ಆ್ಯಪ್ನಗರ

ಬಸ್‌ ಕೊರತೆ: ಕೆಎಸ್‌ಆರ್‌ಟಿಸಿ ಅಧಿಕಾರಿಗೆ ಸಚಿವ ಜಿಟಿಡಿ ಪತ್ರ

ಬಸ್‌ ಕೊರತೆ ಹಾಗೂ ಬೀದಿ ಕಾಮಣ್ಣರ ಕಾಟದಿಂದಾಗಿ ತಾಲೂಕಿನ ಎರಡು ಗ್ರಾಮಗಳಲ್ಲಿ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸದಿರಲು ನಿರ್ಧರಿಸಿರುವ ಬಗ್ಗೆ ವಿಜಯ ಕರ್ನಾಟಕದಲ್ಲಿ ಜೂ. 3ರಂದು ಪ್ರಕಟವಾದ ವರದಿಯನ್ನು ಗಮನಿಸಿದ ಸಚಿವ ಜಿ.ಟಿ.ದೇವೇಗೌಡ ಅವರು ಸಮಸ್ಯೆ ಬಗೆಹರಿಸುವಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

Vijaya Karnataka 4 Jun 2019, 5:00 am
(ವಿಕ ಫಲಶೃತಿ)
Vijaya Karnataka Web bus deficit minister gt devegowda letter to ksrtc officer
ಬಸ್‌ ಕೊರತೆ: ಕೆಎಸ್‌ಆರ್‌ಟಿಸಿ ಅಧಿಕಾರಿಗೆ ಸಚಿವ ಜಿಟಿಡಿ ಪತ್ರ


ಮೈಸೂರು: ಬಸ್‌ ಕೊರತೆ ಹಾಗೂ ಬೀದಿ ಕಾಮಣ್ಣರ ಕಾಟದಿಂದಾಗಿ ತಾಲೂಕಿನ ಎರಡು ಗ್ರಾಮಗಳಲ್ಲಿ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸದಿರಲು ನಿರ್ಧರಿಸಿರುವ ಬಗ್ಗೆ ವಿಜಯ ಕರ್ನಾಟಕದಲ್ಲಿ ಜೂ. 3ರಂದು ಪ್ರಕಟವಾದ ವರದಿಯನ್ನು ಗಮನಿಸಿದ ಸಚಿವ ಜಿ.ಟಿ.ದೇವೇಗೌಡ ಅವರು ಸಮಸ್ಯೆ ಬಗೆಹರಿಸುವಂತೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.

ಮೈಸೂರು ತಾಲೂಕಿನ ಸಾಗರಕಟ್ಟೆ, ರಾಮೇನಹಳ್ಳಿ ಗ್ರಾಮಸ್ಥರು ಪಕ್ಕದ ಗ್ರಾಮದ ಕಲ್ಲೂರು ನಾಗನಹಳ್ಳಿ ಸರಕಾರಿ ಪ್ರೌಢಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸಲು ಸೂಕ್ತ ಬಸ್‌ ಸೌಲಭ್ಯವಿಲ್ಲದೆ ಇರುವುದರಿಂದ ಮಕ್ಕಳು ಎರಡು ಕಿ.ಮೀ. ನಡೆದು ಸಾಗಬೇಕು. ಈ ಮಾರ್ಗದಲ್ಲಿ ಬೀದಿ ಕಾಮಣ್ಣರ ಕಾಟವಿದೆ. ಹೀಗಾಗಿ ಈ ಮಾರ್ಗಕ್ಕೆ ಬಸ್‌ ಸೌಲಭ್ಯ ನೀಡದಿದ್ದರೆ ನಾವು ನಮ್ಮ ಎರಡೂ ಗ್ರಾಮಗಳ ಮಕ್ಕಳನ್ನು ಶಾಲೆಗೆ ದಾಖಲಿಸುವುದಿಲ್ಲ ಎಂದು ತಿಳಿಸಿದ್ದರು.

ವಿಜಯ ಕರ್ನಾಟಕದಲ್ಲಿನ ವರದಿ ಗಮನಿಸಿದ ಸಚಿವ ಜಿ.ಟಿ.ದೇವೇಗೌಡ ಅವರು ಕೆಎಸ್‌ಆರ್‌ಟಿಸಿ ಮೈಸೂರು ನಗರ ವಿಭಾಗೀಯ ನಿಯಂತ್ರಣಾಧಿಕಾರಿಗೆ ಪತ್ರ ಬರೆದು ಸೂಕ್ತ ಸೌಲಭ್ಯ ನೀಡುವಂತೆ ಸೂಚಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ