ಆ್ಯಪ್ನಗರ

ಕೊರೊನಾ ಗೆದ್ದ 89 ವರ್ಷದ ಕಲಾವಿದ ನಾಗರಾಜ್‌

​​ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ 89 ವರ್ಷದ ನಾಗರಾಜು ಗುಣಮುಖರಾಗಿ ಈಗ ಮನೆಗೆ ತೆರಳಿದ್ದಾರೆ.ಹುಣಸೂರು ತಾಲೂಕಿನ ಚಿಲ್ಕುಂದ ಗ್ರಾಮದ, ಮೂಲತಃ ಕೃಷಿಕರಾದ ಕೊಳಲು ವಾದಕ ನಾಗರಾಜು 1990ರ ದಶಕದವರೆಗೆ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ.

Vijaya Karnataka Web 24 Sep 2020, 6:30 pm
ಮೈಸೂರು: ಹಿರಿಯ ಕೊಳಲು ವಾದಕ ಸಿ.ಎಸ್‌.ನಾಗರಾಜ್‌ ಕೊರೊನಾ ಗೆದ್ದಿದ್ದಾರೆ. ಆ ಮೂಲಕ ಯಾವುದೇ ವಯಸ್ಸಿನ ಕೋವಿಡ್‌ ರೋಗಿಗಳನ್ನು ಗುಣಪಡಿಸಬಹುದು ಎಂಬುದನ್ನು ಮೈಸೂರು ಜಿಲ್ಲಾ ಕೋವಿಡ್‌ ಆಸ್ಪತ್ರೆ ವೈದ್ಯರು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.
Vijaya Karnataka Web ಕೊರೊನಾ
ಕೊರೊನಾ


ಪ್ರಜ್ಞೆ ತಪ್ಪಿದ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ 89 ವರ್ಷದ ನಾಗರಾಜು ಗುಣಮುಖರಾಗಿ ಈಗ ಮನೆಗೆ ತೆರಳಿದ್ದಾರೆ.ಹುಣಸೂರು ತಾಲೂಕಿನ ಚಿಲ್ಕುಂದ ಗ್ರಾಮದ, ಮೂಲತಃ ಕೃಷಿಕರಾದ ಕೊಳಲು ವಾದಕ ನಾಗರಾಜು 1990ರ ದಶಕದವರೆಗೆ ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ.

ಸೆಪ್ಟೆಂಬರ್‌ ಮೊದಲ ವಾರ ಇವರಿಗೆ ಜ್ವರ ಬಂದಿತ್ತು. ಸಿ.ಎಸ್‌.ನಾಗರಾಜ್‌ ಅವರಿಗೆ ಪಾರ್ಕಿನ್‌ಸನ್‌ ಕಾಯಿಲೆಯೂ ಇತ್ತು. ಸ್ಥಳೀಯ ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆದರೂ ಗುಣಮುಖ ರಾಗಿರಲಿಲ್ಲ. ಜ್ವರ ತೀವ್ರಗೊಂಡು ಮಾತನಾಡದ ಸ್ಥಿತಿಗೆ ತಲುಪಿದಾಗ ಹುಣಸೂರು ಸರಕಾರಿ ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿನ ವೈದ್ಯರು ತಕ್ಷಣ ಕೋವಿಡ್‌ ಪರೀಕ್ಷೆ ಮಾಡಿಸಿ, ಪಾಸಿಟಿವ್‌ ಬಂದಿದ್ದರಿಂದ ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ಶಿಫಾರಸು ಮಾಡಿದ್ದರು. ಸೆ. 10ರಂದು ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ಇವರನ್ನು ದಾಖಲಿಸಿಕೊಂಡು ಸೂಕ್ತ ಚಿಕಿತ್ಸೆ ನೀಡಲಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ