ಆ್ಯಪ್ನಗರ

ಹಕ್ಕು ಚಲಾಯಿಸಿದ 111 ವರ್ಷದ ಹಾಡಿ ಮಹಿಳೆ

ಎಚ್‌.ಡಿ.ಕೋಟೆ ತಾಲೂಕಿನಲ್ಲಿ ಅತಿ ಹಿರಿಯ ವಯಸ್ಸಿನ ಮಹಿಳೆರೊಬ್ಬರು ಮತದಾನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.

Vijaya Karnataka 13 May 2018, 9:36 am
ಮೈಸೂರು: ಎಚ್‌.ಡಿ.ಕೋಟೆ ತಾಲೂಕಿನಲ್ಲಿ ಅತಿ ಹಿರಿಯ ವಯಸ್ಸಿನ ಮಹಿಳೆರೊಬ್ಬರು ಮತದಾನ ಮಾಡುವ ಮೂಲಕ ಗಮನ ಸೆಳೆದಿದ್ದಾರೆ.
Vijaya Karnataka Web evm voting


ತಾಲೂಕಿನ ಹುಣಸೇಕುಪ್ಪೆ ಹಾಡಿಯ ನಿವಾಸಿ 111 ವರ್ಷದ ಕೆಂಚಮ್ಮ ಅವರು ಹುಣಸೇಕುಪ್ಪೆ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ತಮ್ಮ ಮತದಾನ ಹಕ್ಕು ಚಲಾಯಿಸಿದರು. 1976ರಲ್ಲಿ ಕಾಡಿನಿಂದ ನಗರದ ಹಾಡಿ ಪ್ರದೇಶಕ್ಕೆ ಇವರನ್ನು ಕರೆತರಲಾಯಿತು. ಅಂದಿನಿಂದ ಮತದಾನ ಮಾಡುತ್ತಿದ್ದಾರೆ. ಬುಡಕಟ್ಟು ಸಂಸ್ಕೃತಿ ಉಳಿವಿಗಾಗಿನ ಹೋರಾಟಗಾರ ಪ್ರಸನ್ನ ಅವರ ಸಹಾಯದಿಂದ ಮತದಾನ ಮಾಡಿದ ಅವರು, ''ಪ್ರತಿ ಬಾರಿ ಒಂದು ನಂಬಿಕೆ ಇಟ್ಟುಕೊಂಡು ಮತದಾನ ಮಾಡುತ್ತೇವೆ. ಆದರೂ ಪ್ರತಿ ಬಾರಿ ರಚನೆ ಆಗುವ ಸರಕಾರಗಳು ನಮ್ಮ ಹಾಡಿ ಜನರ ಸಹಾಯಕ್ಕೆ ಧಾವಿಸುವುದಿಲ್ಲ. ಇನ್ನಾದರೂ ನಮ್ಮ ಹಾಡಿ ಜನಾಂಗದವರಿಗೆ ಸೌಲಭ್ಯ ಕಲ್ಪಿಸುತ್ತಾರೆ ಎಂಬ ನಂಬಿಕೆ ಇದೆ'' ಎಂದು ತಮ್ಮ ಅಭಿಪ್ರಾಯ ಹಂಚಿಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ