ಆ್ಯಪ್ನಗರ

ಮೈಸೂರು ಚಾಮರಾಜೇಂದ್ರ ಮೃಗಾಲಯದಲ್ಲಿ ಆಫ್ರಿಕನ್‌ ಸಫಾರಿ

ಮೈಸೂರು ಚಾಮ ರಾಜೇಂದ್ರ ಮೃಗಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರು ಇನ್ನು ಮುಂದೆ ಆಫ್ರಿಕನ್‌ ಮಾದರಿಯಲ್ಲಿ ಸಫಾರಿಯನ್ನು ಕೂಡ ಮಾಡಬಹುದು. . ಅದಕ್ಕಾಗಿ ಮೃಗಾಲಯ ವ್ಯಾಪ್ತಿಯನ್ನು ವಿಸ್ತರಿಸಲು ಕರ್ನಾಟಕ ಮೃಗಾಲಯ ಪ್ರಾಧಿಕಾರ ಮುಂದಾಗಿದೆ.

Vijaya Karnataka Web 29 Dec 2020, 1:48 pm
ಹರೀಶ ಎಲ್‌. ತಲಕಾಡು,
Vijaya Karnataka Web mysuru zoo


ಮೈಸೂರು: ಶತಮಾನದ ಇತಿಹಾಸವಿರುವ ಚಾಮ ರಾಜೇಂದ್ರ ಮೃಗಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರು ಇನ್ನು ಮುಂದೆ ಆಫ್ರಿಕನ್‌ ಮಾದರಿಯಲ್ಲಿ ಸಫಾರಿಯನ್ನು ಕೂಡ ಮಾಡಬಹುದು. ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಕೃತಕವಾಗಿ ನಿರ್ಮಾಣವಾಗಲಿರುವ ಕಾನನದ ನಡುವೆ ತೆರೆದ ವಾಹನದಲ್ಲಿ ಸ್ವಚ್ಛಂದವಾಗಿ ವಿಹರಿಸುವ ಪ್ರಾಣಿ ಪಕ್ಷಿಗಳನ್ನು ವೀಕ್ಷಣೆ ಮಾಡಬಹುದಾಗಿದೆ. ಅದಕ್ಕಾಗಿ ಚಾಮರಾಜೇಂದ್ರ ಮೃಗಾಲಯ ವ್ಯಾಪ್ತಿಯನ್ನು ವಿಸ್ತರಿಸಲು ಕರ್ನಾಟಕ ಮೃಗಾಲಯ ಪ್ರಾಧಿಕಾರ ಮುಂದಾಗಿದೆ.

100 ಎಕರೆ ವ್ಯಾಪ್ತಿ ಪ್ರದೇಶದಲ್ಲಿರುವ ರೇಸ್‌ಕೋರ್ಸ್‌ವರೆಗೂ ಮೃಗಾಲಯದ ಆವರಣವನ್ನು ವಿಸ್ತರಿಸಲು ನಿರ್ಧರಿಸ ಲಾಗಿದ್ದು, ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಗಿದೆ. ಕಳೆದ ಬಾರಿ ನಡೆದ ಮೃಗಾಲಯ ಪ್ರಾಧಿಕಾರದ ಆಡಳಿತ ಮಂಡಳಿ ಸಭೆಯಲ್ಲಿಈ ಬಗ್ಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗಿದೆ.

ಬೆಟ್ಟದ ತಪ್ಪಲಿನ ರೇಸ್‌ಕೋರ್ಸ್‌ನ ಗುತ್ತಿಗೆ ಅವಧಿ 2021ರ ಮೇ ತಿಂಗಳಲ್ಲಿಅಂತ್ಯಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿರೇಸ್‌ಕೋರ್ಸ್‌ ನಡೆ ಯುತ್ತಿದ್ದ ಸ್ಥಳವನ್ನು ಮೃಗಾಲಯದ ವಿಸ್ತರಣೆಗೆ ಬಳಸಿಕೊಂಡರೆ ಮೃಗಾ ಯಲದಲ್ಲಿನ ಪ್ರಾಣಿ-ಪಕ್ಷಿಗಳ ಸಂಖ್ಯೆ ಇಮ್ಮಡಿಯಾಗುವುದಲ್ಲದೇ ಮೈಸೂರಿನ ಪ್ರವಾಸೋದ್ಯಮಕ್ಕೆ ಅನುಕೂಲವಾಗಲಿದೆ ಎಂಬ ಅಂಶವನ್ನು ಇಟ್ಟುಕೊಂಡು ಮೃಗಾಲಯ ವ್ಯಾಪ್ತಿಯನ್ನು ವಿಸ್ತರಿ ಸುವ ಬಗ್ಗೆ ಕಳೆದ ಆಡಳಿತ ಮಂಡಳಿ ಸಭೆಯಲ್ಲಿಚರ್ಚೆ ನಡೆಸಲಾಗಿದ್ದು, ಮಂಡಳಿಯ ಸದಸ್ಯರು ಸೇರಿದಂತೆ ಪ್ರಾಧಿಕಾರದ ಅಧಿಕಾರಿಗಳ ವರ್ಗ ಕೂಡ ವಿಸ್ತರಣೆಗೆ ಸಹಮತ ವ್ಯಕ್ತಪಡಿಸಿದ್ದಾರೆ ಎನ್ನುತ್ತಾರೆ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್‌.ಆರ್‌.ಮಹಾದೇವ ಸ್ವಾಮಿ.

ಮೈಸೂರು: ಅರಮನೆಗಿಂತಲೂ ಮೃಗಾಲಯಕ್ಕೆ ಹೆಚ್ಚು ಜನ ಭೇಟಿ..! 19.56 ಲಕ್ಷ ರೂ. ಆದಾಯ

ಎಂಜಿ ರಸ್ತೆಯ ಮೂಲಕ ಸಂಪರ್ಕ: ರೇಸ್‌ಕೋರ್ಸ್‌ ಆವರಣಕ್ಕೆ ಮೃಗಾಲಯದಿಂದಲೇ ಸಂಪರ್ಕ ಕಲ್ಪಿಸಲಿದ್ದು, ಅಂಡರ್‌ಪಾಸ್‌ ಅಥವಾ ಮೇಲ್ಸೆತುವೆ ನಿರ್ಮಿಸಲಾಗುತ್ತದೆ. ಇಲ್ಲಿಗೆ ಬರುವ ಪ್ರವಾಸಿಗರು ಅಲ್ಲಿಗೂ ತೆರಳಿ ತೆರೆದ ವಾಹನದ ಮೂಲಕ ಇಡೀ ರೇಸ್‌ಕೋರ್ಸ್‌ ಆವರಣದಲ್ಲಿರುವ ಪ್ರಾಣಿ ಪಕ್ಷಿಗಳನ್ನು ವೀಕ್ಷಣೆ ಮಾಡಬಹುದಾಗಿದೆ.

ಮೈಸೂರು ಝೂನಲ್ಲಿ ಹೊಸ ಆಕರ್ಷಣೆ: ಆಫ್ರಿಕನ್ ಚೀತಾ ನೋಡಿ ಪ್ರಾಣಿ ಪ್ರಿಯರು ದಿಲ್‌ಖುಷ್

ಪ್ರತ್ಯೇಕ ಟಿಕೆಟ್‌ ವ್ಯವಸ್ಥೆ: ಮೃಗಾಲಯಕ್ಕೆ ಬರುವ ಪ್ರವಾಸಿಗರಿಗೆ ಮಾಮೂಲಿಯಂತೆ ಟಕೆಟ್‌ ದರವಿದ್ದು, ಆಫ್ರಿಕನ್‌ ಸಫಾರಿಗೆ ಪ್ರತ್ಯೇಕ ಟಿಕೆಟ್‌ ದರ ವ್ಯವಸ್ಥೆ ಮಾಡಲಾಗುವುದು. ಎರಡು ಕಡೆ ವೀಕ್ಷಣೆ ಮಾಡಲು ತೆರಳುವವರು ಒಟ್ಟಿಗೆ ಟಿಕೆಟ್‌ ಪಡೆದು ತೆರಳಬಹುದಾಗಿದೆ.

ಮೈಸೂರು ಝೂಗೆ ಹೊಸ ಅತಿಥಿ: ಕ್ವಾರಂಟೈನ್‌ ಮುಗಿಸಿ ವೀಕ್ಷಣೆಗೆ ಲಭ್ಯವಾಯ್ತು ಆಫ್ರಿಕನ್ ಚೀತಾ..!

ಪ್ರಾಣಿಗಳ ಸಂಖ್ಯೆ ಹೆಚ್ಚಳ: ಮೃಗಾಲಯ ವಿಸ್ತರಣೆಯಿಂದಾಗಿ ಪ್ರಾಣಿ ವಿನಿಮಯದಡಿ ಇನ್ನೂ ಹೆಚ್ಚು ಪ್ರಾಣಿಗಳನ್ನು ತರಿಸಿಕೊಳ್ಳಲು ಅವಕಾಶವಿದ್ದು, ಇದರಿಂದ ಮೃಗಾಲಯದ ಆದಾಯವೂ ಹೆಚ್ಚಳವಾಗಲಿದೆ ಎನ್ನುತ್ತಾರೆ ಮೃಗಾಲಯದ ಅಧಿಕಾರಿಗಳು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ