ಆ್ಯಪ್ನಗರ

ಕಾಮಗಾರಿ ಕಳಪೆಯಾದರೆ ಕಪ್ಪುಪಟ್ಟಿಗೆ

ಇತಿಹಾಸ ಪ್ರಸಿದ್ಧ ಚುಂಚನಕಟ್ಟೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಗುಣಮಟ್ಟದಿಂದ ನಿರ್ವಹಿಸುವಂತೆ, ಕಾಮಗಾರಿ ಕಳಪೆ ಮಾಡಿದಲ್ಲಿ ಯಾವುದೇ ಮುಲಾಜಿಲ್ಲದೆ ಅಂಥ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಅಧಿಕಾರಿಗಳಿಗೆ ಶಾಸಕ ಸಾ.ರಾ.ಮಹೇಶ್‌ ತಾಕೀತು ಮಾಡಿದರು.

Vijaya Karnataka 21 Sep 2019, 5:00 am
ಕೃಷ್ಣರಾಜನಗರ : ಇತಿಹಾಸ ಪ್ರಸಿದ್ಧ ಚುಂಚನಕಟ್ಟೆಯಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಗುಣಮಟ್ಟದಿಂದ ನಿರ್ವಹಿಸುವಂತೆ, ಕಾಮಗಾರಿ ಕಳಪೆ ಮಾಡಿದಲ್ಲಿ ಯಾವುದೇ ಮುಲಾಜಿಲ್ಲದೆ ಅಂಥ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸುವಂತೆ ಅಧಿಕಾರಿಗಳಿಗೆ ಶಾಸಕ ಸಾ.ರಾ.ಮಹೇಶ್‌ ತಾಕೀತು ಮಾಡಿದರು.
Vijaya Karnataka Web blacklist if work is poor
ಕಾಮಗಾರಿ ಕಳಪೆಯಾದರೆ ಕಪ್ಪುಪಟ್ಟಿಗೆ


ಇದೇ ಶನಿವಾರ ಮತ್ತು ಭಾನುವಾರ ಚುಂಚನಕಟ್ಟೆಯಲ್ಲಿಜಲಪಾತೋತ್ಸವ ನಡೆಯುವ ಹಿನ್ನೆಲೆಯಲ್ಲಿಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ ಶಾಸಕರು ಚುಂಚನಕಟ್ಟೆಯಲ್ಲಿಸುಮಾರು 8 ಕೋಟಿ ರೂ.ವೆಚ್ಚದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿ ಮತ್ತು ಜಲಪಾತೋತ್ಸವ ಹಿನ್ನೆಲೆಯಲ್ಲಿ ನಡೆಯುತ್ತಿರುವ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿ ಮಾತನಾಡಿದರು.

''ಮುಂದಿನ ಜನವರಿಯಲ್ಲಿ ಪ್ರಾರಂಭವಾಗುವ ಜಾತ್ರೆ ವೇಳೆಗೆ ಆಂಜನೇಯ ದೇವರ ವಿಗ್ರಹ ಉದ್ಘಾಟನೆಗೆ ಸಿದ್ಧವಿರಬೇಕೆಂದು ಅಧಿಕಾರಿಗಳಿಗೆ ಸೂಚಿಸಿದ ಅವರು, ಯಾವುದೇ ಕಾರಣ ಹೇಳದೇ ವಿಗ್ರಹ ಸಿದ್ಧಪಡಿಸಿರಬೇಕು'' ಎಂದರು.

'' ಈ ಬಾರಿ ಜಲಪಾತೋತ್ಸವ ಕಾರ್ಯಕ್ರಮಕ್ಕೆ ಬಂದಿರುವ ಅನುದಾನ ಕಡಿಮೆಯಾಗಿದ್ದು, ಇರುವ ಅನುದಾನದಲ್ಲೆಕಾರ್ಯಕ್ರಮ ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಸಾ.ರಾ.ಮಹೇಶ್‌, ಕಾರ್ಯಕ್ರಮಕ್ಕೆ ಅಗತ್ಯ ಪ್ರಚಾರದ ಕೊರತೆ ಇದ್ದು ನಾನು ಬಂದಾಕ್ಷಣ ಕಾರ್ಯಕ್ರಮ ಆಗುವುದಿಲ್ಲ. ಜನತೆ ಕಾರ್ಯಕ್ರಮಕ್ಕೆ ಬರಬೇಕು. ಆದ್ದರಿಂದ ಪ್ರಚಾರಕ್ಕೆ ಹೆಚ್ಚು ಒತ್ತು ನೀಡುವಂತೆ'' ಸೂಚಿಸಿದರು.

''ನಾನು ಇದುವರೆವಿಗೆ ಕಾರಣಾಂñರದಿಂದ ಈ ಕಡೆ ಬಂದು ಗಮನಹರಿಸಲಾಗಲಿಲ್ಲ ಎಂದ ಅವರು, ಕಾರ್ಯಕ್ರಮದ ಸಮಯದಲ್ಲಿ ಪೊಲೀಸ್‌ ಇಲಾಖೆಯವರು ಭದ್ರತೆ ಮತ್ತು ವಾಹನ ನಿಲ್ದಾಣ ಸೇರಿದಂತೆ ಜನಸಂದಣಿ ಪ್ರದೇಶದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ'' ಸೂಚಿಸಿದರು.

ಕಾಲುವೆ, ಅಣೆಕಟ್ಟೆ ಬಳಿ ನಿಗಾ ಇಡಿ: '' ಕಾಲುವೆಯಲ್ಲಿ ಕಡಿಮೆ ಮಟ್ಟದಲ್ಲಿಅಗತ್ಯಕ್ಕೆ ಎಷ್ಟು ಬೇಕೋ ಅಷ್ಟು ನೀರು ಹರಿಸಿ ಯಾವುದೇ ಅಪಾಯ ಎದುರಾಗದಂತೆ ಹಾಗೂ ಅಣೆಕಟ್ಟೆ ಸುತ್ತ ಮುತ್ತ ಸಿಬ್ಬಂದಿ ನೇಮಕ ಮಾಡಿ ಯಾವುದೇ ಸಮಸ್ಯೆ ಎದುರಾಗದಂತೆ ಮುನ್ನೆಚ್ಚರಿಕೆ ವಹಿಸಿ,''ಎಂದು ನೀರಾವರಿ ಅಧಿಕಾರಿಗಳಿಗೆ ತಿಳಿಸಿದರು.

ಸಾರಿಗೆ ಅಧಿಕಾರಿಗಳು ಕಾರ್ಯಕ್ರಮದ ದಿನ ಅಗತ್ಯಕ್ಕೆ ತಕ್ಕಂತೆ ವಾಹನಗಳನ್ನು ಓಡಿಸುವಂತೆ ಸೂಚಿಸಿದ ಅವರು, ವಿದ್ಯುತ್‌ ಇಲಾಖೆ ಅಧಿಕಾರಿಗಳು ವಿದ್ಯುತ್‌ ಅಡಚಣೆಯಾಗದಂತೆ ನೋಡಿಕೊಳ್ಳುವಂತೆ ಹೇಳಿದರು.

ಶಾಸಕರಿಗೆ ಅಗೌರವ?

''ಕ್ಷೇತ್ರದ ಶಾಸಕ ನಾನೇ ಇದ್ದು ಜಲಪಾತೋತ್ಸವ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ನನ್ನ ಭಾವಚಿತ್ರ ಹಾಕದಿರುವುದು ಎಷ್ಟು ಸರಿ?,''ಎಂದು ಅಸಮಾಧಾನ ವ್ಯಕ್ತಪಡಿಸಿದ ಶಾಸಕರು, ''ಜಲಪಾತೋತ್ಸವ ಯಾವುದೇ ಜಿಲ್ಲೆಅಥವಾ ರಾಜ್ಯಮಟ್ಟದ ಕಾರ್ಯಕ್ರಮ ಅಲ್ಲ. ತಾಲೂಕಿನಲ್ಲಿಯಾವುದೇ ಕಾರ್ಯಕ್ರಮ ನಡೆದರೂ ಶಾಸಕನಾದ ನಾನೇ ಅಧ್ಯಕ್ಷತೆ ವಹಿಸಬೇಕು. ಆದರೂ ಆಹ್ವಾನ ಪತ್ರಿಕೆಯಲ್ಲಿನನ್ನ ಭಾವಚಿತ್ರ ಮುದ್ರಿಸದೆ ಇರುವುದು ಏಕೆ,''ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಈ ವಿಚಾರವನ್ನು ನನ್ನ ಗಮನಕ್ಕೆ ಏಕೆ ತರಲಿಲ್ಲಎಂದು ಪ್ರವಾಸೋದ್ಯಮ ಅಧಿಕಾರಿಗಳನ್ನು ಪ್ರಶ್ನಿಸಿದ ಅವರು ಯಾವುದೇ ವಿಚಾರವನ್ನು ನನ್ನ ಗಮನಕ್ಕೆ ತಂದು ಮಾಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಡಿವೈಎಸ್‌ಪಿ ಕ್ಷಮಾ ಮಿಶ್ರಾ, ಉಪವಿಭಾಗಾಧಿಕಾರಿ ವೀಣಾ, ತಹಸೀಲ್ದಾರ್‌ ಮಂಜುಳಾ, ಸರ್ಕಲ್‌ ಇನ್ಸ್‌ಪೆಕ್ಟರ್‌ ರಾಜು, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಜನಾರ್ದನ್‌, ಲೋಕೋಪಯೋಗಿ ಇಲಾಖೆ ಎಇಇ ಅರುಣ್‌, ಮೋಹನ್‌, ಜಿ.ಪಂ. ಎಇಇ ಮಂಜುನಾಥ್‌, ತಾ.ಪಂ.ಇಒ ಗಿರೀಶ್‌, ಬಿಇಒ ರಾಜು, ನೀರಾವರಿ ಇಲಾಖೆ ಪ್ರಕಾಶ್‌, ಕಿರಣ್‌ ಸಾರಿಗೆ ಇಲಾಖೆ ಪಾಪನಾಯಕ ಹಾಗೂ ಮತ್ತಿತರ ತಾಲೂಕು ಮಟ್ಟದ ಅಧಿಕಾರಿಗಳು ಹಾಗೂ ಜಾ.ದಳ ಮುಖಂಡರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ