ಆ್ಯಪ್ನಗರ

ಆಸ್ತಿ ವ್ಯಾಜ್ಯ: ಮಾಜಿ ಸಚಿವರ ಪುತ್ರಿ ವಿರುದ್ದ ಕೇಸ್‌ ದಾಖಲು

ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಮೂಲದ ಮಾಜಿ ಮಂತ್ರಿಯ ಪುತ್ರಿ ವಿರುದ್ದ ಮೈಸೂರು ಜಿಲ್ಲೆಯ ಮಾಜಿ ಶಾಸಕರೊಬ್ಬರು ದೂರು ನೀಡಿದ್ದಾರೆ.

Vijaya Karnataka 20 Oct 2019, 5:00 am
ಮೈಸೂರು: ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಬಳ್ಳಾರಿ ಮೂಲದ ಮಾಜಿ ಮಂತ್ರಿಯ ಪುತ್ರಿ ವಿರುದ್ದ ಮೈಸೂರು ಜಿಲ್ಲೆಯ ಮಾಜಿ ಶಾಸಕರೊಬ್ಬರು ದೂರು ನೀಡಿದ್ದಾರೆ.
Vijaya Karnataka Web case filed against former ministers daughter
ಆಸ್ತಿ ವ್ಯಾಜ್ಯ: ಮಾಜಿ ಸಚಿವರ ಪುತ್ರಿ ವಿರುದ್ದ ಕೇಸ್‌ ದಾಖಲು


ವಿವಿ ಮೊಹಲ್ಲಾದಲ್ಲಿ ಮಾಜಿ ಮಂತ್ರಿಯ ಪುತ್ರನ ಮಾಲೀಕತ್ವದಲ್ಲಿ ಪೆಂಟ್‌ ಹೌಸ್‌ ಇದ್ದು, ಅದನ್ನು ಮಂತ್ರಿಯ ಪುತ್ರ ಮೈಸೂರಿನ ಮಾಜಿ ಶಾಸಕರಿಗೆ ಮಾರಾಟ ಮಾಡುವ ಸಂಬಂಧ ಒಪ್ಪಂದ ಮಾಡಿಕೊಂಡಿದ್ದರು.

ಮಾಜಿ ಮಂತ್ರಿಯ ಪುತ್ರನ ನಿಧನದ ಬಳಿಕ ಮಾಜಿ ಶಾಸಕರು ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದರು. ವಾರದ ಹಿಂದೆ ಮಾಜಿ ಮಂತ್ರಿಯ ಪುತ್ರಿ ಮೈಸೂರಿಗೆ ಬಂದಿದ್ದು, ಸೋದರನ ಪೆಂಟ್‌ ಹೌಸ್‌ ತಮಗೆ ಸೇರಿದೆ ಎಂದು ತಮ್ಮ ವಶಕ್ಕೆ ಪಡೆಯಲು ಮುಂದಾಗಿದ್ದು, ಬಾಗಿಲು ಒಡೆದು ಮನೆಯೊಳಗೆ ತೆರಳಿದ್ದರು. ಈ ವೇಳೆ ಕೆಲ ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದರು. ವಿಷಯ ತಿಳಿದು ಪೆಂಟ್‌ಹೌಸ್‌ಗೆ ಆಗಮಿಸಿದ ಮಾಜಿ ಶಾಸಕರು, ಸಿಸಿ ಟಿವಿ ಕ್ಯಾಮೆರಾದಲ್ಲಿಮಾಜಿ ಮಂತ್ರಿಯ ಪುತ್ರಿ ನಡೆಸಿರುವ ಕೃತ್ಯವನ್ನು ನೋಡಿ, ತಕ್ಷಣ ವಿವಿ ಪುರಂ ಪೊಲೀಸ್‌ ಠಾಣೆಗೆ ಅಕ್ರಮವಾಗಿ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದಾರೆ ಎಂದು ದೂರು ನೀಡಿದ್ದಾರೆ.

ಈ ಸಂಬಂಧ ವಿವಿ ಪುರಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ