ಆ್ಯಪ್ನಗರ

ಉತ್ತಮ ರೈಲು ನಿಲ್ದಾಣ: ಚಿಕ್ಕಮಗಳೂರಿಗೆ ಪ್ರಶಸ್ತಿ

ಮೈಸೂರು ವಿಭಾಗದಲ್ಲಿ 2018-19ರ ಸಾಲಿನಲ್ಲಿ ಉತ್ತಮವಾಗಿ ನಿರ್ವಹಿಸಲ್ಪಟ್ಟ ರೈಲು ನಿಲ್ದಾಣ ಪ್ರಶಸ್ತಿಗೆ ಚಿಕ್ಕಮಗಳೂರು ಭಾಜನವಾಗಿದೆ.

Vijaya Karnataka 1 Aug 2019, 5:00 am
ಮೈಸೂರು: ಮೈಸೂರು ವಿಭಾಗದಲ್ಲಿ 2018-19ರ ಸಾಲಿನಲ್ಲಿ ಉತ್ತಮವಾಗಿ ನಿರ್ವಹಿಸಲ್ಪಟ್ಟ ರೈಲು ನಿಲ್ದಾಣ ಪ್ರಶಸ್ತಿಗೆ ಚಿಕ್ಕಮಗಳೂರು ಭಾಜನವಾಗಿದೆ.
Vijaya Karnataka Web best railway station award for chikkmagaluru
ಉತ್ತಮ ರೈಲು ನಿಲ್ದಾಣ: ಚಿಕ್ಕಮಗಳೂರಿಗೆ ಪ್ರಶಸ್ತಿ


ಶಿವಮೊಗ್ಗಕ್ಕೆ ಎರಡನೇ ಪ್ರಶಸ್ತಿ ಲಭಿಸಿದೆ. ಪರಿಚಾಲಕರ ವಿಶ್ರಾಂತಿ ಕೊಠಡಿ ಪ್ರವರ್ಗದಲ್ಲಿ ಸುಬ್ರಹ್ಮಣ್ಯ ಮಾರ್ಗಕ್ಕೆ ಉತ್ತಮವಾಗಿ ನಿರ್ವಹಿಸಲ್ಪಟ್ಟ ವಿಶ್ರಾಂತಿ ಕೊಠಡಿ ಪ್ರಶಸ್ತಿ, ಸಿಗ್ನಲ್‌ ಮತ್ತು ಟೆಲಿಕಮ್ಯುನಿಕೇಷನ್‌ ಕಚೇರಿ ವಿಭಾಗದಲ್ಲಿ ಮೈಸೂರಿಗೆ ಉತ್ತಮ ನಿರ್ವಹಣೆ ಕಚೇರಿಗೆ ಪ್ರಶಸ್ತಿ ಲಭಿಸಿದೆ.

2018-19ರ ವರ್ಷದಲ್ಲಿ ಅತ್ಯುತ್ತಮವಾಗಿ ನಿರ್ವಹಿಸಲ್ಪಟ್ಟ ಸಣ್ಣ ನಿಲ್ದಾಣಗಳ ಪ್ರವರ್ಗದಲ್ಲಿ ರಾಮಗಿರಿ ರೈಲು ನಿಲ್ದಾಣ ಹಾಗೂ ಅತ್ಯುತ್ತಮವಾಗಿ ನಿರ್ವಹಿಸಲ್ಪಟ್ಟ ಪರಿಚಾಲಕರ ವಿಶ್ರಾಂತಿ ಕೊಠಡಿ ಪ್ರವರ್ಗದಲ್ಲಿ ಮೈಸೂರು ರೈಲು ನಿಲ್ದಾಣ ಪ್ರಶಸ್ತಿ ಪಡೆದುಕೊಂಡಿದೆ. 2018-19ರ ಸಾಲಿನ ಸುರಕ್ಷಾ ದಕ್ಷ ತಾ ಪ್ರಶಸ್ತಿಯನ್ನು ಮೈಸೂರು ವಿಭಾಗವು ಗಿಟ್ಟಿಸಿಕೊಂಡಿದೆ. ಅತ್ಯುತ್ತಮ ಸೇವೆಗಾಗಿ ಮೈಸೂರು ವಿಭಾಗದ ಒಬ್ಬರು ಅಧಿಕಾರಿ ಹಾಗೂ 39 ಸಿಬ್ಬಂದಿ ಮಹಾಪ್ರಬಂಧಕರ ಪ್ರಶಸ್ತಿ ಗಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ