ಆ್ಯಪ್ನಗರ

ಎರಡನೇ ಮದುವೆಗೆ ಯತ್ನಿಸಿ ಸಿಕ್ಕಿಬಿದ್ದ ಪೇದೆ !

ಎರಡನೇ ಮದುವೆಗೆ ಯತ್ನಿಸಿದ ಮುಖ್ಯಪೇದೆಯೊಬ್ಬ, ಮೊದಲ ಪತ್ನಿಗೆ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾನೆ.

Vijaya Karnataka 10 Jul 2018, 9:06 pm
ಮೈಸೂರು: ಎರಡನೇ ಮದುವೆಗೆ ಯತ್ನಿಸಿದ ಮುಖ್ಯಪೇದೆಯೊಬ್ಬ, ಮೊದಲ ಪತ್ನಿಗೆ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾನೆ.
Vijaya Karnataka Web
ಎರಡನೇ ಮದುವೆಗೆ ಯತ್ನಿಸಿ ಸಿಕ್ಕಿಬಿದ್ದ ಪೇದೆ !


ನಗರ ಸಶಸ್ತ್ರಮೀಸಲು ಪಡೆಯ ಮುಖ್ಯಪೇದೆಯೇ ಎರಡನೇ ಮದುವೆಗೆ ಯತ್ನಿಸಿದವ.

ಹುಣಸೂರು ತಾಲೂಕಿನ ಹೊಸಹಳ್ಳಿ ನಿವಾಸಿಯಾದ ಪೇದೆ 18 ವರ್ಷದ ಹಿಂದೆ ವಡೆರಹೊಸಳ್ಳಿಯ ಯುವತಿಯನ್ನು ಮದುವೆಯಾಗಿದ್ದು, ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಈ ಮಧ್ಯೆ ಫೇಸ್‌ಬುಕ್‌ನಲ್ಲಿ ಪರಿಚಯವಾದ ಬೆಂಗಳೂರು ಮೂಲದ ಮಹಿಳೆಯೊಂದಿಗೆ ಪ್ರೇಮಾಂಕುರವಾಗಿದ್ದು, ಭಾನುವಾರ ಬೆಳಗ್ಗೆ ವಿಜಯನಗರದ ಯೋಗನರಸಿಂಹ ಸ್ವಾಮಿ ದೇಗುಲದಲ್ಲಿ ಮದುವೆಯಾಗಲು ಮುಂದಾಗಿದ್ದಾರೆ. ಈ ಮಾಹಿತಿಯನ್ನು ತಿಳಿದ ಮೊದಲ ಪತ್ನಿ ಮದುವೆ ಆಗುತ್ತಿರುವ ಸ್ಥಳಕ್ಕೆ ಆಗಮಿಸಿ, ಆತನಿಗೆ ಧರ್ಮದೇಟು ನೀಡಿದ್ದಾಳೆ. ನಂತರ ಇಬ್ಬರೂ ವಿಜಯನಗರ ಪೊಲೀಸ್‌ ಠಾಣೆಗೆ ಹೋಗಿದ್ದಾರೆ. ''ಎಲ್‌ಐಸಿ ಬಾಂಡ್‌ ಎಂದು ಸುಳ್ಳು ಹೇಳಿ ವಿಚ್ಛೇದನ ಪತ್ರಕ್ಕೆ ಸಹಿ ಹಾಕಿಸಿಕೊಂಡು ಮೋಸ ಮಾಡಿದ್ದಾನೆ. ಅಲ್ಲದೇ ವಿಚ್ಛೇದನ ಕೂಡ ಇತ್ಯರ್ಥವಾಗಿಲ್ಲ,'' ಎಂದು ಆರೋಪಿಸಿದ್ದಾರೆ.

ಈ ಸಂಬಂಧ ಪೊಲೀಸ್‌ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ