ಆ್ಯಪ್ನಗರ

ಮೈಸೂರಲ್ಲಿ ಒಂದೇ ದಿನ 7 ಹಾವುಗಳ ರಕ್ಷಣೆ

ಮೈಸೂರು ವಿವಿಯ ಸುರೇಶ್ ಎಂಬುವವರ ನಿರ್ಮಾಣದ ಹಂತದ ಮನೆಯ ಬಳಿ ಹಾಗು ಬೃಂದಾವನ ಬಡಾವಣೆಯ ಶಾಂತ ಎಂಬುವರ ಗ್ಯಾರೇಜಿನಲ್ಲಿ ಕಾಣಿಸಿಕೊಂಡ ಕೇರೆ ಹಾವು, ಅಶೋಕಪುರಂ ಮೂರನೇ ಕ್ರಾಸಿನಲ್ಲಿ ಕಾಣಿಸಿಕೊಂಡಿದ್ದ ಹಾವನ್ನು ಸಂರಕ್ಷಣೆ ಮಾಡಿದ್ದಾರೆ.

Vijaya Karnataka Web 20 Mar 2021, 6:17 pm
ಮೈಸೂರು: ಮೈಸೂರಲ್ಲಿ ಬೇಸಿಗೆ ಬಿಸಿ ಹೆಚ್ಚಾಗಿದೆ. ಜನರಿಗೆ ಮಾತ್ರವಲ್ಲದೇ ಹಾವುಗಳಿಗೂ ಧಗೆ ಹೆಚ್ಚಾಗಿದೆ. ಮೈಸೂರಿನ ಎಲ್ಲೆಂದರಲ್ಲಿ ಹಾವುಗಳು ಪ್ರತ್ಯಕ್ಷವಾಗುತ್ತಿದ್ದು, ಉರಗ ತಜ್ಞ ಸೂರ್ಯಕೀರ್ತಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ.
Vijaya Karnataka Web ಸಂಗ್ರಹ ಚಿತ್ರ
ಸಂಗ್ರಹ ಚಿತ್ರ


ಅಲ್ದೇ ಹಾವುಗಳನ್ನ ಸಂರಕ್ಷಿಸಿ ರಕ್ಷಣೆ ಮಾಡ್ತಿದ್ದಾರೆ. ಉರಗಪ್ರೇಮಿ ಸೂರ್ಯಕೀರ್ತಿ ಒಂದೇ ದಿನದಲ್ಲಿ ಬರೋಬ್ಬರಿ 7 ಹಾವು ಜೊತೆಗೆ 27 ಹಾವಿನ ಮೊಟ್ಟೆಗಳನ್ನು ಕಾರ್ಯಚರಣೆ ನಡೆಸಿ ಸಂರಕ್ಷಣೆ ಮಾಡಿದ್ದಾರೆ.

ಸೂರ್ಯ ಕೀರ್ತಿ ಅವರ ಬಲಗೈ ಮುರಿದಿದ್ದರೂ ವಿವಿಧೆಡೆ ಹಾವುಗಳನ್ನ ರಕ್ಷಣೆ ಮಾಡಿದ್ದಾರೆ. ಮೈಸೂರಿನ ಸಿಗ್ಮಾ ಆಸ್ಪತ್ರೆಯ ಓಪಿಡಿಯಲ್ಲಿದ್ದ ತೋಳದ ಹಾವನ್ನು ರಕ್ಷಿಸಿ ಆಸ್ಪತ್ರೆ ಸಿಬ್ಬಂದಿ ಹಾಗೂ ರೋಗಿಗಳ ಆತಂಕವನ್ನ ದೂರ ಮಾಡಿದ್ದಾರೆ. ಇನ್ನು ಮೈಸೂರು ವಿವಿಯ ಸುರೇಶ್ ಎಂಬುವವರ ನಿರ್ಮಾಣದ ಹಂತದ ಮನೆಯ ಬಳಿ ಹಾಗು ಬೃಂದಾವನ ಬಡಾವಣೆಯ ಶಾಂತ ಎಂಬುವರ ಗ್ಯಾರೇಜಿನಲ್ಲಿ ಕಾಣಿಸಿಕೊಂಡ ಕೇರೆ ಹಾವು ಅಶೋಕಪುರಂ ಮೂರನೇ ಕ್ರಾಸಿನ ಹರಿಣಿ ಅವರ ಮನೆಯಲ್ಲಿ ಕಾಣಿಸಿಕೊಂಡಿದ್ದ ಹಾವನ್ನು ಸಂರಕ್ಷಣೆ ಮಾಡಿದ್ದಾರೆ.

ಒಟ್ಟು ಮೂರುಕೇರೆ ಹಾವು, ಒಂದು ಕಟ್ಟಾವು, ಒಂದು ಮಂಡಲದ ಹಾವು, ಒಂದು ನಾಗರಹಾವು ಸೇರಿದಂತೆ 27 ಹಾವಿನ ಮೊಟ್ಟೆಗಳನ್ನು ಸೂರ್ಯ ಕೀರ್ತಿ ರಕ್ಷಿಸಿದ್ದಾರೆ.ಬೇಸಿಗೆ ಬಿಸಿ ಹೆಚ್ಚಾಗುತ್ತಿದ್ದಂತೆ ಹಾವುಗಳು ಆಚೆ ಬರುತ್ತಿವೆ. ಮೈಸೂರಲ್ಲಿ ತಾಪಮಾನ ಹೆಚ್ಚಾಗುತ್ತಿದ್ದು, ಹಾವುಗಳಿಗೆ ಈ ರೀತಿಯ ವಾತಾವರಣದಲ್ಲಿ ಹುತ್ತದಲ್ಲಿ ಅಥವಾ ಬಿಲದಲ್ಲಿ ವಾಸಿಸುವುದು ಅಸಾಧ್ಯ ಹೀಗಾಗಿ ಎಲ್ಲೆಡೆ ಪ್ರತ್ಯಕ್ಷವಾಗುತ್ತಿದೆ. ಭಾಗಶಃ ಸಿಕ್ಕ ಎಲ್ಲ ಹಾವು ಸಿಕ್ಕಾಪಟ್ಟೆ ಸುಸ್ತಾಗಿರುತ್ತವೆ. ಹೀಗಾಗಿ ಜನರು ಆತಂಕಗೊಳ್ಳುವ ಅಗತ್ಯ ಇಲ್ಲ ಅಂತ ಸ್ನೇಕ್ ಸೂರ್ಯ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ