ಆ್ಯಪ್ನಗರ

ಪ್ರಶಸ್ತಿಯಿಂದ ಬಂದ ಹಣ ಬುಡಕಟ್ಟು ಅಭಿವೃದ್ಧಿಗೆ

'ಭಾರತ ಅಭಿವೃದ್ಧಿ ಸಾಧಿಸಿದೆ, ಇಂಡಿಯಾ ಸೂಪರ್‌ ಪವರ್‌ ನೇಷನ್‌' ಎಂದು ಕರೆಯಲಾಗುತ್ತದೆ. ಆದರೆ, ಇಲ್ಲಿನ ಬಹುತೇಕ ಮಂದಿಗೆ ಒಂದು ಹೊತ್ತಿನ ಊಟ ಕೂಡ ಸಿಗುತ್ತಿಲ್ಲ ಎಂದು ಬಾಬಾ ಆಮ್ಟೆ ಅವರ ಪುತ್ರ ಹಾಗೂ ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಡಾ. ಪ್ರಕಾಶ್‌ ಬಾಬ ಆಮ್ಟೆ ಬೇಸರ ವ್ಯಕ್ತಪಡಿಸಿದರು.

Vijaya Karnataka 26 Jun 2018, 5:00 am
ಮೈಸೂರು : 'ಭಾರತ ಅಭಿವೃದ್ಧಿ ಸಾಧಿಸಿದೆ, ಇಂಡಿಯಾ ಸೂಪರ್‌ ಪವರ್‌ ನೇಷನ್‌' ಎಂದು ಕರೆಯಲಾಗುತ್ತದೆ. ಆದರೆ, ಇಲ್ಲಿನ ಬಹುತೇಕ ಮಂದಿಗೆ ಒಂದು ಹೊತ್ತಿನ ಊಟ ಕೂಡ ಸಿಗುತ್ತಿಲ್ಲ ಎಂದು ಬಾಬಾ ಆಮ್ಟೆ ಅವರ ಪುತ್ರ ಹಾಗೂ ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಡಾ. ಪ್ರಕಾಶ್‌ ಬಾಬ ಆಮ್ಟೆ ಬೇಸರ ವ್ಯಕ್ತಪಡಿಸಿದರು.
Vijaya Karnataka Web award winning money for tribal development
ಪ್ರಶಸ್ತಿಯಿಂದ ಬಂದ ಹಣ ಬುಡಕಟ್ಟು ಅಭಿವೃದ್ಧಿಗೆ


ಅರಿವು ವಿದ್ಯಾಸಂಸ್ಥೆ ಲಿಂಗಾಂಬುಧಿಪಾಳ್ಯದಲ್ಲಿರುವ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು. ತಮಗೆ ಮ್ಯಾಗ್ಸೆಸ್ಸೆ ಪ್ರಶಸ್ತಿಯಿಂದ ಬಂದ ಹಣದಿಂದ ಬುಡಕಟ್ಟು ಜನರ ಅಭಿವೃದ್ಧಿಗೊಳಿಸಿದ ಬಗ್ಗೆ ಅವರು ಇದೇ ವೇಳೆ ಮಾತನಾಡಿದರು. ''ಯಾವುದೇ ಪ್ರಶಸ್ತಿ ಸ್ವೀಕರಿಸಲು ಹೆಮ್ಮೆ ಇರುತ್ತದೆ. ಅಂತೆಯೇ ಮ್ಯಾಗ್ಸೆಸ್ಸೆ ಪ್ರಶಸ್ತಿ ಸ್ವೀಕರಿಸುವುದು ತುಂಬಾ ಖುಷಿಯ ವಿಚಾರ. ಪ್ರಶಸ್ತಿಯಿಂದ ತುಂಬಾ ಅನುಕೂಲವಾಯಿತು. ಆ ಪ್ರಶಸ್ತಿಯ ದೊಡ್ಡಸ್ತಿಕೆಗಿಂತ, ಅದರ ನಗದು ಬಹುಮಾನ ಬಹಳ ಉಪಯುಕ್ತವಾಯಿತು. ಅದನ್ನು ಸಮಾಜ ಸೇವೆ ಹಾಗೂ ಬುಡಕಟ್ಟು ಜನರ ಅಭಿವೃದ್ಧಿಗೆ ಬಳಸಿಕೊಂಡೆ,'' ಎಂದು ತಿಳಿಸಿದರು. ಮೊದಲ ಬಾರಿಗೆ ಮಹಾರಾಷ್ಟ್ರದ ಜನಸಂಪರ್ಕ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ, ಅಲ್ಲಿನ ಬುಡಕಟ್ಟು ಸಮುದಾಯದ ಜನರ ಸೇವೆಯಲ್ಲಿ ತೊಡಗಿಸಿಕೊಂಡ ಬಗ್ಗೆ ಉತ್ತರಿಸಿದ ಅವರು,'' ನಾವು ಎದುರಿಸುವ ಕಠಿಣ ಸಮಸ್ಯೆಗಳನ್ನು ಸವಾಲಾಗಿ ಸ್ವೀಕರಿಸುತ್ತೇನೆ. ಬುಡಕಟ್ಟು ಜನಾಂಗದವರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದು, ಅವರ ಮೇಲಿನ ದೌರ್ಜನ್ಯ ಹಾಗೂ ಅವರ ಮೂಢನಂಬಿಕೆಗಳಿಂದ ಹೊರ ತರುವುದು ಸವಾಲಾಗಿತ್ತು,'' ಎಂದರು.

ಸಮುದಾಯದೊಂದಿಗೆ ಬದುಕೋಣ: ಬುಡಕಟ್ಟು ಜನರ ಕಲ್ಯಾಣಕ್ಕಾಗಿ ತಮ್ಮನ್ನು ತಾವು ತೊಡಗಿಸಿಕೊಂಡ ಪರಿಯನ್ನು ಹೇಳಿಕೊಂಡ ಅವರು, '' ನನ್ನ ತಂದೆ ಅರಣ್ಯ ಪ್ರದೇಶ ಹಾಗೂ ತಳ ಸಮುದಾಯವರು ಇರುವ ಪ್ರದೇಶಗಳಿಗೆ ನನ್ನನ್ನು ಕರೆದುಕೊಂಡು ಹೋಗುತ್ತಿದ್ದರು. ಅಲ್ಲಿಂದ ನನ್ನ ಜೀವನವನ್ನು ಬುಡಕಟ್ಟು ಜನರ ಸೇವೆ ಮುಡಿಪಾಗಿಟ್ಟೆ. ಅವರಿಂದ ನಾನು ಸಹಿಷ್ಣುತೆ ಕಲಿತೆ, ಅವರು ಸಮುದಾಯದದೊಂದಿಗೆ ಜೀವನ ನಡೆಸುವುದು, ಮಹಿಳೆಯರನ್ನು ಗೌರವಿಸುವುದು, ಭ್ರೂಣ ಹತ್ಯೆ ವಿರೋಧಿಸುವುದನ್ನು ಕಲಿತೆ. ಬುಡಕಟ್ಟು ಜನರಲ್ಲಿ ತಿಳಿವಳಿಕೆ ಕಡಿಮೆ ಇರಬಹುದು. ಆದರೆ ಅವರು ಕಳ್ಳತನ ಮಾಡುವುದಿಲ್ಲ. ಆ ಪ್ರದೇಶದಲ್ಲಿ ಇದುವರೆಗೆ ಒಂದು ಅತ್ಯಾಚಾರವೂ ಜರುಗಿಲ್ಲ,'' ಎಂದು ತಿಳಿಸಿದರು.

''ಯುವ ವೈದ್ಯರು ಗ್ರಾಮೀಣ ಪ್ರದೇಶದದಲ್ಲಿ ಸೇವೆ ಮಾಡುವುದನ್ನು ಶಿಕ್ಷೆ ಎಂದ ಭಾವಿಸಬಾರದು. ಪ್ರತಿಯೊಬ್ಬರು ಯುವ ವೈದ್ಯರು ಗ್ರಾಮೀಣ ಪ್ರದೇಶದಲ್ಲಿ ಕನಿಷ್ಠವೆಂದರೂ ಎರಡು ವರ್ಷ ಸೇವೆ ಮಾಡಬೇಕು. ಈ ಮೂಲಕ ಅಲ್ಲಿನ ಆರೋಗ್ಯದ ಸಮಸ್ಯೆ ದೂರವಾಗುತ್ತದೆ. ಇದರಿಂದ ಭಾರತದ ಅಭಿವೃದ್ಧಿ ಹೊಂದುತ್ತದೆ,'' ಎಂದು ತಿಳಿಸಿದರು.

''ಪ್ರಸ್ತುತ ಅಭಿವೃದ್ಧಿ ಎಂದು ಹೇಳಲಾಗುತ್ತಿರುವ ಭಾರತದ ಮತ್ತೊಂದು ಮುಖವನ್ನು ಯುವ ಸಮುದಾಯ ಮತ್ತು ಮಕ್ಕಳಿಗೆ ತೋರಿಸಬೇಕು. ಈ ಮೂಲಕ ಅವರು ಬದಲಾವಣೆಗೊಳ್ಳಬೇಕು,'' ಎಂದರು. ಡಾ.ಮಂದಾಕಿನ ಆಮ್ಟೆ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ