ಆ್ಯಪ್ನಗರ

ರೈತ ಸಂಘ ಬೆಂಬಲಿತ 1800 ಅಭ್ಯರ್ಥಿಗಳಿಗೆ ಗೆಲುವು: ಬಡಗಲಪುರ ನಾಗೇಂದ್ರ

ಬುಧವಾರ ಪ್ರಕಟಗೊಂಡ ಗ್ರಾಮ ಪಂಚಾಯಿತಿ ಚುನಾವಣಾ ಫಲಿತಾಂಶದಲ್ಲಿ ರೈತ ಸಂಘ ಹಾಗೂ ಸ್ವರಾಜ್‌ ಇಂಡಿಯಾ ಗಮನಾರ್ಹ ಸಾಧನೆ ಮಾಡಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ. ರಾಜ್ಯಾದ್ಯಂತ ರೈತ ಸಂಘ ಹಾಗೂ ಸ್ವರಾಜ್‌ ಇಂಡಿಯಾ ಬೆಂಬಲಿತ 1800ಕ್ಕೂ ಹೆಚ್ಚು ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಹೇಳಿದ್ದಾರೆ.

Vijaya Karnataka Web 31 Dec 2020, 9:50 pm
ಮೈಸೂರು: ರಾಜ್ಯದ ನಾನಾ ಭಾಗಗಳಿಂದ ಸ್ಪರ್ಧಿಸಿದ್ದ ರೈತ ಮತ್ತು ಸ್ವರಾಜ್‌ ಇಂಡಿಯಾ ಬೆಂಬಲಿತ 1800ಕ್ಕೂ ಹೆಚ್ಚು ಅಭ್ಯರ್ಥಿಗಳು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ ಎಂದು ರೈತ ಸಂಘದ ರಾಜ್ಯಾದ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.
Vijaya Karnataka Web NAGENDRA
ಬಡಗಲಪುರ ನಾಗೇಂದ್ರ, ರೈತ ಸಂಘದ ರಾಜ್ಯಾಧ್ಯಕ್ಷ (ಸಂಗ್ರಹ ಚಿತ್ರ)


ರೈತ ಸಂಘ ಮತ್ತು ಸ್ವರಾಜ್‌ ಇಂಡಿಯಾ ಬೆಂಬಲಿತ ಅಭ್ಯರ್ಥಿಗಳು ಜನಪರ ವಿಚಾರಗಳನ್ನು ಮತದಾರರ ಮುಂದಿಟ್ಟು ಚುನಾವಣೆ ಎದುರಿಸಿದ್ದರು. ಇದಕ್ಕೆ ಮತದಾರರು ಸ್ಪಂದಿಸಿದ್ದು, ರಾಜ್ಯದಲ್ಲಿ 1800 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದಾರೆ ಎಂದು ಅವರು ಹೇಳಿದ್ದಾರೆ.

ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ 33 ಗ್ರಾಮ ಪಂಚಾಯಿತಿಗಳಲ್ಲಿ ನಮ್ಮ ಬೆಂಬಲಿತ ಅಭ್ಯರ್ಥಿಗಳು ಹೆಚ್ಚು ಸ್ಥಾನ ಗಳಿಸಿದ್ದು, ಪಂಚಾಯಿತಿ ಅಧಿಕಾರ ಹಿಡಿಯಲಿದ್ದಾರೆ. ತುಮಕೂರು-280, ಬಾಗಲಕೋಟೆ-120, ರಾಮನಗರ-118, ಮೈಸೂರು-100, ಚಿಕ್ಕಬಳ್ಳಾಪುರ-90, ಚಾಮರಾಜನಗರ-70, ಚಿತ್ರದುರ್ಗ-70, ಗದಗ-60, ಬೆಳಗಾವಿ-50, ವಿಜಯಪುರ-60 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಮೈಸೂರು: ಗೋಹತ್ಯೆ ನಿಷೇಧ ಕಾಯ್ದೆಯಿಂದ ರೈತರಿಗೆ ಅನ್ಯಾಯ ಎಂದ ಬಡಗಲಪುರ ನಾಗೇಂದ್ರ

ರಾಜ್ಯದಲ್ಲಿ ಡಿಸೆಂಬರ್‌ 22 ಮತ್ತು 27ರಂದು ನಡೆದಿದ್ದ ಗ್ರಾಮ ಪಂಚಾಯಿತಿ ಚುನಾವಣೆಯ ಫಲಿತಾಂಶ ಬುಧವಾರ ಹೊರಬಿದ್ದಿತ್ತು. ಬಹುತೇಕ ಕಡೆ ಅಚ್ಚರಿಯ ಫಲಿತಾಂಶ ಬಂದಿದ್ದು, ಬಿಜೆಪಿ ಬೆಂಬಲಿತರು ಹೆಚ್ಚು ಸ್ಥಾನ ಗಳಿಸಿರುವ ಬಗ್ಗೆ ವರದಿಯಾಗಿದೆ.

ಮೈಸೂರು ಜೆಡಿಎಸ್ ಪಾಳಯದಲ್ಲಿ ಅಚ್ಚರಿಯ ಬೆಳವಣಿಗೆ: ಸಾರಾ ಮಹೇಶ್ - ಜಿಟಿ ದೇವೇಗೌಡ ಭೇಟಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ