ಆ್ಯಪ್ನಗರ

ಬೃಹತ್‌ ರೈತ ಸಮಾವೇಶ 26ಕ್ಕೆ

ಜಿಲ್ಲಾ ಬಿಜೆಪಿ ರೈತ ಮೋರ್ಚಾದಿಂದ ರಾಸಾಯನಿಕ ಮುಕ್ತ ಕೃಷಿ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಮಿಷನ್‌ 2024 ಕಾರ್ಯಕ್ರಮದ ಉದ್ಘಾಟನೆ, ಬೃಹತ್‌ ರೈತ ...

Vijaya Karnataka 22 Oct 2017, 5:00 am

ಮೈಸೂರು: ಜಿಲ್ಲಾ ಬಿಜೆಪಿ ರೈತ ಮೋರ್ಚಾದಿಂದ ರಾಸಾಯನಿಕ ಮುಕ್ತ ಕೃಷಿ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಮಿಷನ್‌ 2024 ಕಾರ್ಯಕ್ರಮದ ಉದ್ಘಾಟನೆ, ಬೃಹತ್‌ ರೈತ ಸಮಾವೇಶ ಅ.26ರಂದು ನಡೆಯಲಿದೆ ಎಂದು ಬಿಜೆಪಿ ಗ್ರಾಮಾತರ ಅಧ್ಯಕ್ಷ ಕೋಟೆ ಎಂ.ಶಿವಣ್ಣ ತಿಳಿಸಿದರು.

ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಸಮಾವೇಶಕ್ಕೆ ಅಂದು ಬೆಳಗ್ಗೆ 11ಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ.

ಉಪಾಧ್ಯಕ್ಷ ವಿ.ಶ್ರೀನಿವಾಸ ಪ್ರಸಾದ್‌, ಮಾಜಿ ಉಪಮುಖ್ಯಮಂತ್ರಿ ಆರ್‌.ಅಶೋಕ್‌, ಮಾಜಿ ಸಚಿವರಾದ ಆರ್‌.ಶ್ರೀರಾಮುಲು, ವಿ.ಸೋಮಣ್ಣ, ಸಿ.ಎಚ್‌.ವಿಜಯಶಂಕರ್‌, ಸಂಸದ ಪ್ರತಾಪ್‌ ಸಿಂಹ ಭಾಗವಹಿಸಲಿದ್ದಾರೆ ಎಂದು ಶನಿವಾರ ತಿಳಿಸಿದರು.

ರಾಸಾಯನಿಕ ಮುಕ್ತ ಕೃಷಿ ಕುರಿತು ರೈತರಲ್ಲಿ ಜಾಗೃತಿ ಮೂಡಿಸಲು ಅ.8ರಿಂದ 14ರವರೆಗೆ ಜಿಲ್ಲಾ ಗ್ರಾಮಾಂತರ ಪ್ರದೇಶದಲ್ಲಿ 150 ಕಿ.ಮೀ. ಪಾದಯಾತ್ರೆ ನಡೆಸಲಾಗಿದೆ.

ಮಿಷನ್‌ 2024 ಕಾರ್ಯಕ್ರಮದಡಿ ಮುಂದಿನ 7 ವರ್ಷಗಳ ಕಾಲ ಹತ್ತು ಹಲವು ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ರಾಸಾಯನಿಕ ಮುಕ್ತ ಜಿಲ್ಲೆಯನ್ನಾಗಿಸಲು ದೃಢನಿರ್ಧಾರ ಕೈಗೊಳ್ಳಲಾಗಿದೆ. ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಲು ರಾಜ್ಯ ಕಾಂಗ್ರೆಸ್‌ ಸರಕಾರ ವಿಫಲವಾಗಿದೆ. ವರುಣಾ ಕ್ಷೇತ್ರದಲ್ಲಿ ಕೈಗೊಂಡಿರುವ ಹಲವಾರು ಕಾಮಗಾರಿಗಳು ಕಳಪೆಯಾಗಿದ್ದು, ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಜಾಣ ಕುರುಡು ಪ್ರದರ್ಶಿಸುತ್ತಿದ್ದಾರೆ. ಸರಕಾರದ ನಿರ್ಲಕ್ಷ್ಯ ಧೋರಣೆಯಿಂದ ಕೇಂದ್ರ ಸರಕಾರದ ಯೋಜನೆಗಳು ರೈತರಿಗೆ ಹಾಗೂ ಜನಸಾಮಾನ್ಯರಿಗೆ ತಲುಪುತ್ತಿಲ್ಲವೆಂದು ದೂರಿದರು.

ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಪ್ರಸನ್ನ ಎನ್‌.ಗೌಡ ಮಾತನಾಡಿ, ನೈಸರ್ಗಿಕ ಕೃಷಿ ಅನುಷ್ಠಾನ, ಹೊಗೆ ಮುಕ್ತ ಗ್ರಾಮ ನಿರ್ಮಾಣ, ನಾಟಿ ಹಸುವಿನ ತಳಿ ಅಭಿವೃದ್ಧಿ, ಹಸಿರು ಗ್ರಾಮ ನಿರ್ಮಾಣಕ್ಕೆ ಗ್ರಾಮ ಪಂಚಾಯಿತಿಗೊಂದು ನರ್ಸರಿ ಸ್ಥಾಪನೆ ಮಾಡಲಾಗುವುದು. ಅರಣ್ಯ ಕೃಷಿ ಚಟುವಟಿಕೆಗಳ ಉತ್ತೇಜನ, ಮೇಕೆ ಬ್ಯಾಂಕ್‌ ಸ್ಥಾಪನೆ, ಮಧÜ್ಯವರ್ತಿಗಳ ಹಾವಳಿ ತಪ್ಪಿಸಲು ಬೆಳೆಗಳಿಗೆ ಮೌಲ್ಯ ಕಟ್ಟುವ ಕಾರ್ಯಕ್ರಮ, ದೇಸಿ ಬೀಜ ಬ್ಯಾಂಕ್‌ ಸ್ಥಾಪನೆ ಹಾಗೂ ಬರ ನಿರೋಧಕ ಬೆಳೆಗಳಿಗೆ ಉತ್ತೇಜನ ಹೀಗೆ ಹತ್ತು ಹಲವು ಗ್ರಾಮಾಭಿವೃದ್ಧಿ ಗುರಿ ಸಾಧನೆಯನ್ನು ರೈತ ಸಮಾವೇಶ ಹಮ್ಮಿಕೊಂಡಿದೆ. ಈಗಾಗಲೇ 5 ಸಾವಿರ ರೈತರು 8824466665 ದೂರವಾಣಿ ಸಂಖ್ಯೆಗೆ ಮಿಸ್‌ ಕಾಲ್‌ ನೀಡುವ ಮೂಲಕ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡ ಹೆಚ್‌.ವಿ.ರಾಜೀವ್‌, ಬೋರೇಗೌಡ ಉಪಸ್ಥಿತರಿದ್ದರು.

Vijaya Karnataka Web  26
ಬೃಹತ್‌ ರೈತ ಸಮಾವೇಶ 26ಕ್ಕೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ