ಆ್ಯಪ್ನಗರ

ಆಟೊರಿಕ್ಷಾಕ್ಕೆ ಕಾರು ಡಿಕ್ಕಿ : 6 ವಿದ್ಯಾರ್ಥಿಗಳಿಗೆ ಗಾಯ

ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಆಟೊರಿಕ್ಷಾ ಹಾಗೂ ಕಾರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಆರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.

Vijaya Karnataka 7 Jul 2018, 5:00 am
ನಂಜನಗೂಡು: ಶಾಲಾ ಮಕ್ಕಳನ್ನು ಕರೆದೊಯ್ಯುತ್ತಿದ್ದ ಆಟೊರಿಕ್ಷಾ ಹಾಗೂ ಕಾ
ರು ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಆರು ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.
Vijaya Karnataka Web car crashes into autorickshaw 6 students injured
ಆಟೊರಿಕ್ಷಾಕ್ಕೆ ಕಾರು ಡಿಕ್ಕಿ : 6 ವಿದ್ಯಾರ್ಥಿಗಳಿಗೆ ಗಾಯ


ನಗರದ ಹುಲ್ಲಹಳ್ಳಿ ರಸ್ತೆಯ ಮಹದೇಶ್ವರ ಲೇಔಟ್‌ ಬಳಿ ಶುಕ್ರವಾರ ಈ ಘಟನೆ ನಡೆದಿದೆ. ಚಾಮಲಾಪುರಹುಂಡಿ ನಿವಾಸಿ ಮಹದೇವ್‌ ಎಂಬುವವರ ಪುತ್ರ ಸೋಮಶೇಖರ್‌(10), ರಾಮೇಗೌಡರ ಪುತ್ರ ಯಶ್ವಂತ್‌(10), ಚಂದ್ರು ಎಂಬುವವರ ಪುತ್ರ ಶಿವು(7), ಕೃಷ್ಣ ಎಂಬುವವರ ಪುತ್ರ ಕೃತಿಕ್‌(7), ಮಧು ಎಂಬುವವರ ಪುತ್ರ ಮಹದೇವಸ್ವಾಮಿ(10) ಹಾಗೂ ಕೋರೆಹುಂಡಿಯ ನಿವಾಸಿ ಮಲ್ಲಿಕಾರ್ಜುನ್‌ ಪುತ್ರ ಶ್ರೇಯಸ್‌(5) ಗಾಯಗೊಂಡವರು. ಇವರೆಲ್ಲರೂ ಸಿಟಿಜನ್‌, ರೋಟರಿ ಹಾಗೂ ಬಿಎಸ್‌ಎಸ್‌ ಖಾಸಗಿ ಶಾಲೆಯ ವಿದ್ಯಾರ್ಥಿಗಳಾಗಿದ್ದಾರೆ.

ಶುಕ್ರವಾರ ಮಕ್ಕಳು ಶಾಲೆಗೆ ಆಟೊರಿಕ್ಷಾದಲ್ಲಿ ತೆರಳುತ್ತಿದ್ದ ವೇಳೆ ಎದುರುಗಡೆಯಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಇದರಿಂದಾಗಿ ನಿಯಂತ್ರಣ ತಪ್ಪಿದ ಆಟೊರಿಕ್ಷಾ ಪಲ್ಟಿ ಹೊಡೆದಿದ್ದು, ಶಾಲಾ ಮಕ್ಕಳು ರಿಕ್ಷಾದಿಂದ ನೆಲಕ್ಕುರುಳಿದ್ದಾರೆ. ಇದರಿಂದಾಗಿ ಕೆಲ ಮಕ್ಕಳಿಗೆ ತಲೆ, ಕೈ ಕಾಲುಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಅವರನ್ನು ಮೈಸೂರಿಗೆ ರವಾನಿಸಲಾಯಿತು.

ವಿಷಯ ತಿಳಿಯುತ್ತಿದ್ದಂತೆ ಆಸ್ಪತ್ರೆಗೆ ಧಾವಿಸಿದ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಕೆ.ಜಿ.ಮಹೇಶ್‌ ವಿದ್ಯಾರ್ಥಿಗಳ ಆರೋಗ್ಯ ವಿಚಾರಿಸಿದರು. ಘಟನಾ ಸ್ಥಳಕ್ಕೆ ಸಂಚಾರಿ ಪೊಲೀಸರು ತೆರಳಿ ಮಹಜರು ನಡೆಸಿದರು.

ತಾಲೂಕಿನ ಕುರಹಟ್ಟಿ ಗ್ರಾಮದ ಬಳಿ ಜೂ.25ರಂದು ಶಾಲಾ ವಾಹನ ಅಪಘಾತಕ್ಕೀಡಾಗಿ ಚಾಲಕ ಮೃತಪಟ್ಟು 15 ಮಂದಿ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಾಸುವ ಮುನ್ನವೇ ಶಾಲಾ ವಿದ್ಯಾರ್ಥಿಗಳ ಆಟೊರಿಕ್ಷಾ ಅಪಘಾತ ನಡೆದಿರುವುದು ಪೋಷಕರಿಗೆ ಆತಂಕ ಸೃಷ್ಟಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ