ಆ್ಯಪ್ನಗರ

ಚಂಪಾರಿಗೆ ಪರೋಕ್ಷವಾಗಿ ತಿರುಗೇಟು ನೀಡಿದ ಅನಂತಕುಮಾರ್

ಕನ್ನಡ ಸಾಹಿತ್ಯ ಸಮ್ಮೇಳನ ಢೋಂಗಿ ಜಾತ್ಯಾತೀತವಾದಕ್ಕೆ ಹಾಗೂ ರಾಜಕೀಯ ಉದ್ದೇಶ ಈಡೇರಿಸಿಕೊಳ್ಳುವ ವೇದಿಕೆಯಾಗಬಾರದು

Vijaya Karnataka Web 26 Nov 2017, 8:48 pm
ಮೈಸೂರು: ಕನ್ನಡ ಸಾಹಿತ್ಯ ಸಮ್ಮೇಳನ ಢೋಂಗಿ ಜಾತ್ಯಾತೀತವಾದಕ್ಕೆ ಹಾಗೂ ರಾಜಕೀಯ ಉದ್ದೇಶ ಈಡೇರಿಸಿಕೊಳ್ಳುವ ವೇದಿಕೆಯಾಗಬಾರದು ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತಕುಮಾರ್ ಅವರು ಪರೋಕ್ಷವಾಗಿ ಚಂಪಾ ಅವರಿಗೆ ತಿರುಗೇಟು ನೀಡಿದರು.
Vijaya Karnataka Web anantkumar taunts chandra sekhar patil
ಚಂಪಾರಿಗೆ ಪರೋಕ್ಷವಾಗಿ ತಿರುಗೇಟು ನೀಡಿದ ಅನಂತಕುಮಾರ್


ಕನ್ನಡ ರಾಷ್ಟ್ರೀಯ ಪ್ರಜ್ಞೆಯ ಭಾಗ. ಇಲ್ಲಿ ಪ್ರತ್ಯೇಕವಾದಕ್ಕೆ ಅವಕಾಶ ನೀಡಬಾರದು ಎಂದು ಹೇಳಿದ ಅವರು, ಮೈಸೂರಿನಲ್ಲೇ ನಡೆಯುತ್ತಿರುವ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ರಾಜವಂಶಸ್ಥರನ್ನು ದೂರವಿಟ್ಟಿದ್ದು ಬೇಸರದ ಸಂಗತಿ. ಅವರ ಮೂಲಕವೇ ಮೆರವಣೆಗೆಗೆ ಚಾಲನೆ ನೀಡಬೇಕಿತ್ತು ಎಂದು ಅಭಿಪ್ರಾಯಪಟ್ಟರು.

''ಪ್ರಜಾಸತ್ತೆಯನ್ನು, ನಮ್ಮ ಸಂವಿಧಾನದ ಮೌಲ್ಯಗಳನ್ನು ಎತ್ತಿ ಹಿಡಿಯುವ ಶಕ್ತಿಗಳನ್ನು ಬೆಂಬಲಿಸುವ ಮೂಲಕ- ಸೆಕ್ಯುಲರ್‌ ಪಕ್ಷಗಳ ಪರವಾಗಿ ನಾವು ಮತ ಚಲಾಯಿಸಬೇಕು(ಆ ಪಕ್ಷ ಈ ಪಕ್ಷ ಎಂದು ಪ್ರತ್ಯೇಕವಾಗಿ ಹೆಸರಿಸುವ ಅಗತ್ಯವಿಲ್ಲ),'' ಎಂದು ಚಂಪಾ ಅವರು 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮೇಳನದ ಅಧ್ಯಕ್ಷೀಯ ಭಾಷಣದಲ್ಲಿ ಹೇಳಿದ್ದರು. ಚಂಪಾ ಅವರ ರಾಜಕೀಯ ಭಾಷಣಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ