನಿಂದ ಕೆಳಗಿಳಿದ ಕಾರಣ ಆಗುತ್ತಿದ್ದ ಭಾರಿ ಅನಾಹುತ ತಪ್ಪಿದ್ದು, ಕಾರ್ಮಿಕರೆಲ್ಲರೂ ನಿಟ್ಟುಸಿರು ಬಿಟ್ಟಿದ್ದಾರೆ.

ಘಟನೆ ಸಂಬಂಧ ಇದುವರೆವಿಗೆ ಯಾವುದೇ ದೂರು ದಾಖಲಾಗಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ