ಆ್ಯಪ್ನಗರ

Mysuru Dasara - ದಸರಾ ದೀಪಾಲಂಕಾರ ಕಣ್ತುಂಬಿಕೊಂಡ ಸಿಎಂ ಬೊಮ್ಮಾಯಿ ಅಂಡ್ ಫ್ಯಾಮಿಲಿ

ರ‍್ಯಾ ಡಿಸನ್ ಬ್ಲೂ ಹೋಟೆಲ್‌ನಿಂದ ಕೆ.ಎಸ್.ಆರ್.ಟಿ.ಸಿ.ಯ ಎರಡು ವೋಲ್ವೊ ಬಸ್ ಮೂಲಕ ವಿದ್ಯಾಪೀಠ ಸರ್ಕಲ್‌ಗೆ ಆಗಮಿಸಿದ ಗಣ್ಯರು ಅಲ್ಲಿಂದ ಪ್ರವಾಸೋದ್ಯಮ ನಿಗಮದ ಅಂಬಾರಿ ಓಪನ್‌ ಏರ್ ಬಸ್ ಮೂಲಕ ಸಿ.ಟಿ. ರೌಂಡ್ಸ್ ನಡೆಸಿದರು. ಅಂಬಾರಿ ಬಸ್ ವಿದ್ಯಾ ಪೀಠ ಸರ್ಕಲ್‌ನಿಂದ ಹಾರ್ಡಿಂಗ್ ಸರ್ಕಲ್, ಜಯಚಾಮರಾಜೇಂದ್ರ ಒಡೆಯರ್ ಸರ್ಕಲ್, ಕೆ.ಆರ್. ಸರ್ಕಲ್, ಸಯ್ಯಾಜಿ ರಾವ್ ರಸ್ತೆ ಮೂಲಕ ಹೈವೇ ಸರ್ಕಲ್ ವರೆಗೆ ಸಾಗಿ ಹಿಂದಿರುಗಿದರು.

Edited byಚೇತನ್ ಓ.ಆರ್. | Vijaya Karnataka Web 26 Sep 2022, 2:07 pm
ಮೈಸೂರು: ಮೈಸೂರು ದಸರಾ ದೀಪಾಲಂಕಾರ ವನ್ನ ಭಾನುವಾರ ರಾತ್ರಿ 11:30 ಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಸಿಟಿ ರೌಂಡ್ಸ್ ನಡೆಸಿ ದೀಪಾಲಂಕಾರ ಮತ್ತಿತರ ಸಿದ್ಧತೆ ಪರಿಶೀಲನೆ ನಡೆಸಿದ್ರು
Vijaya Karnataka Web CM rounds.
ಮೈಸೂರಿನ ದೀಪಾಲಂಕಾರ ವೀಕ್ಷಿಸಿದ ಸಿಎಂ ಬಸವರಾಜ್ ಬೊಮ್ಮಾಯಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್.


ಮುಖ್ಯಮಂತ್ರಿ ಶ್ರೀ ಬಸವರಾಜ ಬೊಮ್ಮಾಯಿ ಅವರು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಸೇರಿದಂತೆ ಹಲವು ಗಣ್ಯರೊಂದಿಗೆ ಭಾನುವಾರ ರಾತ್ರಿ 11:30 ಗಂಟೆ ಸುಮಾರಿಗೆ ವಿದ್ಯಾಪೀಠ ಸರ್ಕಲ್ ನಿಂದ ಸಿಟಿ ರೌಂಡ್ಸ್ ನಡೆಸಿದ್ರು. ರ‍್ಯಾ ಡಿಸನ್ ಬ್ಲೂ ಹೋಟೆಲ್‌ನಿಂದ ಕೆ.ಎಸ್.ಆರ್.ಟಿ.ಸಿ.ಯ ಎರಡು ವೋಲ್ವೊ ಬಸ್ ಮೂಲಕ ವಿದ್ಯಾಪೀಠ ಸರ್ಕಲ್‌ಗೆ ಆಗಮಿಸಿದ ಗಣ್ಯರು ಅಲ್ಲಿಂದ ಪ್ರವಾಸೋದ್ಯಮ ನಿಗಮದ ಅಂಬಾರಿ ಓಪನ್‌ ಏರ್ ಬಸ್ ಮೂಲಕ ಸಿ.ಟಿ. ರೌಂಡ್ಸ್ ನಡೆಸಿದರು.

Mysuru Dasara 2022 | ವಿಶ್ವವಿಖ್ಯಾತ ಮೈಸೂರು ದಸರಾಗೆ ವಿದ್ಯುಕ್ತ ಚಾಲನೆ ನೀಡಿದ ರಾಷ್ಟ್ರಪತಿ

ಇಡೀ ಲೈಟಿಂಗ್ಸ್ ವೀಕ್ಷಣೆ..!

ಅಂಬಾರಿ ಬಸ್ ವಿದ್ಯಾ ಪೀಠ ಸರ್ಕಲ್‌ನಿಂದ ಹಾರ್ಡಿಂಗ್ ಸರ್ಕಲ್, ಜಯಚಾಮರಾಜೇಂದ್ರ ಒಡೆಯರ್ ಸರ್ಕಲ್, ಕೆ.ಆರ್. ಸರ್ಕಲ್, ಸಯ್ಯಾಜಿ ರಾವ್ ರಸ್ತೆ ಮೂಲಕ ಹೈವೇ ಸರ್ಕಲ್ ವರೆಗೆ ಸಾಗಿ ಹಿಂದಿರುಗಿದ್ರು. ಬಳಿಕ ಆಯುರ್ವೇದಿಕ್ ಆಸ್ಪತ್ರೆಯಿಂದ ಬಲಕ್ಕೆ ತಿರುಗಿ, ರೈಲ್ವೇ ನಿಲ್ದಾಣ, ಮೆಟ್ರೊಪೋಲೊ ಸರ್ಕಲ್, ಹುಣಸೂರು ರಸ್ತೆ ಕಡೆಗೆ ತಿರುಗಿ ಸ್ಕೌಟ್ಸ್ ಅಂಡ್ ಗೈಡ್ಸ್ ಶಾಲೆ ಮೂಲಕ ಚಾಮರಾಜ ಜೋಡಿ ರಸ್ತೆ, ಹಾದು ವಿದ್ಯಾಪೀಠ ಸರ್ಕಲ್ ತಲುಪಿದರು.

ಮೈಸೂರು ಜಗಮಗ..!

ಈ ಬಾರಿ ಅದ್ಧೂರಿ ಹಾಗೂ ಸಾಂಪ್ರದಾಯಿಕ ದಸರಾದ ಹಿನ್ನೆಲೆಯಲ್ಲಿ ವಿಶೇಷ ದೀಪಾಲಂಕಾರ ಮಾಡಲಾಗಿದೆ. ಮೈಸೂರು ನಗರದ ಸುತ್ತಮುತ್ತಲು ಸುಮಾರು 124 ಕಿ.ಮೀ ಸುತ್ತ, 96 ವೃತ್ತಗಳಲ್ಲಿ ವಿಶೇಷ ದೀಪಾಲಂಕಾರ ಕಂಗೊಳಿಸುತ್ತಿದೆ. ಇತ್ತೀಚೆಗೆ ನಿಧನರಾದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಸೇರಿದಂತೆ 28 ವಿವಿಧ ಬಗೆಯ ಪ್ರತಿಕೃತಿಗಳನ್ನು ದಸರಾ ದೀಪಾಲಂಕರದಲ್ಲಿ ಪ್ರಮುಖ ಸ್ಥಳಗಳಲ್ಲಿ ನಿರ್ಮಿಸಲಾಗಿದೆ. ಪ್ರತಿ ವರ್ಷದಂತೆ ರಾತ್ರಿ 7 ಗಂಟೆಯಿಂದ 10.30ರ ವರೆಗೆ ದೀಪಾಲಂಕಾರ ವೀಕ್ಷಿಸಲು ಅವಕಾಶ ಇದೆ.
ಲೇಖಕರ ಬಗ್ಗೆ
ಚೇತನ್ ಓ.ಆರ್.
ಪ್ರಸ್ತುತ, ವಿಜಯ ಕರ್ನಾಟಕ ವೆಬ್ ನಲ್ಲಿ ಪತ್ರಕರ್ತನಾಗಿ 2022ರಿಂದ ಪತ್ರಕರ್ತನಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2007ರಲ್ಲಿ ತುಮಕೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ 5ನೇ ರ‍್ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಮೈಸೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ ಪಿಎಚ್ ಡಿ ಪದವಿ ಪಡೆದಿದ್ದಾರೆ. ಜಿಲ್ಲಾ ಸುದ್ದಿಗಳಿಂದ ಹಿಡಿದು ಕ್ರೀಡೆ, ದೇಶ- ವಿದೇಶ, ಸಿನಿಮಾ, ವಿಜ್ಞಾನ- ತಂತ್ರಜ್ಞಾನ ಇತ್ಯಾದಿ ವೈವಿಧ್ಯಯಮ ವಿಷಯಗಳ ಬಗ್ಗೆ ಬರೆಯುವ ಇವರಿಗೆ, ನಾನಾ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಈವರೆಗೆ 16 ವರ್ಷ ಕೆಲಸ ಮಾಡಿದ ಅನುಭವವಿದೆ. ಫೋಟೋಗ್ರಫಿ ಇವರ ಅಚ್ಚುಮೆಚ್ಚಿನ ಹವ್ಯಾಸ. ಸಿನಿಮಾ, ಸಾಕ್ಷ್ಯಚಿತ್ರ, ಸಾಹಿತ್ಯ, ವಿಡಿಯೋ ಸಂಕಲನ, ಪತ್ರಿಕೆ ಪುಟ ವಿನ್ಯಾಸ, ಹಾಡುಗಾರಿಕೆ, ಚಿತ್ರಕಲೆ, ಅನಿಮೇಶನ್, ಸಂಗೀತದಲ್ಲಿಯೂ ಆಸಕ್ತಿಯಿದೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ