ಆ್ಯಪ್ನಗರ

ಸಿಎಂ ಯಡಿಯೂರಪ್ಪ, ಸಂಸದೆ ಸುಮಲತಾ ಪೋಸ್ಟ್‌: ಐವರ ವಿರುದ್ಧ ದೂರು

ಕೆಆರ್‌ಎಸ್‌ ಜಲಾಶಯದಲ್ಲಿ ಬಾಗಿನ ಅರ್ಪಿಸುವ ವೇಳೆ ಒಂದು ವಿಡಿಯೋ ಕ್ಲಿಕ್ಕಿಸಿ ಫೋಟೋ ಬಳಸಿ ಯಡಿಯೂರಪ್ಪ ಮತ್ತು ಸಂಸದೆ ಸುಮಲತಾ ವಿರುದ್ಧ ಕಿಡಿಗೇಡಿಗಳು ಅಶ್ಲೀಲ ಪೋಸ್ಟ್ ಮಾಡಿದ್ದರು ಎಂದು ತಿಳಿದುಬಂದಿದೆ.

Vijaya Karnataka Web 22 Aug 2020, 8:57 pm
ಮೈಸೂರು: ತುಂಬಿದ ಕಬಿನಿ ಜಲಾಶಯಕ್ಕೆ ಬಾಗಿನ ಅರ್ಪಿಸುವ ವೇಳೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಮಂಡ್ಯದ ಸಂಸದರಾದ ಸುಮಲತಾ ಅವರ ಫೋಟೋ ತೆಗೆದು ಅದರ ಪೋಸ್ಟ್ ಹಾಕಿದ್ದ ಐವರ ವಿರುದ್ಧ ಮಂಡ್ಯ ಠಾಣೆಯಲ್ಲಿ ದೂರು ದಾಖಲಾಗಿದೆ.
Vijaya Karnataka Web ಬಾಗಿನ ಸಲ್ಲಿಸಿದ ಸಂದರ್ಭ
ಬಾಗಿನ ಸಲ್ಲಿಸಿದ ಸಂದರ್ಭ


ಅಪಪ್ರಚಾರ ಮಾಡಿರುವ ವಿಚಾರವಾಗಿ ಖುದ್ದು ಸಂಸದೆ ಸುಮಲತಾ ಬೆಂಬಲಿಗ ಬೇಲೂರು ಸೋಮಶೇಖರ್ ಕಿಡಿಗೇಡಿಗಳ ವಿರುದ್ಧ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕೆಆರ್‌ಎಸ್‌ ಜಲಾಶಯದಲ್ಲಿ ಬಾಗಿನ ಅರ್ಪಿಸುವ ವೇಳೆ ಒಂದು ವಿಡಿಯೋದಿಂದ ಫೋಟೋ ಕ್ಲಿಕ್ಕಿಸಿ, ಸಂಸದೆ ಸುಮಲತಾ ವಿರುದ್ಧ ಕಿಡಿಗೇಡಿಗಳು ಅಶ್ಲೀಲ ಪೋಸ್ಟ್ ಮಾಡಿದ್ದರು ಎಂದು ತಿಳಿದುಬಂದಿದೆ.

ಈ ನಡುವೆ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಸಹ ಅಪಪ್ರಚಾರ ಮಾಡಲಾಗಿತ್ತು. ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೇಲೂರು ಸೋಮಶೇಖರ್ ದೂರು ನೀಡಿದ್ದಾರೆ.

ಮಂಡ್ಯದ ಪಶ್ಚಿಮ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು IPC 1860( U/s-504,505(1)(B) ಅಡಿಯಲ್ಲಿ ಹರೀಶ್ ಎಚ್.ಜಿ, ಸುರೇಂದ್ರ ಶ್ರೀನಿವಾಸ್ ಗೌಡ@ ಮಂಡ್ಯ ಹುಡುಗ ಎಂಬ ಐಡಿಯಲ್ಲಿ ಪೋಸ್ಟ್‌ ಮಾಡಿದವರ ವಿರುದ್ಧ ಹಾಗೂ ಮತ್ತಷ್ಟು ಜನರ ಮೇಲೂ ದೂರು ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ