ಆ್ಯಪ್ನಗರ

ಮೈಸೂರು ಏರ್‌ಪೋರ್ಟ್‌ನಲ್ಲಿ ಕೆಲಸ ಖಾಲಿ ಇದೆ ಎಂಬ ಜಾಹೀರಾತು ನೋಡಿದ್ರಾ..? ಹಾಗಾದ್ರೆ ಹುಷಾರ್‌..!

ಮೈಸೂರು ಏರ್‌ಪೋರ್ಟ್‌‌ನಲ್ಲಿ ಕೆಲಸ ಖಾಲಿ ಇದೆ ಎಂದು ಜಾಹೀರಾತು ನೋಡಿದ್ರಾ..? ಹಾಗಾದ್ರೆ ಹುಷಾರ್‌.. ನಿಮ್ಮ ಆಸೆ, ಆಕಾಂಕ್ಷೆಗಳ ಜೊತೆಗೆ ಜೇಬಿನಲ್ಲಿರುವ ದುಡ್ಡು ಕೂಡ ಖಾಲಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.. ನಿಮ್ಮನ್ನು ಮೋಸ ಮಾಡಲು ವಂಚಕರು ಕಾದುಕೊಂಡು ಕೂತಿದ್ದಾರೆ.

Vijaya Karnataka Web 9 Nov 2020, 8:06 pm
ಮೈಸೂರು: ಯುವಕರಿಗೆ ಸಾಮಾನ್ಯವಾಗಿ ಏರ್‌‌ಪೋರ್ಟ್‌ನಲ್ಲಿ ಕೆಲಸ ಸಿಗುತ್ತದೆ ಎಂದರೇ ಅದನ್ನು ಸಾಧನೆಯಂತೆ ಬಿಂಬಿಸಿಕೊಳ್ಳುತ್ತಾರೆ. ಹಾಗಂದುಕೊಂಡೇ ಮೈಸೂರು ವಿಮಾನ ನಿಲ್ದಾಣದಲ್ಲಿ ಆನ್‌ಲೈನ್ ಮೂಲಕ ಕೆಲಸಕ್ಕೆ ಅರ್ಜಿಯನ್ನು ಹತ್ತಾರು ಮಂದಿ ಹಾಕಿದ್ದರು. ಈ ರೀತಿ ಕೆಲಸ ಖಾಲಿ ಇದೆ ಎಂದು ಜಾಹೀರಾತು ಬಂದ ಕೂಡಲೇ ಮೊದಲು ಅರ್ಜಿ ಹಾಕಿದ್ದವರಿಗೆ ಸದ್ಯ ದೊಡ್ಡ ಬಂಡೆಕಲ್ಲು ತಲೆಮೇಲೆ ಬಿದ್ದ ಹಾಗಿದೆ.
Vijaya Karnataka Web be aware of fake job opening advertisement of mysuru airport
ಮೈಸೂರು ಏರ್‌ಪೋರ್ಟ್‌ನಲ್ಲಿ ಕೆಲಸ ಖಾಲಿ ಇದೆ ಎಂಬ ಜಾಹೀರಾತು ನೋಡಿದ್ರಾ..? ಹಾಗಾದ್ರೆ ಹುಷಾರ್‌..!


ಹೌದು, ನಿಮಗೆ ಪಂಗನಾಮ ಹಾಕಲು ವಂಚಕರ ಜಾಲ ಸಿದ್ದವಾಗಿದೆ. ಯಾವುದೇ ಅಧಿಕೃತ ವೆಬ್‌ಸೈಟ್ ಗುರುತಿಸದೆ ಖಾಸಗಿ ವೆಬ್‌ಸೈಟ್ ಮೂಲಕ ಅರ್ಜಿ ಹಾಕಲು ಜಾಹೀರಾತು ಬರುತ್ತಿದೆ. ಈಗಾಗಲೇ ಆನ್‌ಲೈನ್‌ನಲ್ಲಿ ಕೆಲಸಕ್ಕೆ ಅರ್ಜಿ ಹಾಕಿದ ಅಮಾಯಕರು ಜೇಬಿನಿಂದ ಹಣವನ್ನು ಸಹ ಕಳೆದುಕೊಂಡಿದ್ದಾರೆ.

ಇಂತಹ ನಕಲಿ ವೆಬ್‌ಸೈಟ್‌ಗಳ ಮೂಲಕ ಹಲವು ಹುದ್ದೆಗಳ ಆಮಿಷವೊಡ್ಡಿ ಸಾವಿರಾರು ರೂಪಾಯಿಗಳನ್ನು ವಂಚಿಸಿದ್ದಾರೆ. ಖುದ್ದು ಮೈಸೂರು ಏರ್‌ಪೋರ್ಟ್‌ನಲ್ಲಿ ಕೆಲಸ ಕೊಡಿಸುವ ಆಮಿಷವೊಡ್ಡಿ ವಂಚಿಸಿದ ಪ್ರಕರಣಗಳು ಬೆಳಕಿಗೆ ಬಂದಿದೆ. ಈ ನಡುವೆ ತಮಗೆ ಕೆಲಸ ಸಿಕ್ಕಾಯಿತು. ಅದಕ್ಕೆ ಬೇಕಾದ ನೇಮಕಾತಿ ಪತ್ರಗಳನ್ನು ಹಿಡಿದು ಏರ್‌ಪೋರ್ಟ್ ಕಚೇರಿಗೆ ಅಮಾಯಕರು ಅಲೆಯುತ್ತಿದ್ದಾರೆ.

ಮೈಸೂರು ಏರ್‌ಪೋರ್ಟ್‌ನಲ್ಲಿ ಕೆಲಸ ಎಂದು ಯುವಕರಿಗೆ ಮೋಸ‌..! ದುಷ್ಕರ್ಮಿಗಳಿಂದ ಲಕ್ಷಾಂತರ ರೂ. ವಂಚನೆ

ಇವುಗಳನ್ನು ಕಂಡು ವಂಚಕರ ಬಗ್ಗೆ ಕೂಡಲೇ ಜಾಗೃತರಾಗಿ ಇರುವಂತೆ ಏರ್‌ಪೋರ್ಟ್ ಅಧಿಕಾರಿಗಳು ಮನವಿ ಮಾಡಿದ್ದಾರೆ. ನಕಲಿ ವೆಬ್‌ಸೈಟ್‌ಗಳನ್ನು ನಂಬಿ ಮೋಸ ಹೋಗದಿರುವಂತೆ ಮೈಸೂರು ವಿಮಾನ ನಿಲ್ದಾಣದ ನಿರ್ದೇಶಕ ಮಂಜುನಾಥ್ ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿದ್ದಾರೆ.

ಈಗಾಗಲೇ 15 ರಿಂದ 20 ಮಂದಿಗೆ ವಂಚನೆ ಆಗಿದೆ. ಏರ್‌ಕ್ರಾಫ್ಟ್ ಗಳು ಹಾಗೂ ಲೋಗೋಗಳನ್ನು ಹಾಕಿ ನಂಬಿಸಿ ವಂಚಿಸುತ್ತಿದ್ದಾರೆ. ಇವರು ಹಂತ ಹಂತವಾಗಿ ಹಣ ಪೀಕುತ್ತಾರೆ. ವಂಚಕರ ಬಗ್ಗೆ ಎಚ್ಚೆತ್ತುಕೊಳ್ಳುವಂತೆ ಮಂಜುನಾಥ್ ಮನವಿ ಮಾಡಿದ್ದಾರೆ.

ಮೈಸೂರು ಏರ್‌ಪೋರ್ಟ್‌ ಪ್ರಯಾಣಿಕರ ಸಂಖ್ಯೆಯಲ್ಲಿ ಭಾರೀ ಏರಿಕೆ..! ಅಕ್ಟೋಬರ್‌ನಲ್ಲಿ 6,000+ ಮಂದಿ ಸಂಚಾರ

ಇನ್ನು, ಏರ್‌ಪೋರ್ಟ್‌ನಿಂದ ಅಧಿಕೃತವಾಗಿ ಅರ್ಜಿ ಕರೆದರೆ ಯಾವುದೇ ಹಣ ಪಾವತಿಸುವಂತಿಲ್ಲ. ಹಣ ಕೇಳಿದರೆ ಅದು ಮೋಸ ಎಂದು ಅರ್ಥ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ. ಅಮಾಯಕರೇ ಇವರಿಗೆ ಟಾರ್ಗೆಟ್ ಆಗಿದ್ದು, ಕೆಲಸಕ್ಕಾಗಿ ಅಲೆದಾಡುತ್ತಿರುವವರನ್ನ ಹುಡುಕಿ ನಂಬಿಸಿ ವಂಚಿಸುವುದೇ ಇವರ ಉದ್ದೇಶವಾಗಿದೆ ಎಂದು ಅವರು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ