ಆ್ಯಪ್ನಗರ

ಬಾಲ್ಯವಿವಾಹ, ಅತ್ಯಾಚಾರ: 10 ವರ್ಷ ಶಿಕ್ಷೆ

ಬಾಲಕಿಯೊಬ್ಬಳನ್ನು ಅಪಹರಿಸಿ ಬಾಲ್ಯ ವಿವಾಹ ವಾಗಿ ಅತ್ಯಾಚಾರವೆಸಗಿದ ವ್ಯಕ್ತಿಗೆ ಮೈಸೂರಿನ ನ್ಯಾಯಾಲಯ 10 ವರ್ಷಗಳ ಕಠಿಣ ಸಜೆ ವಿಧಿಸಿದೆ.

ವಿಕ ಸುದ್ದಿಲೋಕ 24 Jun 2017, 9:00 am
ಮೈಸೂರು: ಬಾಲಕಿಯೊಬ್ಬಳನ್ನು ಅಪಹರಿಸಿ ಬಾಲ್ಯ ವಿವಾಹವಾಗಿ ಅತ್ಯಾಚಾರವೆಸಗಿದ ವ್ಯಕ್ತಿಗೆ ಮೈಸೂರಿನ ನ್ಯಾಯಾಲಯ 10 ವರ್ಷಗಳ ಕಠಿಣ ಸಜೆ ವಿಧಿಸಿದೆ.
Vijaya Karnataka Web child marriage rape 10 years sentence
ಬಾಲ್ಯವಿವಾಹ, ಅತ್ಯಾಚಾರ: 10 ವರ್ಷ ಶಿಕ್ಷೆ


ಹುಣಸೂರು ತಾಲೂಕಿನ ಅಂಧನಹಳ್ಳಿಯ ರವಿ ಶಿಕ್ಷೆಗೊಳಗಾದವರು. ಹುಣಸೂರು ಪಟ್ಟಣದ ಹಾಸ್ಟೆಲ್‌ನಲ್ಲಿ ಉಳಿದುಕೊಂಡು ಪ್ರಥಮ ಪಿಯುಸಿ ಅಧ್ಯಯನ ಮಾಡುತ್ತಿದ್ದ 16 ವರ್ಷದ ಸೌಮ್ಯ (ಹೆಸರು ಬದಲಿಸಲಾಗಿದೆ) ದೌರ್ಜನ್ಯಕ್ಕೆ ಒಳಗಾದ ಬಾಲಕಿ.

6ನೇ ಅಪರ ಸತ್ರ ನ್ಯಾಯಾಧೀಶ ವಿ.ಎಂ. ಪಾವಲೆ ಅವರು ರವಿಗೆ ಗುರುವಾರ 10 ವರ್ಷಗಳ ಸಜೆ ಹಾಗೂ 6 ಸಾವಿರ ರೂ. ದಂಡ ವಿಧಿಸಿದ್ದಾರೆ ಎಂದು ವಿಶೇಷ ಸರಕಾರಿ ಅಭಿಯೋಜಕ ಬಿ.ಸಿ. ಶಿವರುದ್ರ ಸ್ವಾಮಿ ವಿಜಯಕರ್ನಾಟಕ ಪತ್ರಿಕೆಗೆ ತಿಳಿಸಿದರು.

ಹಾಸ್ಟೆಲ್‌ನಲ್ಲಿನ ಗೆಳತಿ ಸೌಮ್ಯಳಿಗೆ ತನ್ನ ಹತ್ತಿರದ ಸಂಬಂಧಿ ರವಿಯನ್ನು ಪರಿಚಯ ಮಾಡಿಕೊಟ್ಟಿ ದ್ದಾರೆ. ಈ ಬಳಿಕ ಸೌಮ್ಯಳ ಜೊತೆ ರವಿ ಮಾತು ಮುಂದುವರಿಸಿದ್ದಾನೆ. 2015 ರ ೆ. 13 ರಂದು ಸೌಮ್ಯಳನ್ನು ಬಸ್ ನಿಲ್ದಾಣಕ್ಕೆ ಕರೆಸಿಕೊಂಡು ಮಡಿಕೇರಿಯ ಕಾಲೂರು ಕಾಫಿ ಎಸ್ಟೇಟ್‌ಗೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿದ್ದವರಿಗೆ ಆಕೆಯನ್ನು ತನ್ನ ಹೆಂಡತಿ ಎಂದು ಪರಿಚಿಯಿಸಿದ್ದ ರವಿ, ಪಕ್ಕದ ಹಳ್ಳಿಯ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿ ವಿವಾಹ ಮಾಡಿಕೊಂಡಿದ್ದ. ನಂತರ ಅಲ್ಲಿಯೆ ಕೂಲಿ ಕೆಲಸ ಮಾಡಿಕೊಂಡು ಲೇಬರ್ ಶೆಡ್‌ನಲ್ಲಿ ಉಳಿದುಕೊಂಡು ಒಂದು ತಿಂಗಳು ಸೌಮ್ಯಳ ಮೇಲೆ ಅತ್ಯಾಚಾರವೆಸಗಿದ್ದ. ನಂತರ ಮೈಸೂರಿನ ಹೂಟಗಳ್ಳಿಯಲ್ಲಿ ತನ್ನ ಸಂಬಂಧಿಕರ ಮನೆಯ ಬಳಿ ಬಾಡಿಗೆ ಮನೆ ಮಾಡಿಕೊಂಡು ಒಂದು ತಿಂಗಳು ಉಳಿದುಕೊಂಡಿದ್ದರು. ಈ ವೇಳೆ ಸೌಮ್ಯ ಗರ್ಭಿಣಿಯಾಗಿದ್ದ್ಳು.
ಮತ್ತೊಂದೆಡೆ ಸೌಮ್ಯಳ ತಾಯಿ ಬಾಲಕಿ ಹಾಸ್ಟೆಲ್‌ನಿಂದ ಕಾಣೆಯಾದ ನಂತರದ ದಿನದಂದೇ ಹಾಸ್ಟೆಲ್‌ಗೆ ಹೋಗಿ ವಿಚಾರಿಸಿದ್ದಾರೆ. ಆಕೆ ತನ್ನ ಸ್ನೇಹಿತೆಯ ಮನೆಗೆ ಹೋಗುವುದಾಗಿ ತಿಳಿಸಿ ಹಾಸ್ಟೆಲ್‌ನಿಂದ ಹೋಗಿರುವುದಾಗಿ ಹಾಸ್ಟೆಲ್ ಸಿಬ್ಬಂದಿ ತಿಳಿಸಿದ್ದಾರೆ. ಬಳಿಕ ಸೌಮ್ಯ ತಾಯಿ ಹುಣಸೂರು ಠಾಣೆಯಲ್ಲಿ ದೂರು ನೀಡಿದ್ದರು.

ತನಿಖೆ ನಡೆಸಿದ ಪೊಲೀಸರು ರವಿ ಹಾಗೂ ಸೌಮ್ಯ ಹೂಟಗಳ್ಳಿಯಲ್ಲಿ ರುವುದನ್ನು ಪತ್ತೆಹಚ್ಚಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ರವಿ ಸೌಮ್ಯಳನ್ನು ಅಪಹರಣ ಮಾಡಿ, ಬಾಲ್ಯವಿವಾಹವಾಗಿದ್ದಾನೆ ಎಂದು ತಾಯಿ ಮತ್ತು ಮಗಳು ಹುಣಸೂರು ತಾಲೂಕಿನ ನ್ಯಾಯಾಧೀಶರ ಮುಂದೆ ಹೇಳಿಕೆ ನೀಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ