ಆ್ಯಪ್ನಗರ

ಮೈಸೂರು ದಸರಾ ಆಚರಣೆ ಬಗ್ಗೆ ಚರ್ಚಿಸಲು ಜನಪ್ರತಿನಿಧಿಗಳೊಂದಿಗೆ ಶೀಘ್ರ ಸಭೆ; ಎಸ್‌ಟಿ ಸೋಮಶೇಖರ್

ಮೊದಲ ಸಭೆಯಲ್ಲಿ ದಸರಾ ಉತ್ಸವವನ್ನು ಯಾವ ರೀತಿ ಸರಳವಾಗಿ ಮಾಡಬೇಕು ಎಂಬ ಅಭಿಪ್ರಾಯ ಸಂಗ್ರಹಿಸಲಾಗುವುದು. ನಂತರ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿ, ದಸರಾ ಉನ್ನತ ಸಮಿತಿ ಸಭೆ ಕರೆಯುತ್ತೇವೆ ಎಂದರು. ಕೋವಿಡ್‌ ನಿರ್ವಹಣೆಗೆ ನಮ್ಮ ಮೊದಲ ಆದ್ಯತೆ. ಮೂರನೇ ಅಲೆಗೆ ಸಿದ್ಧತೆ ಮಾಡಿಕೊಂಡು, ಅದರ ನಡುವೆಯೇ ಸುರಕ್ಷತೆಯಿಂದ ದಸರಾ ಮಾಡಬೇಕಿದೆ ಎಂದು ಸಚಿವ ಎಸ್‌.ಟಿ.ಸೋಮಶೇಖರ್‌ ಹೇಳಿದರು.

Vijaya Karnataka 16 Aug 2021, 11:20 am
ಮೈಸೂರು: ಕೊರೊನಾ ನಡುವೆ ಮೈಸೂರು ದಸರಾ ಮಹೋತ್ಸವ ನಡೆಸಬೇಕಿದ್ದು, ಈ ತಿಂಗಳಲ್ಲಿ ಮೈಸೂರು ಚುನಾಯಿತ ಜನಪ್ರತಿನಿಧಿಗಳೊಂದಿಗೆ ಮೊದಲ ಸಭೆ ಕರೆಯುತ್ತೇನೆ ಎಂದು ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ತಿಳಿಸಿದರು.
Vijaya Karnataka Web St Somashekhar


ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಪ್ರತಿನಿಧಿಗಳ ಮೊದಲ ಸಭೆಯಲ್ಲಿ ದಸರಾ ಉತ್ಸವವನ್ನು ಯಾವ ರೀತಿ ಸರಳವಾಗಿ ಮಾಡಬೇಕು ಎಂಬ ಅಭಿಪ್ರಾಯ ಸಂಗ್ರಹಿಸಲಾಗುವುದು. ನಂತರ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡಿ, ದಸರಾ ಉನ್ನತ ಸಮಿತಿ ಸಭೆ ಕರೆಯುತ್ತೇವೆ ಎಂದರು. ಕೋವಿಡ್‌ ನಿರ್ವಹಣೆಗೆ ನಮ್ಮ ಮೊದಲ ಆದ್ಯತೆ. ಮೂರನೇ ಅಲೆಗೆ ಸಿದ್ಧತೆ ಮಾಡಿಕೊಂಡು, ಅದರ ನಡುವೆಯೇ ಸುರಕ್ಷತೆಯಿಂದ ದಸರಾ ಮಾಡಬೇಕಿದೆ. ಕಳೆದ ಬಾರಿಯ ಅನುದಾನವನ್ನೇ ಬಳಸಿಕೊಂಡು ದಸರಾ ಆಚರಿಸಲು ಚಿಂತನೆ ನಡೆಸಲಾಗಿದೆ. ಕೋವಿಡ್‌ ಅಲೆಯ ಏರಿಳಿತ ಗಮನಿಸಿ ನಿರ್ಣಯ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಪಾಸಿಟಿವಿಟಿ ಪ್ರಮಾಣ ಹೆಚ್ಚಾದರೆ ಮತ್ತೆ ಲಾಕ್‌ಡೌನ್‌ ಮಾಡುವ ಸಾಧ್ಯತೆ ಇದೆ; ಬಿಬಿಎಂಪಿ ಆಯುಕ್ತ
ಪೂರ್ಣಾವಧಿ ಸರಕಾರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರ ಪೂರ್ಣಾವಧಿ ಮುಗಿಸಲಿದ್ದು, ಇದರ ಬಗ್ಗೆ ಯಾವುದೇ ಅನುಮಾನಗಳು ಬೇಡ ಎಂದು ಹೇಳಿದರು. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಬಿಎಸ್‌ವೈ ಅವರು ಬದಲಾದಾಗ ಸಿದ್ದರಾಮಯ್ಯ ಬೇರೆ ಬೇರೆ ಯೋಜನೆಯಲ್ಲಿದ್ದರು. ಏನೇನೋ ಆಗಿ ಬಿಡುತ್ತದೆ ಎಂದೆಲ್ಲಾ ಲೆಕ್ಕಾಚಾರ ಹಾಕಿದ್ದರು. ಆದರೆ, ಅವರ ಯಾವ ಯೋಜನೆಯೂ ಯಶಸ್ವಿಯಾಗಲಿಲ್ಲ. ಹೀಗಾಗಿಯೇ ಸಿದ್ದರಾಮಯ್ಯ ಸುಮ್ಮನೆ ಅಲ್ಪಾವಧಿ ಸರಕಾವೆಂದು ಹೇಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ರಾಮದಾಸ್‌ ಮಾರ್ಗದರ್ಶನ
ಸಚಿವ ಸ್ಥಾನ ಸಿಗದಿದ್ದಕ್ಕೆ ಶಾಸಕ ರಾಮದಾಸ್‌ ಅಸಮಾಧಾನ ಕುರಿತು ಪ್ರತಿಕ್ರಿಯಿಸಿ, ಶಾಸಕ ರಾಮದಾಸ್‌ ಹಿರಿಯರಿದ್ದಾರೆ. ಅವರು ಸರಕಾರಕ್ಕೆ ಸಲಹೆಗಳನ್ನು ಕೊಟ್ಟಿದ್ದಾರೆ. ನಾನು ಮೊದಲ ಅವಧಿ ಮುಗಿದ ಮೇಲೆ ಮೈಸೂರಿಗೆ ಧನ್ಯತಾ ಪತ್ರ ಬರೆದಿದ್ದೆ. ಆದರೆ, ರಾಜಕಾರಣ ಕೆಲವೊಮ್ಮೆ ಬದಲಾಗುತ್ತದೆ. ಈಗ ಮತ್ತೆ ಅವಕಾಶ ಸಿಕ್ಕಿದೆ. ರಾಮದಾಸ್‌ ಅವರ ಮಾರ್ಗದರ್ಶನದಲ್ಲಿ ಒಂದು ವರ್ಷ ಉಸ್ತುವಾರಿ ಜವಾಬ್ದಾರಿ ಮುಗಿಸಿದ್ದೇನೆ. ಉಳಿದ ಅವಧಿಯಲ್ಲಿಯೂ ಅವರ ಮಾರ್ಗದರ್ಶನದಲ್ಲಿ ಮುಂದುವರೆಯುವೆ. ನಮ್ಮಿಂದ ಎಂದೂ ಅವರಿಗೆ ತೊಂದರೆ ಆಗುವುದಿಲ್ಲ ಎಂದು ಹೇಳಿದರು.
ರಾಕ್‌ಲೈನ್‌ ಮಾಲ್‌ ಮಾಲೀಕರಿಂದ ಕೋಟ್ಯಂತರ ರೂಪಾಯಿ ತೆರಿಗೆ ವಂಚನೆ; ಬಿಜೆಪಿ ಮುಖಂಡ ಆರೋಪ
ತಪ್ಪಿತಸ್ಥರ ವಿರುದ್ಧ ಕ್ರಮ: ಬಾವಲಿ ಚೆಕ್‌ ಪೋಸ್ವ್‌ನಲ್ಲಿ ಕೇರಳದಿಂದ ಕೆಲವರು ಅಧಿಕಾರಿಗಳಿಗೆ ಹಣ ಕೊಟ್ಟು ಗಡಿ ದಾಟುತ್ತಿದ್ದಾರೆ. ಈ ಸಂಬಂಧ ದೂರು ದಾಖಲಾಗಿರುವ ಬಗ್ಗೆ ಪ್ರತಿಕ್ರಿಯಿಸಿ, ಪ್ರಕರಣದಲ್ಲಿ ಅಧಿಕಾರಿ ತಪ್ಪೆಸಗಿದ್ದರೆ ಕೂಡಲೇ ಅಮಾನತು ಮಾಡಲಾಗುವುದು. ಕೊರೊನಾ ರಿಪೋರ್ಟ್‌ ನೆಗೆಟಿವ್‌ ಇದ್ದವರಿಗೆ ಮಾತ್ರ ಗಡಿ ಪ್ರವೇಶಿಸಲು ಅನುಮತಿ ನೀಡುವಂತೆ ಸೂಚಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

ಮುಂದಿನ ಲೇಖನ