ಆ್ಯಪ್ನಗರ

ರಾಷ್ಟ್ರ, ರಾಜ್ಯ ಶೌರ್ಯ ಪ್ರಶಸ್ತಿವಿಜೇತರು ಪುಸ್ತಕ ಬಿಡುಗಡೆ

ಸಾಯಿನಾಥ ಪ್ರಕಾಶನ ವತಿಯಿಂದ ಬಿ.ಬೋರೇಗೌಡ ಅವರ 'ರಾಷ್ಟ್ರ ಶೌರ್ಯ ಪ್ರಶಸ್ತಿ ವಿಜೇತರು' ಮತ್ತು 'ರಾಜ್ಯ ಶೌರ್ಯ ಪ್ರಶಸ್ತಿ ವಿಜೇತರು' ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.

Vijaya Karnataka Web 15 Nov 2018, 5:00 am
ಮೈಸೂರು: ಸಾಯಿನಾಥ ಪ್ರಕಾಶನ ವತಿಯಿಂದ ಬಿ.ಬೋರೇಗೌಡ ಅವರ 'ರಾಷ್ಟ್ರ ಶೌರ್ಯ ಪ್ರಶಸ್ತಿ ವಿಜೇತರು' ಮತ್ತು 'ರಾಜ್ಯ ಶೌರ್ಯ ಪ್ರಶಸ್ತಿ ವಿಜೇತರು' ಪುಸ್ತಕಗಳನ್ನು ಬಿಡುಗಡೆಗೊಳಿಸಲಾಯಿತು.
Vijaya Karnataka Web 1411-2-1-MYSPHOTOS-40


ನಗರದ ರೋಟರಿ ಸಭಾಂಗಣದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಬುಧವಾರ ಆಯೋಜಿಸಿದ್ದ ಕಾರ‍್ಯಕ್ರಮದಲ್ಲಿ ಸಾಹಿತಿ ಟಿ.ಕೆ.ಚಿನ್ನಸ್ವಾಮಿ ಲೋಕಾರ್ಪಣೆಗೊಳಿಸಿದರು.

2016 ಜೂನ್‌ 6ರಂದು ಶಾಲಾ ವಾಹನದಲ್ಲಿ ಬೆಂಕಿ ಕಾಣಸಿಕೊಂಡಾಗ ತುರ್ತು ಬಾಗಿಲು ತೆರೆದು ತನ್ನ 40ಕ್ಕೂ ಹೆಚ್ಚು ಸಹಪಾಠಿಗಳ ಪ್ರಾಣ ಉಳಿಸದ್ದ ಶ್ರೇಯಸ್‌ ಎನ್‌.ರಾವ್‌ ಕಾರ್ಯಕ್ರಮ ಉದ್ಘಾಟಿಸಿದರು. ಮಕ್ಕಳ ಪ್ರಾಣ ಉಳಿಸಿದ ಮೈಸೂರು ಜಿಲ್ಲೆಯ ಶ್ರೇಯಸ್‌ ಎನ್‌.ರಾವ್‌ (14 ವರ್ಷ) ಮತ್ತು ಜಿ.ಎಂ.ಶಶಿಕುಮಾರ್‌(14 ವರ್ಷ) ಅವರಿಗೆ ಹೊಯ್ಸಳ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಕಥೆ ಹೇಳುವ ಸಂಸ್ಕೃತಿ ನಶಿಸುತ್ತಿದೆ

ಸಾಹಿತಿ ಟಿ.ಕೆ.ಚಿನ್ನಸ್ವಾಮಿ, ''ರಾಜಕಾರಣಿಗಳ ಸಣ್ಣಪುಟ್ಟ ಭಾಷಣ ಕೇಳಲು ಸಾವಿರಾರು ಸಂಖ್ಯೆಯಲ್ಲಿ ಜನ ಸೇರುತ್ತಾರೆ. ಆದರೆ, ಮಕ್ಕಳ ಸಾಹಿತ್ಯ ಕುರಿತ ಸಮಾರಂಭಕ್ಕೆ ಜನ ಸೇರುವುದಿಲ್ಲ,'' ಎಂದು ಬೇಸರಿಸದ ಅವರು, ''ಮಕ್ಕಳಿಗೆ ಕತೆ ಹೇಳಿ ಅವರಲ್ಲಿ ಸ್ಪೂರ್ತಿ ತುಂಬುವ ಸಂಸ್ಕೃತಿ ನಶಿಸಿಹೋಗುತ್ತಿದೆ. ವಿಭಕ್ತ ಕುಟುಂಬಗಳಿಂದಾಗಿ ಅವರಿಗೆ ಜೀವನ ಮೌಲ್ಯಗಳನ್ನು ಹೇಳಿಕೊಡಲು ಪೋಷಕರಿಗೆ ಸಮಯವಿಲ್ಲ. ಮಕ್ಕಳಿಗೆ ದೇಶಭಕ್ತಿ ಮತ್ತು ನೀತಿ ಶಿಕ್ಷ ಣ ಹೇಳಿಕೊಡುವುದು ಪೋಷಕರ ಜವಾಬ್ದಾರಿಯಾಗಿದೆ,'' ಎಂದು ತಿಳಿಸಿದರು.

ಶಾರದಾ ವಿಲಾಸ ಕಾಳೇಜು ಕನ್ನಡ ವಿಭಾಗದ ಮುಖ್ಯಸ್ಥೆ, ಪ್ರೊ.ವಿಮಲಾ ಶ್ರೀ, ''ಮೊಬೈಲ್‌ ಪ್ರಪಂಚದಲ್ಲಿ ಮೊಳಗಿರು ಇಂದಿನ ಮಕ್ಕಳು. ವಾಸ್ತವ ಜಗತ್ತಿನ ಸಮಸ್ಯೆಗಳಿಗೆ ಸ್ಪಂದಿಸುವ ಸಂವೇದನಾಶೀಲತೆ ಕಳೆದುಕೊಂಡಿದ್ದಾರೆ. ಮಕ್ಕಳಿಗೆ ಸಾಹಸ ಕತೆಗಳನ್ನು ಹೇಳುವುದರಿಂದ ಅವರಲ್ಲಿ ಸಾಹಸಪ್ರವೃತ್ತಿ ಬೆಳೆಸಲು ಸಾಧ್ಯವಾಗುತ್ತದೆ. ಸ್ವಯಂಪ್ರೇರಿತರಾಗಿ ಇನ್ನೊಬ್ಬರಿಗೆ ಸಹಾಯ ಮಾಡುವ ಮನೋಭಾವವನ್ನು ಬೆಳೆಸಿಕೊಳ್ಳುತ್ತಾರೆ. ಆದರೆ ಇಂದಿನ ತಾಯಂದಿರು ಅತಿಯಾದ ಶಿಸ್ತಿನಲ್ಲಿ ಮಕ್ಕಳನ್ನು ಬೆಳೆಸುತ್ತಿದ್ದಾರೆ. ತಮ್ಮ ಮಕ್ಕಳಿಗೆ ಜೀವನದ ಪಾಠಗಳನ್ನು ಹೇಳಿಕೊಡುತ್ತಿಲ್ಲ. ಸಹಜ ಕ್ರಿಯೆ ಆಗಿದ್ದ ಮಕ್ಕಳ ಪಾಲನೆ ಇಂದಿನ ಆಧುನಿಕ ಜಂಜಾಟದ ಬದುಕಿನಲ್ಲಿ ಸಂಕೀರ್ಣವಾಗುತ್ತಿದೆ. ಸರಕಾರ ಮಕ್ಕಳ ಸಾಹಸ ಕತೆಗಳನ್ನು ಪಠ್ಯಗಳಲ್ಲಿ ಅಳವಡಿಸಿ ಮಕ್ಕಳಲ್ಲಿ ಚೈತನ್ಯ ತುಂಬುವ ಕೆಲಸ ಮಾಡಬೇಕು,'' ಎಂದು ತಿಳಿಸಿದರು.

ಸಾಯಿನಾಥ ಪ್ರಕಾಶನ ಸಂಸ್ಥಾಪಕ ಅಪ್ಪಾಸ್ವಾಮಿ, ಪ್ರೊ.ನೀ.ಗಿರಿಗೌಡ, ಲೇಖಕ ಬೋರೇಗೌಡ, ಸಾಗರೀಕಾ, ನಾ.ಗಂಗಾಧರಪ್ಪ, ಆನಂದ ಆರ್ಮುಗಂ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ