Please enable javascript.ದಾರ್ಶನಿಕರಿಗೂ ವಾಲ್ಮೀಕಿ ದಾರಿದೀಪ - ದಾರ್ಶನಿಕರಿಗೂ ವಾಲ್ಮೀಕಿ ದಾರಿದೀಪ - Vijay Karnataka

ದಾರ್ಶನಿಕರಿಗೂ ವಾಲ್ಮೀಕಿ ದಾರಿದೀಪ

ವಿಕ ಸುದ್ದಿಲೋಕ 21 Oct 2013, 9:35 pm
Subscribe

ಪಿತೃವಾಕ್ಯ ಪರಿಪಾಲನೆ, ಸಹೋದರತ್ವ ಮತ್ತು ಪರಿಸರದ ರಮಣೀಯತೆ ಬಗ್ಗೆ ದಾಖಲಿಸುವ ಮೂಲಕ ಮಹರ್ಷಿ ವಾಲ್ಮಿಕಿಯವರು ಈ ಮನುಕುಲ ಕಂಡ ಆದಿಕವಿ ಎಂದು ಪ್ರಾಧ್ಯಾಪಕ ಪುಟ್ಟರಾಜು ಶ್ಲಾಘಿಸಿದರು.

ದಾರ್ಶನಿಕರಿಗೂ ವಾಲ್ಮೀಕಿ ದಾರಿದೀಪ
ಹುಣಸೂರು: ಶಿಕ್ಷಣ, ಭ್ರಾತೃತ್ವ, ಪಿತೃವಾಕ್ಯ ಪರಿಪಾಲನೆ, ಸಹೋದರತ್ವ ಮತ್ತು ಪರಿಸರದ ರಮಣೀಯತೆ ಬಗ್ಗೆ ದಾಖಲಿಸುವ ಮೂಲಕ ಸಮಾಜದ ಕಣ್ಣು ತೆರೆಸಿರುವ ಮಹರ್ಷಿ ವಾಲ್ಮಿಕಿಯವರು ಈ ಮನುಕುಲ ಕಂಡ ಆದಿಕವಿ ಎಂದು ಮಹಾರಾಣಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಪುಟ್ಟರಾಜು ಶ್ಲಾಘಿಸಿದರು.

ಪಟ್ಟಣದ ಡಿ.ದೇವರಾಜ ಅರಸು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್‌ಎಸ್‌ಎಸ್ ಸಾಂಸ್ಕೃತಿಕ ವಿಭಾಗದಿಂದ ಆಯೋಜಿ ಸಿದ ವಾಲ್ಮಿಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಬುದ್ದ, ಬಸವ, ಕನಕದಾಸ ಮತ್ತು ಗಾಂಧೀಜಿಯಂತಹ ದಾರ್ಶನಿಕರಿಗೂ ವಾಲ್ಮೀಕಿ ರಾಮಾಯಣ ದಾರಿದೀಪವಾಗಿದೆ ಎಂದರು.

ಅವರ ಕೃತಿಯಲ್ಲಿರುವ ಪಿತವಾಕ್ಯಪರಿಪಾಲನೆ, ರಾಮ- ಲಕ್ಷ್ಮಣರ ಸಹೋದರ ಭಾವನೆ ಇಂದಿನ ಯುವ ಪೀಳಿಗೆಯಲ್ಲಿ ಕಂಡು ಬರುತ್ತಿಲ್ಲ. ಇಂಥ ಮಹನೀಯರ ಆದರ್ಶದ ಬದುಕು ವಿದ್ಯಾರ್ಥಿ ಸಮೂಹಕ್ಕೆ ಅಗತ್ಯ ಎಂದರು.

ರಾಮಾಯಣದಲ್ಲಿ ವೈವಿಧ್ಯಮಯ ಕಾವ್ಯವಲ್ಲದೆ ತತ್ವಜ್ಞಾನಿ, ಶಿಕ್ಷಣ ಪ್ರೇಮಿ, ಶೋಷಿತರ ಆಶಾಕಿರಣ, ರಾಜನೀತಿ, ಸಮಾನತೆ ಕಾಣಬಹುದು. ಇವರದೇ ಆದ ತತ್ತ್ವಜ್ಞಾನ-ತಂತ್ರಜ್ಞಾನ
ಇಂದಿಗೂ ಬಳಸಿಕೊಳ್ಳಲಾಗುತ್ತಿದೆ. ಅದರಲ್ಲಿನ ರಾಜಕೀಯ ಇತಿಹಾಸದ ಬಗ್ಗೆ ಇಂದಿನ ಪ್ರಸ್ತುತ ರಾಜಕೀಯದಲ್ಲಿ ಕಾಣಬಹುದೆಂದರು.

ಇಂಥ ಜಗತ್ತಿನ ಕವಿಯನ್ನು ಒಂದು ಜನಾಂಗದವರು ಆಚರಿಸುತ್ತಿರುವುದು ಸರಿಯಲ್ಲ. ಇಂಥ ಮಹನೀಯರ ಜಯಂತಿ ಯನ್ನು ಎಲ್ಲರೂ ಆಚರಿಸುವಂತಾಗಬೇಕು. ಇಂತಹ ದಾರ್ಶನಿಕರ ಬಗ್ಗೆ ಕಾಲೇಜಿನಲ್ಲಿ ನಿರಂತರ ಅಧ್ಯಯನದ ಮೂಲಕ ಚಿಂತನೆಗೆ ಹಚ್ಚಬೇಕು ಎಂದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ