ಆ್ಯಪ್ನಗರ

‘ದಿ ಸ್ಟೋರಿ ಆಫ್‌ ಕಾವೇರಿ’ ಕಿರುಚಿತ್ರಕ್ಕೆ 8 ಪ್ರಶಸ್ತಿ

ಸೈಕಲ್‌ ಪ್ಯೂರ್‌ ಅಗರಬತ್ತಿಸ್‌ ಎನ್‌.ಆರ್‌ .ಗ್ರೂಪ್‌ ಹಾಗೂ ರೀಫಾರೆಸ್ಟ್‌ ಇಂಡಿಯಾ ನಿರ್ಮಿಸಿದ 'ದಿ ಸ್ಟೋರಿ ಆಫ್‌ ಕಾವೇರಿ' ಕಿರುಚಿತ್ರವು 7 ಎಲಿಫೆಂಟ್ಸ್‌ ಮತ್ತು ಒಂದು ಬ್ಲಾಕ್‌ ಎಲಿಫೆಂಟ್‌ ಪ್ರಶಸ್ತಿಗೆ ಭಾಜನವಾಗಿದೆ.

Vijaya Karnataka 13 Jun 2018, 5:00 am
ಮೈಸೂರು : ಸೈಕಲ್‌ ಪ್ಯೂರ್‌ ಅಗರಬತ್ತಿಸ್‌ ಎನ್‌.ಆರ್‌ .ಗ್ರೂಪ್‌ ಹಾಗೂ ರೀಫಾರೆಸ್ಟ್‌ ಇಂಡಿಯಾ ನಿರ್ಮಿಸಿದ 'ದಿ ಸ್ಟೋರಿ ಆಫ್‌ ಕಾವೇರಿ' ಕಿರುಚಿತ್ರವು 7 ಎಲಿಫೆಂಟ್ಸ್‌ ಮತ್ತು ಒಂದು ಬ್ಲಾಕ್‌ ಎಲಿಫೆಂಟ್‌ ಪ್ರಶಸ್ತಿಗೆ ಭಾಜನವಾಗಿದೆ.
Vijaya Karnataka Web 8th award for the story of kaveri short film
‘ದಿ ಸ್ಟೋರಿ ಆಫ್‌ ಕಾವೇರಿ’ ಕಿರುಚಿತ್ರಕ್ಕೆ 8 ಪ್ರಶಸ್ತಿ


ಮುಂಬಯಿನ ಡೋಮ…ನಲ್ಲಿ ನಡೆದ 'ಕ್ಯೂರಿಯಸ್‌ ಕ್ರಿಯೇಟಿವ್‌ ಅವಾರ್ಡ್ಸ್' ಸಮಾರಂಭದಲ್ಲಿ ಬಾಲಿವುಡ್‌ನ ಹಿರಿಯ ನಟ ಅಮಿತಾಬ್‌ ಬಚ್ಚನ್‌ ಅವರು ಚಿತ್ರ ತಂಡಕ್ಕೆ ಪ್ರಶಸ್ತಿ ಪ್ರದಾನ ಮಾಡಿದರು. ಈ ಕಿರುಚಿತ್ರವು ಎಲ್ಲರ ಮೆಚ್ಚುಗೆ ಪಾತ್ರವಾಗಿದ್ದು, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ 15 ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ.

ಕಾವೇರಿ ನದಿಯ ವಿಷಮ ಸ್ಥಿತಿಯನ್ನು ಉದ್ದೇಶಿಸುವ ಈ ಕಿರುಚಿತ್ರವು ಒಂದು ಪರಿಹಾರವನ್ನು ಕೂಡ ಮನಮುಟ್ಟುವಂತೆ ಕಟ್ಟಿಕೊಡುತ್ತದೆ. ಈ ಕಿರುಚಿತ್ರದ ಮೂಲಕ ರೀಫಾರೆಸ್ಟ್‌ ಇಂಡಿಯಾ ಕಾವೇರಿ ನದಿಯನ್ನು ಪುನಶ್ಚೇತನಗೊಳಿಸುವ ಎಲ್ಲಾ ಪ್ರಯತ್ನಗಳನ್ನು ಕೈಗೊಂಡಿದೆ.

''ಒಂದು ಕಿರುಚಿತ್ರವು 15 ಪ್ರಶಸ್ತಿ ಪಡೆದುಕೊಂಡಿರುವುದು ಹೆಮ್ಮಯ ಸಂಗತಿ. ನಮ್ಮ ಈ ಪ್ರಯತ್ನವು ಮೂಡಿಸಿರುವ ಅರಿವಿನ ಪ್ರಮಾಣವು ನಮಗೆ ಇನ್ನು ಹೆಚ್ಚು ಸಂತೋಷ ನೀಡಿದೆ. ಮುಂಬರುವ ದಿನಗಳಲ್ಲಿ ಪ್ರಕೃತಿಯ ಉಳಿವು ಮತ್ತು ಅಭಿವೃದ್ಧಿಗಾಗಿ ರೀಫಾರೆಸ್ಟ್‌ ಇಂಡಿಯಾದ ಸಹಭಾಗಿತ್ವದಲ್ಲಿ ಇನ್ನು ಹಲವು ಕಾರ್ಯಗಳಲ್ಲಿ ನಾವು ತೊಡಗಿಸಿಕೊಳ್ಳುತ್ತೇವೆ,'' ಎಂದು ಸೈಕಲ್‌ ಪ್ಯೂರ್‌ ಅಗರಬತ್ತಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಅರ್ಜುನ್‌ ರಂಗ ತಿಳಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ