ಆ್ಯಪ್ನಗರ

5 ಪೈಸೆ ಬಾಕಿ ಪಾವತಿಗೆ ಚೆಕ್‌

ಬಾಕಿ ಇದ್ದ 5 ಪೈಸೆಯನ್ನು ಬ್ಯಾಂಕ್‌ಗೆ ಚೆಕ್‌ ಮೂಲಕ ತೀರಿಸಿರುವ ವಿಚಿತ್ರ ಘಟನೆ ವರದಿಯಾಗಿದೆ.

ವಿಕ ಸುದ್ದಿಲೋಕ 23 Mar 2017, 10:48 am
ಮೈಸೂರು: ಕೃಷಿಕ ಎಸ್‌. ಸತೀಶ್‌ ಎಂಬವರು ತಮ್ಮ ಕ್ರೆಡಿಟ್‌ ಕಾರ್ಡ್‌ ಸೇವೆ ಸ್ಥಗಿತಗೊಳಿಸಲು ಬಾಕಿ ಇದ್ದ 5 ಪೈಸೆಯನ್ನು ಬ್ಯಾಂಕ್‌ಗೆ ಚೆಕ್‌ ಮೂಲಕ ತೀರಿಸಿರುವ ವಿಚಿತ್ರ ಘಟನೆ ನಡೆದಿದೆ.
Vijaya Karnataka Web 5 paisa due paid through cheque
5 ಪೈಸೆ ಬಾಕಿ ಪಾವತಿಗೆ ಚೆಕ್‌


ಎಸ್‌ಬಿಐನ ವಿಜಯನಗರ ಶಾಖೆಯಲ್ಲಿ ಸತೀಶ್‌ ಖಾತೆ ಹೊಂದಿದ್ದು, ಐದು ವರ್ಷದ ಹಿಂದೆ ಬ್ಯಾಂಕಿನಲ್ಲಿ 25 ಸಾವಿರ ರೂ. ಠೇವಣಿ ಇರಿಸಿ ಕ್ರೆಡಿಟ್‌ ಕಾರ್ಡ್‌ ಪಡೆದಿದ್ದರು. ಹಲವು ವರ್ಷಗಳ ಕಾಲ ಕ್ರೆಡಿಟ್‌ ಕಾರ್ಡ್‌ ಬಳಸಿದ ಸತೀಶ್‌, ಠೇವಣಿ ಇಟ್ಟಿದ್ದ 25 ಸಾವಿರ ರೂ. ಹಿಂಪಡೆಯುವುದಕ್ಕೆ ಕಾರ್ಡ್‌ ಸೇವೆ ಸ್ಥಗಿತಗೊಳಿಸುವಂತೆ ಕಸ್ಟಮರ್‌ ಕೇರ್‌ ನಂಬರ್‌ಗೆ ಕರೆ ಮಾಡಿದ್ದಾರೆ.

ಕರೆ ಸ್ವೀಕರಿಸಿದ ಸಿಬ್ಬಂದಿ, ತಾವು ಐದು ಪೈಸೆ ಬಾಕಿ ಉಳಿಸಿಕೊಂಡಿದ್ದು, ಅದನ್ನು ಜಮಾ ಮಾಡಿದರೆ ಖಾತೆ ಸ್ಥಗಿತಗೊಳಿಸುವುದಾಗಿ ಹೇಳಿದ್ದಾರೆ. ‘‘ಐದು ಪೈಸೆ ಚಾಲನೆಯಲ್ಲೇ ಇಲ್ಲದಿರುವುದರಿಂದ ಅದನ್ನು ಪಾವತಿ ಮಾಡುವುದು ಹೇಗೆ,’’ ಎಂದು ಕೇಳಿದ್ದಕ್ಕೆ ಬ್ಯಾಂಕಿನ ಸಿಬ್ಬಂದಿ ಚೆಕ್‌ ಮೂಲಕ ಪಾವತಿಸುವಂತೆ ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಮಾರ್ಚ್‌ 18ರಂದು ಬ್ಯಾಂಕಿಗೆ ತೆರಳಿದ ಸತೀಶ್‌ ಐದು ಪೈಸೆಗೆ ಚೆಕ್‌ ನೀಡಿದ್ದಾರೆ. ಬಳಿಕ ಕ್ರೆಡಿಟ್‌ ಕಾರ್ಡ್‌
ಖಾತೆಯನ್ನು ಬ್ಯಾಂಕ್‌ ಸ್ಥಗಿತಗೊಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ