ಆ್ಯಪ್ನಗರ

ಕೊರೊನಾ ಭೀತಿಯ ನಡುವೆ ಪ್ರವಾಹ ಎದುರಾಗುವ ಆತಂಕದಲ್ಲಿ ಗ್ರಾಮೀಣ ಭಾಗದ ಜನತೆ

ಕಬಿನಿ ನದಿ ಪಾತ್ರ, ಎರಡೂ ದಂಡೆಯಲ್ಲಿರುವ ಜನರಿಗೆ ಆಸ್ತಿಪಾಸ್ತಿ, ಜಾನುವಾರುಗಳ ರಕ್ಷಣೆ ಹಾಗೂ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳುವಂತೆ ಸೂಚನೆ ನೀಡಿ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಆದೇಶ ಹೊರಡಿಸಿದ್ದಾರೆ.

Vijaya Karnataka Web 4 Aug 2020, 7:31 pm
ಮೈಸೂರು: ಒಂದೆಡೆ ಕೊರೊನಾ ಭೀತಿ ಗ್ರಾಮೀಣ ಭಾಗದ ಜನರನ್ನು ಹೈರಾಣುಗೊಳಿಸಿದರೆ ಮತ್ತೊಂದೆಡೆ ಪ್ರವಾಹದ ಆತಂಕ ಹೆಚ್ಚಾಗುತ್ತಿದೆ.
Vijaya Karnataka Web ಅಭಿರಾಮ್‌ ಜೆ ಶಂಕರ್‌
ಅಭಿರಾಮ್‌ ಜೆ ಶಂಕರ್‌


ಕಳೆದೊಂದು ವಾರದಿಂದ ಮೈಸೂರು, ಕೊಡಗು ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಯ ಪರಿಣಾಮ ನದಿ ಪಾತ್ರದ ಜನರು ಕಂಗಾಲಾಗಿದ್ದಾರೆ.

ಕಬಿನಿ ನದಿಯ ಸುತ್ತಮುತ್ತಾ, ಇತ್ತ ಕಪಿಲಾ ನದಿ ಪಾತ್ರದಲ್ಲಿ ಪ್ರವಾಹದ ಮುನ್ಸೂಚನೆ ಎದುರಾದಂತಾಗಿದೆ. ಈ ಹಿನ್ನೆಲೆ ನದಿ ಪಾತ್ರದ ಜನರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಕಾವೇರಿ ನೀರಾವರಿ ನಿಗಮ ಪ್ರಕಟಣೆ ಹೊರಡಿಸಿದೆ.

ಈ ನದಿಯಲ್ಲಿ ಪ್ರಸ್ತುತ ಒಳಹರಿವು 13,000 ಕ್ಯುಸೆಕ್ ಇದ್ದು ಹೊರ ಹರಿವಿನ ಪ್ರಮಾಣ 2000 ಕ್ಯುಸೆಕ್ ಇದೆ. ಇಂದು ಹೊರಹರಿವು 16,000 ಕ್ಯುಸೆಕ್‌ಗೆ ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಇನ್ನು ಕಬಿನಿ ನದಿ ಪಾತ್ರ, ಎರಡೂ ದಂಡೆಯಲ್ಲಿರುವ ಜನರಿಗೆ ಆಸ್ತಿಪಾಸ್ತಿ, ಜಾನುವಾರುಗಳ ರಕ್ಷಣೆ ಹಾಗೂ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಗೊಳ್ಳುವಂತೆ ಸೂಚನೆ ನೀಡಿ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಆದೇಶ ಹೊರಡಿಸಿದ್ದಾರೆ.

ಒಟ್ಟಾರೆ ನದಿ ಪಾತ್ರದ ಜನರು ಕಂಗಾಲಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ