ಆ್ಯಪ್ನಗರ

ರಾಜಕಾರಣಿಗಳ ವಿರುದ್ಧ ಸಿ.ಡಿ ಬಾಂಬ್‌ ಸಹಜ..! ಬಿಎಸ್‌ವೈ ಪರ ಬ್ಯಾಟಿಂಗ್‌ ಮಾಡಿದ್ರಾ ತನ್ವೀರ್ ಸೇಠ್..?

ರಾಜಕಾರಣಿಗಳು ಎಂದ ಮೇಲೆ ಈ ರೀತಿ ಸಿಡಿ ವಿಚಾರಗಳು ಬರುವುದು ಸಹಜ. ಅವುಗಳನ್ನು ಅಷ್ಟು ಗಂಭೀರವಾಗಿ ಪರಿಗಣಿಸಬಾರದು ಎಂದು ಶಾಸಕ ತನ್ವೀರ್‌ ಸೇಠ್‌ ಹೇಳಿದ್ದಾರೆ. ಈ ಮೂಲಕ ಬಿಎಸ್‌ ಯಡಿಯೂರಪ್ಪ ಪರ ಬ್ಯಾಟಿಂಗ್‌ ಮಾಡಿದ್ರಾ ಎಂಬ ಅನುಮಾನಗಳು ಕಾಡುತ್ತಿವೆ.

Vijaya Karnataka Web 18 Jan 2021, 6:56 pm
ಮೈಸೂರು: ರಾಜಕಾರಣಿಗಳ ವಿರುದ್ಧ ಸಿಡಿ ಬಾಂಬ್‌ಗಳು ಸಹಜವಾಗಿ ಬಂದೇ ಬರುತ್ತದೆ. ಅದನ್ನು ಅಷ್ಟು ಗಂಭೀರವಾಗಿ ಪರಿಗಣಿಸಬಾರದು ಎಂದು ಶಾಸಕ ತನ್ವೀರ್‌ ಸೇಠ್‌ ಹೇಳಿದ್ದಾರೆ.
Vijaya Karnataka Web cds are common in politicians life says mla tanveer sait
ರಾಜಕಾರಣಿಗಳ ವಿರುದ್ಧ ಸಿ.ಡಿ ಬಾಂಬ್‌ ಸಹಜ..! ಬಿಎಸ್‌ವೈ ಪರ ಬ್ಯಾಟಿಂಗ್‌ ಮಾಡಿದ್ರಾ ತನ್ವೀರ್ ಸೇಠ್..?


ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾರಣಿಗಳು ಎಂದ ಮೇಲೆ ಈ ರೀತಿ ಸಿಡಿ ವಿಚಾರಗಳು ಬರುವುದು ಸಹಜ. ಈ ಹಿಂದೆ ನನ್ನ ವಿರುದ್ದವೇ ಗ್ರಂಥಪಾಲಕರಿಂದ ಕೋಟ್ಯಂತರ ರೂಪಾಯಿ ಲಂಚ ಸ್ವೀಕಾರದ ಸಿಡಿ ಬಾಂಬ್ ಸಿಡಿಸಿದ್ದರು. ಆದರೆ ಆ ಮೇಲೆ ಏನಾಯಿತೆಂದು ಎಲ್ಲರಿಗೂ ತಿಳಿದಿದೆ. ಹೀಗಾಗಿ ಅವರ ವೈಯುಕ್ತಿಕ ಹೇಳಿಕೆಗಳು ಅಷ್ಟು ಮಹತ್ವ ಹೊಂದುವುದಿಲ್ಲ ಎಂದರು.

ಸ್ವಪಕ್ಷದವರ ವಿರುದ್ಧ ತಿರುಗಿಬಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಗ್ಗೆ ಪ್ರತಿಕ್ರಿಯಿಸಿ, ಸದ್ಯ ಯತ್ನಾಳ್ ಅಧಿಕಾರದಲ್ಲಿದ್ದು ಅವರು ಮೂಲೆ‌ಗುಂಪಾಗಿದ್ದಾರೆ. ಅವರ ಹೇಳಿಕೆಯ ಬಗ್ಗೆ ಯೋಚನೆ ಮಾಡಬೇಕಾಗುತ್ತದೆ‌. ಯತ್ನಾಳ್ ಮೊದಲು ಸ್ಪಷ್ಟವಾಗಿ ಹೇಳಲಿ. ಅವರು ಆಡಳಿತ ಪಕ್ಷದಲ್ಲಿದ್ದಾರೋ ಅಥವಾ ವಿರೋಧ ಪಕ್ಷದಲ್ಲಿದ್ದಾರೋ ಅಂತ. ಅವರು ಹೇಳಿದ್ದಾರೆ ಕಾಂಗ್ರೆಸ್‌ನಲ್ಲಿ ಹೇಳಿದ್ದು ನಡೆಯುತ್ತದೆ ಎಂದು. ಹಾಗಾದರೇ ಅವರು ಆ‌ ಪಕ್ಷದಲ್ಲಿದ್ದು ಏನು ಸಾಧನೆ ಮಾಡಲು ಆಗಲ್ಲ. ಮೊದಲು ಕಾಂಗ್ರೆಸ್‌ಗೆ ಬನ್ನಿ ಎಂದು ಆಹ್ವಾನ ನೀಡಿದರು. ಈ ವಯಸ್ಸಲ್ಲೂ ಯಡಿಯೂರಪ್ಪ ಏನೇನ್‌ ಮಾಡಿದ್ದಾರೋ ಯಾರಿಗ್‌ ಗೊತ್ತು? ಸಿಡಿ ತನಿಖೆಗೆ ಸಿದ್ದರಾಮಯ್ಯ ಆಗ್ರಹಇನ್ನು, ಸಿಎಂ ಇಬ್ರಾಹಿಂ ಜೆಡಿಎಸ್‌ ಸೇರ್ಪಡೆ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ಇಬ್ರಾಹಿಂ ನಮ್ಮ ನಾಯಕರು, ಏಕಾಂಗಿಯಲ್ಲ. ನಾವೆಲ್ಲಾ ಶೀಘ್ರದಲ್ಲೇ ಸಭೆ ಸೇರುತ್ತೇವೆ. ಮುಸ್ಲಿಂ ಲೆಜಿಸ್ಲೆಟೀವ್‌ ಫೋರಂ‌ನಿಂದ ಸಭೆ‌ ಸೇರುತ್ತೇವೆ ಸಭೆಯಲ್ಲಿ ಸಿಎಂ ಇಬ್ರಾಹಿಂ ಅಸಮಾಧಾನದ ಬಗ್ಗೆ ಸತ್ಯವನ್ನು ಹುಡುಕುತ್ತೇವೆ. ಸಿಎಂ‌ ಇಬ್ರಾಹಿಂ ಎಲ್ಲೂ ಹೋಗಲ್ಲ ಅಂತ ಹಿಂದೆಯೂ ಹೇಳಿದ್ದೇನೆ. ಅವರು ಎಲ್ಲೂ ಹೋಗಲ್ಲ ಎಂದರು.
ಮೈಸೂರು: ಮೇಯರ್‌ ಸ್ಥಾನಕ್ಕಾಗಿ ತ್ರಿಪಕ್ಷಗಳ‌ ಸರ್ಕಸ್‌..! ಯಾರಿಗೆ ಜೆಡಿಎಸ್‌ ಬೆಂಬಲ..?ಅವರು ನಮ್ಮ ಜೊತೆ ಸಮಾಲೋಚನೆ ಮಾಡಿಯೇ ತೀರ್ಮಾನ ತೆಗೆದುಕೊಳ್ಳಬೇಕು. ಅವರಿಗೆ ಆದ ನೋವನ್ನು ಹೇಳಿಕೊಳ್ಳಲು ವಾಕ್‌ ಸ್ವಾತಂತ್ರ್ಯ ಇದೆ. ಕಾಂಗ್ರೆಸ್ ತತ್ವ ಸಿದ್ಧಾಂತಗಳಿಗೆ ಬಲ ಕೊಡುವ ಕೆಲಸ ಮಾಡಬೇಕು. ಇಬ್ರಾಹಿಂ ವಿಚಾರದಲ್ಲಿ ಎಲ್ಲಿಯೋ ಸರಿಯಾದ ಲಿಂಕ್‌ ಆಗುತ್ತಿಲ್ಲ. ಅವರು ಮಾತನಾಡುವುದು ಒಂದು, ಹೊರಗೆ ಬರುತ್ತಿರೋದು ಮತ್ತೊಂದು ಎಂಬಂತಾಗಿದೆ. ಹಾಗಾಗಿ ಇಬ್ರಾಹಿಂ ಪಕ್ಷ ಬಿಡದಂತೆ ಮನವೊಲಿಸುತ್ತೇವೆ ಎಂದು ಸ್ಪಷ್ಟನೆ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ